ಬೆಳಗಾವಿ, ಆ. 18: ಬೆಂಗಳೂರಿನಲ್ಲಿ ಆಗಸ್ಟ್ 11 ಮತ್ತು 12ರಂದ ಬೆಂಗಳೂರಿನ ಶ್ರೀ ಕಂಠೀರವ ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ ಜೂನಿಯರ್ ಅಥ್ಲೆಟಿಕ್ ಮೀಟ್ (Athletic Meet)ಜಾವೆಲಿನ್ ಸ್ಪರ್ಧೆಯಲ್ಲಿ ಕೆಎಲ್‌ಇ ಸಂಸ್ಥೆಯ ಜಿ.ಎ. ಹೈಸ್ಕೂಲ್ ವಿದ್ಯಾರ್ಥಿ ಕುಮಾರ ವಿಶಾಲ ಗುರುನಾಥ ರಾಠೋಡ ಅತ್ಯುತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಜಾವೆಲಿನ್ ಎಸೆತದಲ್ಲಿ 54.40 ಮೀಟರ್ ದೂರ ಎಸೆದು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದು ಹೊಸ ದಾಖಲೆಯನ್ನು ನಿರ್ಮಿಸಿದ್ದಾನೆ.
ವಿಶಾಲ ರಾಠೋಡ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಸರ್ವ ಪದಾಧಿಕಾರಿಗಳು, ಮುಖ್ಯೋಧ್ಯಾಪಕರಾದ ಸಿ.ಪಿ. ದೇವಋಷಿ, ದೈಹಿಕ ಶಿಕ್ಷಕರಾದ ಎಸ್ ಜಿ ವೀರಗಂಟಿ ಹಾಗೂ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.