Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಭೀಕರ ಭೂಕುಸಿತ: ಮಣ್ಣಿನಡಿ ಹೂತುಹೋದ ಕ್ಯಾಬ್‌, 13 ಮಂದಿ ದುರ್ಮರಣ

ಚಂಬಾ: ಹಿಮಾಚಲ ಪ್ರದೇಶದ ಲಾಹೌಲ್–ಸ್ಪಿತಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಟಾಟಾ ಸುಮೋ ವಾಹನವು ಬಂಡೆಗಳು ಹಾಗೂ ಮಣ್ಣಿನಡಿ ಸಿಲುಕಿ 13 ಮಂದಿ ಮೃತಪಟ್ಟ ದುರ್ಘಟನೆ ನಡೆದಿದೆ.
ಟಾಟಾ ಸುಮೋ ವಾಹನವು ಕುಲ್ಲುವಿನಿಂದ ಪಾಂಗಿ ಕಡೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಬೆಟ್ಟದಿಂದ ಬೃಹತ್ ಬಂಡೆಗಳು ಉರುಳಿ ಬಿದ್ದು, ವಾಹನ ಸಂಪೂರ್ಣವಾಗಿ ಅದರಡಿ ಹೂತುಹೋಗಿದೆ. ಘಟನೆಯ ದೃಶ್ಯಗಳಲ್ಲಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರ ಮೇಲೆ ಬೃಹತ್ ಪ್ರಮಾಣದ ಮಣ್ಣು ಮತ್ತು ಬಂಡೆಗಳು ಬಿದ್ದಿರುವುದು ಕಂಡುಬಂದಿದೆ. ವಾಹನ ಚಾಲಕನನ್ನು ಬೀರ್ ಸಿಂಗ್ ಎಂದು ಗುರುತಿಸಲಾಗಿದೆ.
ಈ ದುರ್ಘಟನೆಯು ಲಾಹೌಲ್–ಸ್ಪಿತಿ ಜಿಲ್ಲೆಯ ಉದಯಪುರ–ಕಿಲ್ಲಾರ್ ಮಾರ್ಗದ ಕಾಹು-ದು ನಾಲಾ ಸಮೀಪ ನಡೆದಿದೆ. ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆಯೇ ಟಿಂಡಿ ಪೊಲೀಸರು, ಸ್ಥಳೀಯ ಆಡಳಿತ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯ ಆರಂಭಿಸಿದವು.

ರಕ್ಷಣಾ ಕಾರ್ಯಾಚರಣೆಯ ವೇಳೆ ಒಬ್ಬರು ಗಾಯಾಳುಗಳನ್ನು ರಕ್ಷಿಸಲಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಕ್ಕೂ ಮುನ್ನ ಗುರುವಾರ ಮತ್ತೊಂದು ಭೂಕುಸಿತ ಸಂಭವಿಸಿದ್ದ ಹಿನ್ನೆಲೆಯಲ್ಲಿ ಉದಯಪುರ–ಕಿಲ್ಲಾರ್ ರಸ್ತೆ ಬಂದ್ ಮಾಡಲಾಗಿತ್ತು. ಇದರಿಂದ ಈ ವಾಹನದ ಪ್ರಯಾಣಿಕರು ಟಿಂಡಿಯಲ್ಲಿ ತಂಗಿದ್ದರು. ಬಳಿಕ ರಸ್ತೆ ಸಂಚಾರಕ್ಕೆ ಪುನಃಆರಂಭಗೊಂಡ ನಂತರ ಶುಕ್ರವಾರ ಪಾಂಗಿ ಕಡೆಗೆ ಪ್ರಯಾಣ ಆರಂಭಿಸಿದ್ದರು. ಆದರೆ ಮಾರ್ಗಮಧ್ಯೆ ಏಕಾಏಕಿ ಬೆಟ್ಟದ ದೊಡ್ಡ ಭಾಗ ಕುಸಿದು ವಾಹನದ ಮೇಲೆ ಬಿದ್ದ ಪರಿಣಾಮ ಈ ಭೀಕರ ದುರಂತ ಸಂಭವಿಸಿದೆ.

ಸದ್ಯ ಸ್ಥಳದಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಪರಿಸ್ಥಿತಿಯನ್ನು ಜಿಲ್ಲಾಡಳಿತ ಮತ್ತು ಪೊಲೀಸರು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ನಡುವೆ ಲಾಹೌಲ್-ಸ್ಪಿತಿಯಲ್ಲಿ ಈ ಘಟನೆ ಸಂಭವಿಸಿದೆ. ಸ್ಟೇಟ್ ಎಮರ್ಜೆನ್ಸಿ ಆಪರೇಷನ್ ಸೆಂಟರ್ (SEOC) ಪ್ರಕಾರ, ರಾಜ್ಯದಾದ್ಯಂತ 130 ಕ್ಕೂ ಹೆಚ್ಚು ರಸ್ತೆಗಳು ಮುಚ್ಚಲ್ಪಟ್ಟಿವೆ. ಮಂಡಿಯಲ್ಲಿ ಗರಿಷ್ಠ 50 ರಸ್ತೆಗಳು ಹಾನಿಗೊಳಗಾಗಿದ್ದು, ಸಿರ್ಮೌರ್‌ನಲ್ಲಿ 23, ಶಿಮ್ಲಾದಲ್ಲಿ 20, ಚಂಬಾದಲ್ಲಿ 18, ಕುಲುವಿನಲ್ಲಿ 12, ಕಾಂಗ್ರಾದಲ್ಲಿ 6, ಲಾಹೌಲ್ ಮತ್ತು ಸ್ಪಿತಿಯಲ್ಲಿ ಐದು ಮತ್ತು ಬಿಲಾಸ್‌ಪುರ ಮತ್ತು ಉನಾ ಜಿಲ್ಲೆಗಳಲ್ಲಿ ತಲಾ ಒಂದು ರಸ್ತೆಗಳು ಹಾನಿಗೊಳಗಾಗಿವೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ್ಯಾಯಾಲಯವು 24x7 ಮನರಂಜನಾ ವಾಹಿನಿಯಾಗಲು ಸಾಧ್ಯವಿಲ್ಲಸಿಜೆಪಿ ಪ್ರತಿಭಟನೆ ವೇಳೆ ಸುಳ್ಳು ಸುದ್ದಿ ಹರಡುತ್ತಿದ್ದ 480ಕ್ಕೂ ಹೆಚ್ಚು ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಖಾತೆಗಳು ಪತ್ತೆಭೀಕರ ಭೂಕುಸಿತ: ಮಣ್ಣಿನಡಿ ಹೂತುಹೋದ ಕ್ಯಾಬ್‌, 13 ಮಂದಿ ದುರ್ಮರಣದೆಹಲಿ ಪ್ರತಿಭಟನೆ ಹಿಂದೆ ವಿದೇಶಿ ಶಕ್ತಿಗಳ ಕೈವಾಡ: ಆರ್‌ಎಸ್‌ಎಸ್‌ನ ಇಂದ್ರೇಶ್ಬಿಜೆಪಿಯಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಭವನಕ್ಕೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ಕಾರ್ಯಕರ್ತರನ್ನು ಮಧ್ಯದಲ್ಲೇ  ತಡೆದ ಪೊಲೀಸರು ಪುರಾಣ ಪ್ರಸಿದ್ಧ ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನಕ್ಕೆ ನಿರ್ಬಂಧ   ಗಣೇಶನ ಮೂರ್ತಿ ರಕ್ಷಣೆಗೆ ಈ ಕ್ರಮನೀಟ್‌ ಪೇಪರ್ ಲೀಕ್ ವಿವಾದ ; ಶಿಕ್ಷಣ ಇಲಾಖೆ ಕಾರ್ಯದರ್ಶಿ ಹುದ್ದೆಯಿಂದ ವಿನೀತ್ ಜೋಶಿ ಎತ್ತಂಗಡಿ, ಇಬ್ಬರು ಕಾರ್ಯದರ್ಶಿಗಳ ನೇಮಕಕೇಂದ್ರದ ಭರವಸೆ: ಸೊನಮ್ ವಾಂಗ್ಚೂಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್‌ಗೆ  ಬೆಳಗಾವಿ ಮಾರ್ಗದ ಕೂಗು: ಏನಿದು ಹೊಸ ತಿರುವು?ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಇಂದು