ಬೆಳಗಾವಿ : ಕೆಎಲ್ ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಡಾ. ಪ್ರಭಾಕರ ಕೋರೆ ಅವರ 79 ನೇ ಹುಟ್ಟುಹಬ್ಬದ ಪ್ರಯುಕ್ತ ಬೆಳಗಾವಿ ವೈಭವ ನಗರದ ನಂದನ ಅನಾಥಾಶ್ರಮಕ್ಕೆ ಭೇಟಿ ನೀಡಿ, ಅನಾಥ ಮಕ್ಕಳಿಗೆ ಹಣ್ಣು ಹಂಪಲ ವಿತರಿಸಲಾಯಿತು.
ಪದವಿ ಪ್ರಾಚಾರ್ಯೆ ಡಾ. ಜ್ಯೋತಿ ಎಸ್ ಕವಳೇಕರ, ಪದವಿಪೂರ್ವ ಪ್ರಾಚಾರ್ಯ ವಿಶ್ವನಾಥ ಕಾಮಗೋಳ, ಉಪ ಪ್ರಾಚಾರ್ಯ ಡಾ.ಸಂದೀಪ ಜವಳಿ, ಡಾ. ವಿನಯ ಕುಮಾರ ಎಂ, ಡಾ. ಶಿವಾನಂದ ಬುಲಬುಲಿ, ಪ್ರೊ. ಎಸ್ .ಬಿ. ತಾರದಾಳೆ ಹಾಗೂ ಶಿವಕುಮಾರ ಗಡಗಲಿ ಉಪಸ್ಥಿತರಿದ್ದರು.