This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ದೇವರಲ್ಲಿ ಭಕ್ತಿ, ಜನರಲ್ಲಿ ಪ್ರೀತಿ ಇದ್ದಾಗ ಜೀವನ ಸಾರ್ಥಕ – ಚನ್ನರಾಜ ಹಟ್ಟಿಹೊಳಿ Life is worthwhile when there is devotion to God and love to people - Channaraja Hattiholi


 

ಬೆಳಗಾವಿ :

ದೇವರಲ್ಲಿ ಭಕ್ತಿ, ಜನರಲ್ಲಿ ಪ್ರೀತಿ ಇದ್ದಾಗ ಜೀವನ ಸಾರ್ಥಕವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಮರಡಿನಾಗಲಾಪೂರ ಗ್ರಾಮದ ಶ್ರೀ ಅಕ್ಕನಾಗಲಾಂಬಿಕೆ ದೇವಸ್ಥಾನದ ಮಹಾದ್ವಾರ ಅಳವಡಿಕೆಯ ಸಲುವಾಗಿ ಕೈಗೊಂಡ ಭೂಮಿ ಪೂಜೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಮನುಷ್ಯನಿಗೆ ದೈವ ಭಕ್ತಿ ಅತ್ಯಂತ ಅಗತ್ಯ. ಸಮಾಜ ಸುಲಲಿತವಾಗಿ ಸಾಗಬೇಕಾದರೆ ದೇವರ ಅನುಗ್ರಹ ಇರಬೇಕು. ಹಾಗೆಯೇ ನಮ್ಮ ಸುತ್ತಮುತ್ತ ಇರುವ ಜನರನ್ನು ಪ್ರೀತಿಸಬೇಕು. ಎಲ್ಲರ ಪ್ರೀತಿ, ವಿಸ್ವಾಸ ಗಳಿಸಿದಾಗ ಮನುಷ್ಯ ಜೀವನಕ್ಕೆ ನಿಜವಾದ ಅರ್ಥಬರುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ರೋಹಿಣಿ ಬಾ ಪಾಟೀಲ, ಯಲ್ಲಪ್ಪ ಕರವಿನಕೊಪ್ಪ, ನಾಗೇಶ ಶಿಂಧೆ, ಸುರೇಶ ಮೇಕಲಮರಡಿ, ಉದ್ದಪ್ಪ ವನ್ನೂರ, ವೀರಪ್ಪ ದೇಶನೂರ ಹಾಗೂ ದೇವಸ್ಥಾನ ಟ್ರಸ್ಟ್ ಕಮೀಟಿಯವರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply