Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

1 ರೂ.ಗೆ ಶರ್ಟ್ : ಮುಗಿಬಿದ್ದ ಜನ !

ಮಂಗಳೂರು: ಅತ್ಯಂತ ಕಡಿಮೆ ದರದಲ್ಲಿ ಯಾವುದೇ ವಸ್ತು ಸಿಗುತ್ತದೆ ಎಂದರೆ ಯಾರು ಬಿಡುತ್ತಾರೆ. ಈಗಂತೂ ಪೈಪೋಟಿ ಯುಗ. ವ್ಯಾಪಾರಸ್ಥರು ಪೈಪೋಟಿಗೆ ಬಿದ್ದು ಮಾರುಕಟ್ಟೆಯಲ್ಲಿ ತಮ್ಮ ವಸ್ತುಗಳನ್ನು ಮಾರಾಟ ಮಾಡುವುದು ಎಲ್ಲ ಕಡೆ ಗಮನ ಸೆಳೆಯುತ್ತದೆ. ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ ಸೇರಿದಂತೆ ಹಬ್ಬ-ಹರಿದಿನಗಳಲ್ಲಿ ವಿಶೇಷ ರಿಯಾಯಿತಿ ಹಾಗೂ ಕಡಿಮೆ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುವುದು ಎಲ್ಲೆಡೆ ಕಂಡು ಬರುತ್ತದೆ. ಅಂತಹ ಘಟನೆಗೆ ಉಪ್ಪಿನಂಗಡಿ ಸಾಕ್ಷಿಯಾಗಿದೆ.

ಒಂದು ರು.ತನ್ನಿ, ಒಂದು ಪ್ಯಾಂಟ್, ಶರ್ಟ್ ಕೊಂಡೊಯ್ಯಿರಿ ಎಂಬ ಬಟ್ಟೆ ಅಂಗಡಿಯವನ ಬಕ್ರೀದ್ ಕೊಡುಗೆಯನ್ನು ತಮ್ಮದಾಗಿಸಿಕೊಳ್ಳಲು ಜನ ನಸುಕಿನ ಜಾವ 4 ಗಂಟೆಯಿಂದಲೇ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯಲ್ಲಿ ಭಾನುವಾರ ನಡೆದಿದೆ.

ಇಲ್ಲಿನ ಬಸ್ ನಿಲ್ದಾಣದ ಪಕ್ಕದ ಪಂಚಾಯಿತಿ ಸ್ವಾಮ್ಯದ ವಾಣಿಜ್ಯ ಮಳಿಗೆಯಲ್ಲಿರುವ ಒಂದು ಜವಳಿ ಅಂಗಡಿಯಲ್ಲಿ ಗ್ರಾಹಕರನ್ನು ಸೆಳೆಯುವ ಸಲುವಾಗಿ ಈ ಕೊಡುಗೆ ಘೋಷಿಸಲಾಗಿತ್ತು. ಈ ಕೊಡುಗೆ ಜೂನ್ 16ರಂದು ಒಂದು ರು.ನೋಟಿನೊಂದಿಗೆ ಆಗಮಿಸುವ ಮೊದಲ 20 ಗ್ರಾಹಕರಿಗೆ ಮಾತ್ರ ಎಂಬ ಷರತ್ತು ವಿಧಿಸಲಾಗಿತ್ತು.

ಮೊದಲ ಗ್ರಾಹಕರಾಗುವ ಆಸೆಯಿಂದ ನಸುಕಿನ ಜಾವ 4 ಗಂಟೆಗೆ ಎದ್ದು ಬಂದು ಅಂಗಡಿ ಮುಂದೆ ಜನ ನಿಲ್ಲಲಾರಂಭಿಸಿದ್ದಾರೆ. ಮುಂಜಾನೆ 7 ಗಂಟೆಗೆ 20ಕ್ಕೂ ಅಧಿಕ ಮಂದಿ ಸರತಿ ಸಾಲಿನಲ್ಲಿ ನಿಂತಿದ್ದು, ಹಲವು ಮಂದಿ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಗಳ ಸಂಖ್ಯೆಯನ್ನು ಲೆಕ್ಕ ಹಾಕಿ 20 ದಾಟಿರುವುದನ್ನು ದೃಢಪಡಿಸಿಕೊಂಡು ನಿರ್ಗಮಿಸಿದರು. ಇನ್ನು ಕೆಲವರು ತಮಗೂ ದೊರೆಯಬಹುದೆಂದು ಆಸೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು. ಮುಂಜಾನೆ 9 ಗಂಟೆಯ ಸುಮಾರಿಗೆ ಆಗಮಿಸಿದ ಅಂಗಡಿ ಮಾಲಿಕ, ನುಡಿದಂತೆ ಸರತಿ ಸಾಲಿನಲ್ಲಿ ಮೊದಲಾಗಿ ಇದ್ದ 20 ಮಂದಿಗೆ 1 ರು. ಪಡೆದು ಪ್ಯಾಂಟ್, ಶರ್ಟ್ ವಿತರಿಸಿದರು. ಉಳಿದ ಮಂದಿಗೆ ಗ್ರಾಹಕರಾಗಿ ಪ್ಯಾಂಟ್‌, ಶರ್ಟ್ ಖರೀದಿಸಲು ಅವಕಾಶ ಕಲ್ಪಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ