This is the title of the web page
This is the title of the web page

Live Stream

April 2023
T F S S M T W
 12345
6789101112
13141516171819
20212223242526
27282930  

| Latest Version 8.0.1 |

Local News

ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಜೈನ ಧರ್ಮದ ಸಂದೇಶ ಅಗತ್ಯ – ಲಕ್ಷ್ಮೀ ಹೆಬ್ಬಾಳಕರ್ The message of Jainism is necessary to find happiness, peace and tranquility in the society - Lakshmi Hebbalkar


 

ಬೆಳಗಾವಿ :
ಪ್ರಸ್ತುತ ಸಂದರ್ಭದಲ್ಲಿ ಜೈನ ಧರ್ಮದ ಸಂದೇಶಗಳನ್ನು ಹೆಚ್ಚು ಹೆಚ್ಚು ಪ್ರಚಾರಗೊಳಿಸಬೇಕಾದ ಅಗತ್ಯವಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಮುತ್ನಾಳ ಗ್ರಾಮದಲ್ಲಿ ಶುಕ್ರವಾರ ನಡೆದ ಭಗವಾನ ಶ್ರೀ 1008 ಆದಿನಾಥ ತೀರ್ಥಂಕರ ಜಿನಬಿಂಬ ಪಂಚಕಲ್ಯಾಣ ಮಹಾ ಮಹೋತ್ಸವ ಹಾಗೂ ಭಗವಾನ ಶ್ರೀ ಬಾಹುಬಲಿ ಭವ್ಯ ಪ್ರತಿಮೆಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡುತ್ತಿದ್ದರು. ಇಂದು ಸಮಾಜದಲ್ಲಿ ನಾವು ಬಯಸುವುದು ಶಾಂತಿಯನ್ನು. ತನ್ಮೂಲಕ ಎಲ್ಲರೂ ನೆಮ್ಮದಿಯಿಂದ ಬಾಳುವಂತಾಗಬೇಕು. ಜೈನ ಧರ್ಮದ ಸಂದೇಶದಲ್ಲಿ ಶಾಂತಿ, ಅಂಹಿಂಸೆಗೆ ಮೊದಲ ಆದ್ಯತೆ ನೀಡಲಾಗಿದೆ. ಎಲ್ಲರೂ ಅದನ್ನು ಅಳವಡಿಸಿಕೊಂಡಾಗ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯವಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಭಟ್ಟಾರಕ ಭಟ್ಟಾಚಾರ್ಯ ಸ್ವಸ್ತಿ ಶ್ರೀ ಭಟ್ಟಾಕಲಂಕ ಸ್ವಾಮೀಜಿ ಸೋಂದಾಮಠ, ಪರಮಪೂಜ್ಯ ಭಟ್ಟಾರಕ ಪಟ್ಟಾಚಾರ್ಯ ಸ್ವಸ್ತಿ ಶ್ರೀ ಅಭಿನವ ಲಕ್ಷ್ಮೀಸೇನ ಮಹಾಸ್ವಾಮೀಜಿ, ಕೊಲ್ಹಾಪುರ, ಷ ಭ್ರ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಕೇದಾರ ಶಾಖಾಪೀಠ ಮುತ್ನಾಳ ಇವರು ವಹಿಸಿದ್ದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ರುದ್ರಗೌಡ ಪಾಟೀಲ, ಪಾರಿಶ್ ಪಾರಿಶ್ವಾಡ್, ಅಡಿವೆಪ್ಪಗೌಡ ಪಾಟೀಲ ಹಾಗೂ ಜೈನ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply