ಜನಜೀವಾಳ ಜಾಲ: ಕೊಲ್ಲಾಪುರ:
ಇತ್ತೀಚೆಗೆ ಕೊಲ್ಲಾಪುರದಲ್ಲಿ ನಿಧನರಾದ ಮಹಾರಾಷ್ಟ್ರದ ಹಿರಿಯ ರಾಜಕಾರಣಿ, ಪಶ್ಚಿಮ ಬಂಗಾಲ ಬಿಹಾರ ಮತ್ತು ತ್ರಿಪುರಾ ರಾಜ್ಯಗಳ ಮಾಜಿ ರಾಜ್ಯಪಾಲ ಡಿ. ವಾಯ್. ಪಾಟೀಲ ಅವರ ಮನೆಗೆ ರವಿವಾರ ಸಂಜೆ ಭೇಟಿ ನೀಡಿದ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಡಿ. ವಾಯ್. ಪಾಟೀಲ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಡಿ ವಾಯ್ ಪಾಟೀಲ ಭಾವಚಿತ್ರಕ್ಕೆ ಪುಸ್ಪ ಅರ್ಪಣೆಮಾಡಿ ಶ್ರದ್ದಾಂಜಲಿ ಸಲ್ಲಿಸಿದರು
ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ನ್ಯಾಯವಾದಿ ರವಿರಾಜ ಪಾಟೀಲ,ಡಿ.ವಾಯ್. ಪಾಟೀಲ
ಪುತ್ರ ಮಹಾರಾಷ್ಟ್ರ ಮಾಜಿ ಮಂತ್ರಿ ಕೋಲ್ಲಾಪುರ ಶಾಸಕ ಸತೇಜ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.