Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಭಾರತದ ಜನಪ್ರಿಯ ಗಾಯಕಿ ಆಶಾ ಭೋಸ್ಲೆ ನಿಧನ

ಮುಂಬೈ: ಭಾರತದ ಜನಪ್ರಿಯ ಗಾಯಕಿ ಆಶಾ ಭೋಸ್ಲೆ (92) ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಭಾನುವಾರ(ಏ.12) ನಿಧನರಾದರು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಿಳಿಸಿದ್ದಾರೆ. ಅವರಿಗೆ 92 ವರ್ಷವಾಗಿತ್ತು.

ಇತ್ತೀಚೆಗೆ ಹೃದಯ ಸ್ತಂಭನದಿಂದಾಗಿ ಬೀಚ್ ಕ್ಯಾಂಡಿ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಅವರ ಆರೋಗ್ಯ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಈ ಕುರಿತು ಅವರ ಮೊಮ್ಮಗಳು ಜನೈ ಭೋಸ್ಲೆ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಮಾಹಿತಿ ನೀಡಿ ಅಜ್ಜಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದರು.

ಎಂಟು ದಶಕಗಳಿಗೂ ಹೆಚ್ಚು ಕಾಲ ವೃತ್ತಿಜೀವನವನ್ನು ಹೊಂದಿದ್ದ ಆಶಾ ಭೋಸ್ಲೆ, ವಿವಿಧ ಭಾರತೀಯ ಭಾಷೆಗಳಲ್ಲಿ 12 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ವಿಶಿಷ್ಟ ಧ್ವನಿ ಹಾಗೂ ವಿಭಿನ್ನ ಗಾಯನ ಶೈಲಿಯಿಂದಲೇ ಹೆಸರುವಾಸಿಯಾಗಿದ್ದರು. ಅವರಿಗೆ ಪದ್ಮ ವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಅತ್ಯಧಿಕ ರೆಕಾರ್ಡಿಂಗ್ ಹಾಡುಗಳ ಒಡತಿ ಎಂಬ ಗಿನ್ನಿಸ್ ದಾಖಲೆಯನ್ನೂ ಬರೆದಿದ್ದರು.

ಅವರ ಅತ್ಯಂತ ಜನಪ್ರಿಯ ಹಾಡುಗಳಲ್ಲಿ 'ಅಭಿ ನಾ ಜಾವೋ ಛೋಡ್ ಕರ್', 'ಇನ್ ಆಂಖೋನ್ ಕಿ ಮಸ್ತಿ', 'ದಿಲ್ ಚೀಜ್ ಕ್ಯಾ ಹೈ', 'ಪಿಯಾ ತೂ ಅಬ್ ತೋ ಆಜಾ', 'ದುನಿಯಾ ಮೇ ಲೋಗೋನ್ ಕೋ' ಮತ್ತು 'ಜರಾ ಸಾ ಝೂಮ್ ಲೂನ್ ಮೈ' ಸೇರಿದಂತೆ ಹಲವು ಹಾಡುಗಳು ಸೇರಿವೆ. ಮೀನಾ ಕುಮಾರಿ, ಮಧುಬಾಲಾ, ಝೀನತ್ ಅಮಾನ್ ಅವರಿಂದ ಹಿಡಿದು ಕಾಜೋಲ್, ಊರ್ಮಿಳಾ ಮಾತೋಂಡ್ಕ‌ರ್ ಮತ್ತು ದಕ್ಷಿಣದ ನಟಿಯರಾದ ಪದ್ಮನಿ ಮತ್ತು ವೈಜಯಂತಿಮಾಲಾ ಅವರವರೆಗೆ ಅನೇಕ ಖ್ಯಾತ ನಟಿಯರಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.

2023 ರಲ್ಲಿ, ಅವರು ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಲು ದುಬೈನಲ್ಲಿ 'ASHA@90: ಲೈವ್ ಇನ್ ಕಾನ್ಸರ್ಟ್' ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ನೀಡಿದ್ದರು. ಇವರು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಕಿರಿಯ ತಂಗಿಯಾಗಿದ್ದಾರೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆಕಾನೂನು ವಿದ್ಯಾರ್ಥಿಗಳು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆಖ್ಯಾತ ನಟ ದರ್ಶನ್ ಗೆ ಇನ್ನೊಂದು ವರ್ಷ ಜಾಮೀನು ಇಲ್ಲ : ಸುಪ್ರೀಂ ಕೋರ್ಟ್ಸಿದ್ದಾಪುರ : ಸ್ಕೂಟಿಗೆ ಟ್ರ್ಯಾಕ್ಟರ್ ಡಿಕ್ಕಿ ; ಜನಗಣತಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಶಿಕ್ಷಕಿ ಸಾವುಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ದಾರುಣ ಸಾವುಒಂದೇ ಸಲ 224 ವಿಧಾನ ಸಭೆ ಸ್ಥಾನ ಗೆದ್ದು ಸಿಎಂ ಆಗುತ್ತೇನೆ ಎಂದಿದ್ದ ನೀಲಣ್ಣನವರಿಗೆ ಅಧಿಕಾರಿಗಳಿಂದ ಶಾಕ್ ..!ಉತ್ತರ ಪ್ರದೇಶದಲ್ಲಿ ಭೀಕರ ಬಿರುಗಾಳಿ ಮಳೆಗೆ 100ಕ್ಕೂ ಹೆಚ್ಚು ಮಂದಿ ಸಾವುಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ