Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ದಿ. 26 ಬಸವ ಜಯಂತಿ ಮೆರವಣಿಗೆ : ಬೆಳಗಾವಿ ಸಂಚಾರ ಮಾರ್ಗ ಬದಲಾವಣೆ; ಸಾರ್ವಜನಿಕರ ಗಮನಕ್ಕೆ 

ಜನ ಜೀವಾಳ ಜಾಲ ಬೆಳಗಾವಿ : ವಿಶ್ವಗುರು ಬಸವೇಶ್ವರ ಜಯಂತಿ ಅಂಗವಾಗಿ ದಿನಾಂಕ: 26/04/2026 ರಂದು ಬೆಳಗಾವಿ ನಗರದ ರಾಣಿ ಚನ್ನಮ್ಮ ವೃತ್ತದಿಂದ ಕಾಕತಿ ವೇಸ್ ರಸ್ತೆ, ಶನಿವಾರ ಕೂಟ, ಗಣಪತಿ ಗಲ್ಲಿ, ಮಾರುತಿ ಗಲ್ಲಿ. ಕಿರ್ಲೋಸ್ಕರ್ ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಕಾಲೇಜ್ ರಸ್ತೆ ಮೂಲಕ ಲಿಂಗರಾಜ್ ಕಾಲೇಜ್ ಮೈದಾನದವರೆಗೆ ಮೆರವಣಿಗೆ ಜರುಗಲಿರುತ್ತದೆ.

ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಕುರಿತು ದಿನಾಂಕ: 26/04/2026 ರಂದು ಸಾಯಂಕಾಲ 04.00 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಈ ಕೆಳಗಿನಂತೆ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಲು ಕೋರಲಾಗಿದೆ.

1) ಕಿಲ್ಲಾ ಕೆರೆ ಅಶೋಕ ಪಿಲ್ಲರ ವೃತ್ತ-ಆರ್‌ಟಿಓ ಸರ್ಕಲ್-ಚನ್ನಮ್ಮ ಸರ್ಕಲ್ ಮಾರ್ಗವಾಗಿ ಕಾಲೇಜ್ ರಸ್ತೆ ಮುಖಾಂತರ ಖಾನಾಪೂರ ಕಡಗೆ ಸಾಗುವ ವಾಹನಗಳು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಎಸ್.ಪಿ. ಆಫೀಸ್ ರಸ್ತೆ ಮಾರ್ಗವಾಗಿ ಕೃಷ್ಣದೇವರಾಯ (ಕೋಲ್ಲಾಪುರ) ವೃತ್ತ, ವಾಯ್-ಜಂಕ್ಷನ್, ಸದಾಶಿವ ನಗರ ಲಕ್ಷ್ಮೀ ಕಾಂಪ್ಲೆಕ್ಸ್, ವಿಶ್ವೇಶ್ವರಯ್ಯ ನಗರ ಬಾಚಿ ಕ್ರಾಸ್, ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಚೌಕ (ಮಿಸ್ಟ್ರಿ ಆಸ್ಪತ್ರೆ ಸರ್ಕಲ್), ಕೇಂದ್ರಿಯ ವಿದ್ಯಾಲಯ ನಂ.2. ಶರ್ಕತ್ ಪಾರ್ಕ. ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪೂರ ರಸ್ತೆಗೆ ಸೇರಿ ಮುಂದೆ ಸಾಗುವುದು.

2) ಖಾನಾಪೂರ ಕಡೆಯಿಂದ ಕಾಂಗ್ರೆಸ್ ರಸ್ತೆ ಮಾರ್ಗವಾಗಿ ಬೆಳಗಾವಿ ನಗರಕ್ಕೆ ಪ್ರವೇಶಿಸುವ ವಾಹನಗಳು ಹಾಗೂ ಗೋಗಟೆ ಸರ್ಕಲ್ ರೈಲ್ವೆ # ಓವರ್ ರಸ್ತೆ ಮುಖಾಂತರ ಬೆಳಗಾವಿ ನಗರಕ್ಕೆ ಪ್ರವೇಶಿಸುವ ವಾಹನಗಳು ಗ್ಲೋಬ್ ಥಿಯೇಟರ್ ಸರ್ಕಲ್ ದಲ್ಲಿ ಎಡತಿರುವ ಪಡೆದುಕೊಂಡು ಗವಳಿ ಗಲ್ಲಿ ಕ್ರಾಸ್, ಶರ್ಕತ್ ಪಾರ್ಕ, ಕೇಂದ್ರಿಯ ವಿದ್ಯಾಲಯ ನಂ.2. ಶೌರ್ಯ ಚೌಕ (ಮಿಳ್ಳಿ ಆಸ್ಪತ್ರೆ ಸರ್ಕಲ್), ಗಾಂಧಿ ಸರ್ಕಲ್ (ಅರಗನ ತಲಾಬ), ಗಣೇಶ ಮಂದಿರ, ಹಿಂಡಲಗಾ ರಸ್ತೆ, ಹನುಮಾನ ನಗರ ಡಬಲ್ ರೋಡ್ ಮೂಲಕ ಬಾಕ್ಷಾಯಿಟ್ ರಸ್ತೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಸೇರುವುದು.

3) ಮೆರವಣಿಗೆ ಮಾರ್ಗದಲ್ಲಿ ಎರಡು ಕ್ಯಾರೇಜ್ ವೇ ಇದ್ದ ಕಡೆಗಳಲ್ಲಿ ಒಂದು ಮಾರ್ಗವನ್ನು ಹಾಗೂ ಒಂದು ಕ್ಯಾರೇಜ್ ವೇ ಇದ್ದ ರಸ್ತೆಯನ್ನು ಸಂಪೂರ್ಣವಾಗಿ ಮೆರವಣಿಗೆಗೆ ಉಪಯೋಗಿಸಲಾಗುವುದು.

4) ໖: 26/04/2026 d ย 04.00 ៨ សំដ ಮುಕ್ತಾಯದವರೆಗೆ ಎಲ್ಲ ದಿಕ್ಕುಗಳಿಂದ ನಗರ ಪ್ರವೇಶಿಸುವ ಭಾರಿ ವಾಹನಗಳನ್ನು ನಗರದಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ.

5) ರಾಣಿ ಚನ್ನಮ್ಮ ವೃತ್ತದಿಂದ ಕಾಕತಿ ವೇಸ್ ರಸ್ತೆ, ಶನಿವಾರ ಕೂಟ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್ ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಕಾಲೇಜ್ ರಸ್ತೆಯಲ್ಲಿ ದಿನಾಂಕ: 26/04/2026 ರಂದು ಸಾಯಂಕಾಲ 04.00 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ