ಹಾಸನ : ಮುಡಾ ಹಗರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತುಸು ವಿಚಲಿತಗೊಂಡಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಆಗಾಗ ಭವಿಷ್ಯ ನುಡಿಯುತ್ತಲೇ ಬಂದಿರುವ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಕೆಲ ದಿನಗಳ ಹಿಂದೆ ನುಡಿದ ಭವಿಷ್ಯದಿಂದ ಸಿದ್ದರಾಮಯ್ಯ ಅಭಿಮಾನಿಗಳು ಮತ್ತಷ್ಟು ಆತಂಕ ಪಡುವಂತಾಗಿದೆ. ರಾಜನ ಮೇಲೆ ಭಂಗ ಬೀರಲಿದೆ. ಕೇಂದ್ರ, ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರ ಬದಲಾವಣೆ ಸಾಧ್ಯತೆ ಇದೆ. ಹಾಗೆಂದು ಸರ್ಕಾರಕ್ಕೆ ಏನು ತೊಂದರೆ ಆಗಲ್ಲ ಎಂದು ಸ್ವಾಮೀಜಿ ಇತ್ತೀಚಿಗೆ ಭವಿಷ್ಯ ನುಡಿದಿದ್ದರು. ಈ ನಡುವೆ ಇದೀಗ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದ್ದು ಕೋಡಿಮಠದ ಶ್ರೀಗಳು ಹೇಳುವ ಭವಿಷ್ಯ ಈ ಹಿಂದೆ ಹಲವಾರು ಬಾರಿ ನಿಜವಾಗಿರುವ ಹಿನ್ನೆಲೆಯಲ್ಲಿ ಈಗ ಮತ್ತೊಮ್ಮೆ ಅವರ ಭವಿಷ್ಯ ನಿಜವಾಗುತ್ತದಾ ಎಂಬ ಬಗ್ಗೆ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.