Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ದೆಹಲಿ ಪ್ರತಿಭಟನೆ ಹಿಂದೆ ವಿದೇಶಿ ಶಕ್ತಿಗಳ ಕೈವಾಡ: ಆರ್‌ಎಸ್‌ಎಸ್‌ನ ಇಂದ್ರೇಶ್

ಜಮ್ಮು: ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ 'ವಿದೇಶಿ ಶಕ್ತಿಗಳ' ಕೈವಾಡವಿದೆ ಎಂದು ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಶುಕ್ರವಾರ ಆರೋಪಿಸಿದ್ದಾರೆ.

ಸೋನಮ್ ವಾಂಗ್ಚೂಕ್ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಬೆನ್ನಲ್ಲೇ ಈ ಹೇಳಿಕೆ ನೀಡಿರುವ ಅವರು ಯುವ ಜನರು ತಮ್ಮ ಚಳವಳಿಗಳ ಮೂಲಕ ದೇಶವಿರೋಧಿ ಶಕ್ತಿಗಳ ಏಜೆಂಟರಾಗಬಾರದು ಎಂದು ಸಲಹೆ ನೀಡಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಮ್ ವಾಂಗ್ಚೂಕ್ ಮತ್ತು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ವಿಭಿನ್ನ ಸಂಸ್ಥೆಗಳಾಗಿದ್ದು, ಸಿಜೆಪಿ ವಿದೇಶಿ ಶಕ್ತಿಗಳ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ತಮ್ಮ ಹೋರಾಟವನ್ನು ವಿದೇಶಿಗರು ಕಬಳಿಸಿದ್ದಾರೆ ಎಂಬುದನ್ನು ವಾಂಗ್ಚೂಕ್ ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಅವರು ತಮ್ಮ ಚಳವಳಿಯನ್ನು ಭಾರತೀಯ ನೆಲೆಯಲ್ಲಿ ಇರಿಸಿಕೊಳ್ಳಬೇಕು, ವಿದೇಶಿಯರ ಕೈಗೊಂಬೆಯಾಗಬಾರದು. 
ಪ್ರತಿಭಟನೆಯಲ್ಲಿ ಭಾಗವಹಿಸುವ ಯುವಕರು ಜಾಗರೂಕರಾಗಿರಬೇಕು. ದೇಶಕ್ಕೆ ದ್ರೋಹ ಬಗೆಯುವವರ ಕೈಗೊಂಬೆಯಾಗಬಾರದು ಎಂದು ಅವರು ಕಿವಿಮಾತು ಹೇಳಿದರು.

ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ದೇಶ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಬಾರದು. ಆರಂಭದಲ್ಲಿ ವಿರೋಧ ಪಕ್ಷಗಳು 'ನೀಟ್' ಪರೀಕ್ಷೆಯ ವಿಷಯವನ್ನು ಎತ್ತಿದವಾದರೂ, ನಂತರ ರಾಜಕೀಯ ಲಾಭಕ್ಕಾಗಿ ಹೋರಾಟದ ದಾರಿಯನ್ನೇ ಬದಲಿಸಿದವು ಎಂದು ದೂರಿದರು.

ಇತ್ತೀಚಿನ ವರ್ಷಗಳಲ್ಲಿ ಭಾರತ ಅಪಾರ ಜಾಗತಿಕ ಮನ್ನಣೆ ಗಳಿಸಿದೆ ಎಂದ ಇಂದ್ರೇಶ್ ಕುಮಾರ್, ನಾವೀನ್ಯತೆ ಮತ್ತು ಸಾವಿರಾರು ಸ್ಟಾರ್ಟ್‌ ಅಪ್‌ಗಳ ಮೂಲಕ ಭಾರತ ವಿಶ್ವಕ್ಕೇ ಮಾದರಿಯಾಗುತ್ತಿದ್ದು, ಪ್ರತಿಯೊಬ್ಬರೂ ಸರ್ಕಾರದೊಂದಿಗೆ ಸಹಕರಿಸಬೇಕು ಎಂದರು.

ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಾಕಿಸ್ತಾನವು ಭಾರತದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವುದನ್ನು ಮುಂದುವರಿಸಿದೆ. ಅದು ಕೂಡ ಶಾಂತಿಯಿಂದ ಇರುವುದಿಲ್ಲ, ಇತರರನ್ನೂ ಶಾಂತಿಯಿಂದ ಇರಲು ಬಿಡುವುದಿಲ್ಲ. ಭಾರತವನ್ನು ಅಸ್ಥಿರಗೊಳಿಸುವ ನೀತಿಯನ್ನು ಬಿಟ್ಟು ಪಾಕಿಸ್ತಾನ ಶಾಂತಿ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಹೇಳಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿಯಲ್ಲಿಬಹುಕೋಟಿ ರೂ.ವಂಚನೆ ಪ್ರಕರಣ: ಆರೋಪಿಯ ಬಂಧನಶಾಲಾ ಹಾಸ್ಟೆಲ್‌ನಲ್ಲಿ ಮಲಗಿದ್ದ ವಿದ್ಯಾರ್ಥಿನಿಯರಿಗೆ ಹಾವು ಕಡಿತ; ಮೂವರು ಸಾವು, ಮೂವರು ಗಂಭೀರಬೆಳಗಾವಿಗೆ ಮತ್ತೆ ಅನ್ಯಾಯ : ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಸಿದ್ಧತೆ : ಪ್ರಯಾಣದ ಅವಧಿ 16 ತಾಸುಮೇಯರ್, ಉಪ ಮೇಯರ್ ಪಾಲಿಕೆಯಲ್ಲಿ ರಾಜ್ಯದ ಪರ ಗೊತ್ತುವಳಿ ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ: ಅಶೋಕ ಚಂದರಗಿನಕಲಿ ಹೆಸರಿನಲ್ಲಿ 25 ಮದುವೆ ; ತಮ್ಮ ಅಳಿಯನ ವಿರುದ್ಧವೇ ದೂರು ದಾಖಲಿಸಿದ ಬಿಜೆಪಿ ಶಾಸಕ : ಇಬ್ಬರ ಬಂಧನನಟಿಯ ಮೇಲೆ ಅತ್ಯಾಚಾರ ; 73 ವರ್ಷದ ಸಿನೆಮಾ ನಿರ್ದೇಶಕನ ಬಂಧನʼಪ್ರತಿಭಟನೆ ಪ್ರತಿಧ್ವನಿಸಲಿಲ್ಲ….ʼ : ಕಾಂಗ್ರೆಸ್‌ ಸಂಸದ ಶಶಿ ತರೂರ ಹೇಳಿಕೆಗೆ ಕಾಂಗ್ರೆಸ್‌ ನಾಯಕ ವೇಣುಗೋಪಾಲ ಎಚ್ಚರಿಕೆಜೈಲಿನಲ್ಲಿದ್ದ ಪ್ರಿಯಕರನ ಭೇಟಿಗೆ ಬಂದ ಅಪ್ರಾಪ್ತ ಬಾಲಕಿಯ ಜೇಬಿನಲ್ಲಿ ಸಿಕ್ಕಿತು 10 ಜೀವಂತ ಗುಂಡುಗಳು….!ಭಾರತದಲ್ಲಿ ʼಏಜ್ ವೆರಿಫಿಕೇಷನ್ʼ ಫೀಚರ್‌ ಪರೀಕ್ಷೆಗೆ ಮುಂದಾದ ವಾಟ್ಸ್ಆ್ಯಪ್‌ವಿದೇಶಿ ಉದ್ಯೋಗದ ಆಮಿಷ ; ಪೋರ್ಚುಗಲ್‌ಗೆ ಹೋದ ಭಾರತದ ಯುವತಿ ಬಿಯರ್ ಶಾಪ್‌ ಮಾಲೀಕನಿಗೆ ಮಾರಾಟ….?!