Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಿಎಂ ಆಸನಕ್ಕೆ ಉದಯ್ ಲಗ್ಗೆ ..!

ಬೆಂಗಳೂರು: ವಿಧಾನಸಭೆಯಲ್ಲಿ ಒಂದು ಸ್ವಾರಸ್ಯಕರ ಸಂಗತಿ ನಡೆಯಿತು. ಎದುರಾಳಿ ಬಿಜೆಪಿ ಸದಸ್ಯರು ಆಡಳಿತ ಗುಂಪಿನವರನ್ನು ಕಾಡಿದರು. ಅದು ತಮಾಷೆಯ ಸಂಗತಿಗೆ ಮಾತ್ರ ಮೀಸಲಾಯಿತು ! ಮುಖ್ಯಮಂತ್ರಿಗೆ ಮೀಸಲಾದ ಆಸನದಲ್ಲಿ ಕುಳಿತುಕೊಳ್ಳಲು ಬಿಜೆಪಿಯ ಉದಯ ಗರುಡಾಚಾರ್‌ ಮುಂದಾಗುತ್ತಾರೆ. ಆಗ ತಕ್ಷಣ ಕೈ ಅಡ್ಡ ಇಟ್ಟು ತಡೆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದಯ್ ಅವರನ್ನು ಪಕ್ಕಕ್ಕೆ ಎಳೆದ ಅಪರೂಪದ ಪ್ರಸಂಗ ವಿಧಾನಸಭೆಯಲ್ಲಿ ಮಂಗಳವಾರ ನಡೆಯಿತು.

ಶಿವಕುಮಾರ್ ಜೊತೆ ಮಾತನಾಡಲು ಆಡಳಿತ ಪಕ್ಷದ ಸಾಲಿಗೆ ತೆರಳಿದ ಉದಯ್‌ ಗರುಡಾಚಾರ್‌ ಅವರು, ಶಿವಕುಮಾರ್‌ ಅವರ ಎಡಭಾಗದಲ್ಲಿನ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಮುಂದಾದರು. ಆಗ ಉಪಮುಖ್ಯಮಂತ್ರಿ ಶಿವಕುಮಾರ್, ಅವರ ಕೈ ಹಿಡಿದು ತಮ್ಮ ಬಲಭಾಗದಲ್ಲಿದ್ದ ಖಾಲಿ ಆಸನದಲ್ಲಿ ಕುಳಿತುಕೊಳ್ಳುವಂತೆ ಸಮಯ ಪ್ರಜ್ಞೆ ಮೆರೆದರು!

ತಮ್ಮ ತಪ್ಪು ಅರಿವಿಗೆ ಬರುತ್ತಿದ್ದಂತೆ ತಲೆ ಚಚ್ಚಿಕೊಂಡರು ಈ ಉದಯ್‌ ಗರುಡಾಚಾರ್‌ !

ವಿರೋಧ ಪಕ್ಷದ ಸದಸ್ಯರ ಕಡೆಗೆ ನೋಡಿ, ಏನೂ ಮಾತನಾಡಬೇಡಿ ಶ್ಶ್...! ಶ್ಶ್...! ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡು ಸನ್ಹೆ ಮಾಡಿದರು.

ಆದರೂ ಬಿಜೆಪಿಯ ಹಿರಿಯ ಸದಸ್ಯ ಸುನಿಲ್‌ ಕುಮಾರ್‌, ಯಾರೊ ಕೂರಬೇಕು ಎಂದುಕೊಂಡಿರುವ ಕುರ್ಚಿಯಲ್ಲಿ ಹೋಗಿ ನೀವು ಕೂರುತ್ತಿದ್ದೀರಲ್ಲಾ?’ ಎಂದು ಉದಯ್‌ ಮತ್ತು ಶಿವಕುಮಾರ್ ಇಬ್ಬರನ್ನೂ ಕಿಚಾಯಿಸಿದರು.

ಬಳಿಕ ವಿರೋಧ ಪಕ್ಷದ ಸಾಲಿನತ್ತ ಬಂದ ಉದಯ್‌ ಗರುಡಾಚಾರ್‌ ಅವರಿಗೆ ಬುದ್ದಿವಾದ ಹೇಳಿದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ‘ನೀವು ಆ ಸಾಲಿಗೆ ಹೋಗಿದ್ದೇ ತಪ್ಪು. ಹೋಗಿ ಆ ರೀತಿ ಮಾಡೋದಾ?’ ಎಂದರು.

ಒಟ್ಟಾರೆ ಈ ಪ್ರಸಂಗ ವಿಧಾನ ಸಭೆಯಲ್ಲಿ ಹಾಸ್ಯ ಮೊಳಗಲು ಕಾರಣವಾಯಿತು !
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ3 ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳುಸಾವಿರಾರು ಕೋಟಿ ಹೂಡಿಕೆ ಮಾಡಿದವರಿಗೆ ಆತಂಕ :  ICE CREAM ಮಾರುತ್ತಿದ್ದವ ಈ ಪರಿ ಬೆಳೆದದ್ದು ಹೇಗೆ ?ಕೊನೆಗೂ ಶಿವಾನಂದ ನೀಲಣ್ಣವರ ಬಂಧನ..!ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆಕಾನೂನು ವಿದ್ಯಾರ್ಥಿಗಳು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆ