This is the title of the web page
This is the title of the web page

Live Stream

April 2023
T F S S M T W
 12345
6789101112
13141516171819
20212223242526
27282930  

| Latest Version 8.0.1 |

Sports News

ಮತ್ತೆ ಸಿಡಿದ ಗಿಲ್ : ಭಾರತಕ್ಕೆ ಸರಣಿ ಗೆಲುವು ! Gill burst again: series win for India!


 

ಅಹಮದಾಬಾದ್ :
ಆರಂಭಿಕ ಭರವಸೆಯ ಬ್ಯಾಟ್ಸ್ಮನ್ ಶುಭಮನ್ ಗಿಲ್ 20-20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕ ಸಾಧನೆ ಮಾಡಿದ್ದಾರೆ. ಅವರ ಅಮೋಘ ಶತಕದ ನೆರವಿನಿಂದ ಭಾರತ ಇಂದು ನಡೆದ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ಎದುರು ಸರಣಿ ಜಯ ಸಾಧಿಸಿದೆ.
ಶುಭಮನ್ ಗಿಲ್ ಅವರು ವಿರಾಟ್ ಕೊಹ್ಲಿ, ಸುರೇಶ್ ರೈನಾ, ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮ ಅವರೊಂದಿಗೆ ಎಲೈಟ್ ಗುಂಪು ಸೇರ್ಪಡೆಗೊಂಡಿದ್ದಾರೆ. ಎಲ್ಲಾ ಮಾದರಿಗಳಲ್ಲೂ ಶತಕ ಬಾರಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. 63 ಎಸೆತಗಳನ್ನು ಎದುರಿಸಿದ ಗಿಲ್ ಅವರು 126 ರನ್ ಗಳಿಸಿದರು. ಅವರು ಶತಕಕ್ಕೆ ಕೇವಲ 54 ಎಸೆತಗಳಲ್ಲಿ ಎದುರಿಸಿದರು. ಬಳಿಕ 50 ರನ್ನುಗಳನ್ನು ಕೇವಲ 19 ಎಸೆತಗಳನ್ನು ತೆಗೆದುಕೊಂಡರು. ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 234 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ರಾಹುಲ್ ತ್ರಿಪಾಠಿ 44, ಹಾರ್ದಿಕ್ ಪಾಂಡ್ಯ 30, ಸೂರ್ಯಕಾಂತಿ ಯಾದವ್ 24, ದೀಪಕ ಹೂಡಾ ಎರಡು ರನ್ ಗಳಿಸಿದರು.

ನ್ಯೂಜಿಲೆಂಡ್ ತಂಡದ ಮಿಚೆಲ್ ಭರ್ಜರಿ ಮೂರು ಸಿಕ್ಸರ್ ನೆರವಿನಿಂದ ರನ್ ಗಳಿಸಿದರು. ಆದರೆ, ನ್ಯೂಜಿಲೆಂಡಿನ ಬೇರಾವ ಆಟಗಾರರು ನಿರೀಕ್ಷಿತ ರನ್ ಗಳಿಸಲಿಲ್ಲ.


Jana Jeevala
the authorJana Jeevala

Leave a Reply