Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಾಣಿಜ್ಯ ಬಳಕೆ ಎಲ್‌ಪಿಜಿ ದರ ಮತ್ತೆ ಇಳಿಕೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದ ಬಳಿಕ ಎರಡನೇ ಬಾರಿಗೆ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರವನ್ನು ಇಳಿಕೆ ಮಾಡಿವೆ.

14.2 ಕೆ.ಜಿ ತೂಕದ ಗೃಹಬಳಕೆಯ ಸಿಲಿಂಡ‌ರ್ ದರ ಯಥಾಸ್ಥಿತಿಯಲ್ಲಿದ್ದು, ₹942 ಇದೆ. ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ವಾಣಿಜ್ಯ ಉದ್ದೇಶಕ್ಕೆ ಬಳಸುವ 19 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡ‌ರ್ ದರ ₹209ರಷ್ಟು ಇಳಿಕೆಯಾಗಿದ್ದು, 2,872 ಆಗಿದೆ.

ಫೆಬ್ರುವರಿ 28ರಂದು ಆರಂಭವಾದ ಪಶ್ಚಿಮ ಏಷ್ಯಾ ಸಂಘರ್ಷದಿಂದ ಕಚ್ಚಾ ತೈಲ ದರವು ಏರಿಕೆಯ ಹಾದಿ ಹಿಡಿದಿತ್ತು. ಇದರಿಂದ ಕಂಪನಿಗಳು ವಾಣಿಜ್ಯ ಸಿಲಿಂಡ‌ರ್ ದರವನ್ನು ಹೆಚ್ಚು ಮಾಡಿದ್ದವು.

ಜುಲೈ 1ರಂದು ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡ‌ರ್ ದರವನ್ನು ₹183.50ರಷ್ಟು ಇಳಿಕೆ ಮಾಡಲಾಗಿತ್ತು. ಕಳೆದ ತಿಂಗಳು ಸಿಲಿಂಡ‌ರ್ ದರವು ₹3,113ಕ್ಕೆ ತಲುಪಿತ್ತು.

ಇದೀಗ ಸಂಘರ್ಷವು ತಿಳಿಗೊಂಡಿರುವ ಕಾರಣದಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿದಿದೆ. ಹೀಗಾಗಿ ದರ ಇಳಿಕೆಗೆ ಕಂಪನಿಗಳು ಮುಂದಾಗಿವೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಣಿಜ್ಯ ಬಳಕೆ ಎಲ್‌ಪಿಜಿ ದರ ಮತ್ತೆ ಇಳಿಕೆಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರಿ ಮಳೆ ಸಾಧ್ಯತೆ !150 ವರ್ಷಗಳ ನಂತರ ಗ್ರಂಥಾಲಯಕ್ಕೆ ವಾಪಸ್ ಬಂದ ಅಪರೂಪದ ಪುಸ್ತಕ ; ಈಗ ಅದರ ದಂಡದ ಮೊತ್ತವೇ ₹19 ಲಕ್ಷ…!ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ; ಆರೆಂಜ್‌-ಯೆಲ್ಲೋ ಅಲರ್ಟ್‌ ಘೋಷಣೆಕಾರು ಹರಿದು 48 ಕುರಿಗಳ ಸಾವುಸರ್ಕಾರ, ಸೊಸೈಟಿಗಳಿಂದ ಪಡೆದ ನಿವೇಶನದಲ್ಲಿ ಐದು ವರ್ಷದೊಳಗೆ ಮನೆ ಕಟ್ಟದಿದ್ದರೆ, ನಿವೇಶನ ಹಿಂಪಡೆಯಲಾಗುವುದು: ಸಿಎಂ ಡಿ ಕೆ ಶಿವಕುಮಾರ್ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಆಗಸ್ಟ್‌ 13ರಂದು ಅಖಂಡ ಕರ್ನಾಟಕ ಬಂದ್‌ವಿಚಿತ್ರ ಕಳ್ಳತನ : ದೇವರ ಕ್ಷಮೆ ಕೋರಿ ದೇವಾಲಯದ ಹುಂಡಿ ದೋಚಿದ ಕಳ್ಳರು…!ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿಸಿ:  ಕೇಂದ್ರ ಸಚಿವರೊಂದಿಗೆ ಸಂಸದ ಶೆಟ್ಟರ ಚರ್ಚೆಮಾಜಿ ಬಸ್ ಚಾಲಕನ ಮನೆಯಲ್ಲಿ ₹28 ಕೋಟಿ ನಗದು, 15 ಕೆಜಿ ಚಿನ್ನ ಪತ್ತೆ….!