ಕುಂದಾಪುರ:ಉಳ್ಳೂರು 74 ಗ್ರಾಮದಲ್ಲಿ ಜಿಂಕೆ ಕಬಳಿಸಲು ಯತ್ನಿಸಿದ ಎರಡು ಹೆಬ್ಬಾವುಗಳ ಪೈಕಿ ಒಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಹಿಡಿದಿದ್ದಾರೆ. ಎರಡು ಹೆಬ್ಬಾವುಗಳ ಪೈಕಿ ಒಂದು ತಪ್ಪಿಸಿ ಕೊಂಡಿದೆ. ಇನ್ನೊಂದು ಸೆರೆ ಸಿಕ್ಕಿದೆ. ಜಿಂಕೆಯ ಹೊಟ್ಟೆ ಸೇರುವಷ್ಟರಲ್ಲಿ ರಕ್ಷಿಸಲ್ಪಟ್ಟ ಜಿಂಕೆ ಮೃತಪಟ್ಟಿದೆ. ಜಿಂಕೆ ನುಂಗಿದ ಇನ್ನೊಂದು ಹೆಬ್ಬಾವು ಸೆರೆ ಸಿಕ್ಕಿದೆ.
ಗ್ರಾಮ ಅರಣ್ಯ ಸಮಿತಿ ಸದಸ್ಯ ಚಿಟ್ಟೆ ರಾಜ್‌ಗೋಪಾಲ್ ಹೆಗ್ಡೆ ಅವರ ಮನೆ ಎದುರಿನ ಬಯಲಿನಲ್ಲಿ ಎರಡು ದೊಡ್ಡ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದವು. ಅದರಲ್ಲಿ ಒಂದು ಹೆಬ್ಬಾವು ಜಿಂಕೆ ನುಂಗಲು ಯತ್ನಿಸಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಜಿಂಕೆಯನ್ನು ರಕ್ಷಣೆ ಮಾಡುವಷ್ಟರಲ್ಲೇ ಜಿಂಕೆ ಸತ್ತಿದೆ. ಜಿಂಕೆ ನುಂಗಲು ಯತ್ನಿಸಿದ ಹೆಬ್ಬಾವು ತಪ್ಪಿಸಿಕೊಂಡಿದೆ. ಅಲ್ಲೇ ಪಕ್ಕದಲ್ಲೇ ಇನ್ನೊಂದು ಹೆಬ್ಬಾವು ಇನ್ನೊಂದು ಜಿಂಕೆಯನ್ನು ನುಂಗಿ ಮಲಗಿದ್ದು ಫಾರೆಸ್ಟರ್ ಮಂಜುನಾಥ್, ಬೀಟ್ ಗಾರ್ಡ್ ದೇವಾನಂದ ಮತ್ತು ಸಿಬ್ಬಂದಿ, ರಿಕ್ಷಾ ಚಾಲಕ ಕೃಷ್ಣಮೂರ್ತಿ ಅದನ್ನು ಸೆರೆಹಿಡಿದಿದ್ದಾರೆ.
