ಬೆಳಗಾವಿ :
ಬೆಳಗಾವಿಯಲ್ಲಿ ಖಾಸಗಿ ಬಸ್ ಬ್ರೇಕ್ ಫೇಲ್ ಆಗಿದ್ದು ಜನ
ಇದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿ ಕಡೆಯಿಂದ ಆರ್ ಟಿಒ ರಸ್ತೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ನ ಬ್ರೇಕ್ ಫೇಲ್ ಆದ ಪರಿಣಾಮ ನಿಂಬಾಳ್ಕರ್ ಬಿಲ್ಡಿಂಗ್ ಒಳಗೆ ನುಗ್ಗಿದೆ. ಆರ್ ಟಿಒ ಸರ್ಕಲ್ನಲ್ಲಿರುವ ಪೊಲೀಸ್ ಇಲಾಖೆ ಹೊಸ ಕಟ್ಟಡದಲ್ಲಿ ಈ ಬಸ್ಸು ನುಗ್ಗಿದ್ದು ಜನ ಇರದ ಕಾರಣ ಅನಾಹುತ ನಡೆದಿಲ್ಲ. ಬ್ರೇಕ್ ಫೇಲ್ ಬಳಿಕ ಚಾಲಕ ಎದುರುಗಡೆಯ ಹನುಮಾನ್ ಮಂದಿರ ತಪ್ಪಿಸಿ ಪಕ್ಕದ ಬಿಲ್ಡಿಂಗ್ ಒಳಗೆ ನುಗ್ಗಿಸಿದ್ದಾನೆ. ಚಾಲಕ ಬ್ರೇಕ್ ಫೇಲ್ ಆದರೂ ಸಹ ಬಸ್ಸನ್ನು ವ್ಯವಸ್ಥಿತವಾಗಿ ತೆಗೆದುಕೊಂಡು ಹೋಗಿ ನಿಲ್ಲಿಸಿರುವುದು ಅಚ್ಚರಿ ಮೂಡಿಸಿದೆ.
ಬೆಳಗಿನ ಜಾವ ಆದಕಾರಣ ವಾಹನ ಹಾಗೂ ಜನಸಂಚಾರ ಅಷ್ಟೊಂದು ಇರದೇ ಯಾವುದೇ ಅನಾಹುತವಾಗಿಲ್ಲ.