Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ನ್ಯಾಯಾಲಯವು 24x7 ಮನರಂಜನಾ ವಾಹಿನಿಯಾಗಲು ಸಾಧ್ಯವಿಲ್ಲ

ನವದೆಹಲಿ: 'ನ್ಯಾಯಾಲಯವು 24x7 ಮನರಂಜನಾ ವಾಹಿನಿಯಾಗಲು ಸಾಧ್ಯವಿಲ್ಲ. ಡಿಜಿಟಲ್ ಮಾಹಿತಿಯ ನಿಯಂತ್ರಣ ಇಂದಿನ ದೊಡ್ಡ ಸವಾಲಾಗಿದೆ' ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ನ್ಯಾಯಾಲಯದ ಕಲಾಪಗಳ ಆಡಿಯೊ-ವಿಡಿಯೊ ದಾಖಲಾತಿಗಳನ್ನು ಪೂರ್ವಾನುಮತಿ ಇಲ್ಲದೆ ಸಾಮಾಜಿಕ ಜಾಲತಾಣಗಳು ಹಾಗೂ ಇತರ ಡಿಜಿಟಲ್ ವೇದಿಕೆಗಳಲ್ಲಿ ಪೋಸ್ಟ್ ಮಾಡುವುದು, ಮರುಹಂಚಿಕೆ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸಕೂಡದು ಎಂದು ಮಧ್ಯಂತರ ಆದೇಶ ನೀಡಿದೆ.

ನ್ಯಾಯಾಂಗ ಕಲಾಪಗಳ ಆಡಿಯೊ-ವಿಡಿಯೊ ದಾಖಲಾತಿಗಳ ದುರುಪಯೋಗ ತಡೆಯುವಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಈ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್‌ನ ಕಾರ್ಯದರ್ಶಿ ಜನರಲ್‌ ಅಥವಾ ಸಂಬಂಧಿತ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರ ಪೂರ್ವಾನುಮತಿ ಪಡೆಯದೆ ನ್ಯಾಯಾಲಯದ ಕಲಾಪಗಳ ಆಡಿಯೊ-ವಿಡಿಯೊವನ್ನು ಸಂಪಾದಿಸುವುದು, ಪ್ರಸಾರ ಮಾಡುವುದು, ಹಣ ಗಳಿಕೆಗಾಗಿ ಬಳಸುವುದು, ಪೋಸ್ಟ್ ಮಾಡುವುದು, ಮರುಪೋಸ್ಟ್ ಮಾಡುವುದು ಹಾಗೂ ಅಪ್‌ಲೋಡ್ ಮಾಡುವುದು ಸಲ್ಲ ಎಂದು ಎಂದು ಪೀಠ ನಿರ್ದೇಶಿಸಿದೆ.

ಆದರೆ, ನ್ಯಾಯಾಲಯದ ಕಲಾಪಗಳ ಕುರಿತು ಮಾಧ್ಯಮಗಳು ಪ್ರಕಟಿಸುವ ಸುದ್ದಿಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಸಂಬಂಧ ಪತ್ರಕರ್ತೆ ಹರ್ಷಿತಾ ಗೋವರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಸರ್ಕಾರ ಹಾಗೂ ಕೆಲವು ಸಾಮಾಜಿಕ ಜಾಲತಾಣಗಳು ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್, ನ್ಯಾಯಾಲಯದ ಕಲಾಪಗಳ ಆಯ್ದ ಭಾಗಗಳನ್ನು ಮಾತ್ರ ಕತ್ತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಅವುಗಳನ್ನು ತಪ್ಪುದಾರಿಗೆಳೆಯುವ ರೀತಿಯಲ್ಲಿ ಬಳಸಲಾಗುತ್ತಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನ್ಯಾಯಾಂಗದ ಘನತೆ ಮತ್ತು ವಿಶ್ವಾಸವನ್ನು ಕಾಪಾಡುವುದು ಅಗತ್ಯವಾಗಿದ್ದು, ಡಿಜಿಟಲ್ ಮಾಹಿತಿಯ ನಿಯಂತ್ರಣ ಈಗಿನ ದೊಡ್ಡ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟಿತು.

ವಿಚಾರಣೆ ವೇಳೆ ಸಾಲಿಸಿಟ‌ರ್ ಜನರಲ್ ತುಷಾರ್ ಮೆಹ್ರಾ, ನ್ಯಾಯಾಲಯದ ವಿಡಿಯೊಗಳನ್ನು ಆಯ್ದ ಭಾಗಗಳಾಗಿ ಹರಡಿ ನಿರ್ದಿಷ್ಟ ಕಥನ ಸೃಷ್ಟಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ್ಯಾಯಾಲಯವು 24x7 ಮನರಂಜನಾ ವಾಹಿನಿಯಾಗಲು ಸಾಧ್ಯವಿಲ್ಲಸಿಜೆಪಿ ಪ್ರತಿಭಟನೆ ವೇಳೆ ಸುಳ್ಳು ಸುದ್ದಿ ಹರಡುತ್ತಿದ್ದ 480ಕ್ಕೂ ಹೆಚ್ಚು ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಖಾತೆಗಳು ಪತ್ತೆಭೀಕರ ಭೂಕುಸಿತ: ಮಣ್ಣಿನಡಿ ಹೂತುಹೋದ ಕ್ಯಾಬ್‌, 13 ಮಂದಿ ದುರ್ಮರಣದೆಹಲಿ ಪ್ರತಿಭಟನೆ ಹಿಂದೆ ವಿದೇಶಿ ಶಕ್ತಿಗಳ ಕೈವಾಡ: ಆರ್‌ಎಸ್‌ಎಸ್‌ನ ಇಂದ್ರೇಶ್ಬಿಜೆಪಿಯಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಭವನಕ್ಕೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ಕಾರ್ಯಕರ್ತರನ್ನು ಮಧ್ಯದಲ್ಲೇ  ತಡೆದ ಪೊಲೀಸರು ಪುರಾಣ ಪ್ರಸಿದ್ಧ ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನಕ್ಕೆ ನಿರ್ಬಂಧ   ಗಣೇಶನ ಮೂರ್ತಿ ರಕ್ಷಣೆಗೆ ಈ ಕ್ರಮನೀಟ್‌ ಪೇಪರ್ ಲೀಕ್ ವಿವಾದ ; ಶಿಕ್ಷಣ ಇಲಾಖೆ ಕಾರ್ಯದರ್ಶಿ ಹುದ್ದೆಯಿಂದ ವಿನೀತ್ ಜೋಶಿ ಎತ್ತಂಗಡಿ, ಇಬ್ಬರು ಕಾರ್ಯದರ್ಶಿಗಳ ನೇಮಕಕೇಂದ್ರದ ಭರವಸೆ: ಸೊನಮ್ ವಾಂಗ್ಚೂಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್‌ಗೆ  ಬೆಳಗಾವಿ ಮಾರ್ಗದ ಕೂಗು: ಏನಿದು ಹೊಸ ತಿರುವು?ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಇಂದು