Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕಿತಾಪತಿ ನಡೆಸಿತೇ : ಬಾಂಗ್ಲಾದೇಶದಲ್ಲಿನ ಅಶಾಂತಿ ಹಿಂದೆ ಪಾಕಿಸ್ತಾನದ ಐಎಸ್‌ಐ ಕೈವಾಡ?

ಢಾಕಾ : ಬಾಂಗ್ಲಾದೇಶವು ಭಯೋತ್ಪಾದನಾ ವಿರೋಧಿ ಕಾನೂನಿನಡಿ ಜಮಾತ್-ಎ-ಇಸ್ಲಾಮಿ ಮತ್ತು ಅದರ ವಿದ್ಯಾರ್ಥಿ ಘಟಕವಾದ ಇಸ್ಲಾಮಿ ಛತ್ರ ಶಿಬಿರವನ್ನು ಗುರುವಾರ ನಿಷೇಧಿಸಿತು.

ಮೂಲಭೂತವಾದಿ ಪಕ್ಷವು ಸಾರ್ವಜನಿಕ ಭದ್ರತೆಗೆ ಒಡ್ಡಿರುವ ಬೆದರಿಕೆಯನ್ನು ಉಲ್ಲೇಖಿಸಿ, ಗೃಹ ಸಚಿವಾಲಯದ ಸಾರ್ವಜನಿಕ ಭದ್ರತಾ ವಿಭಾಗವು ಗುರುವಾರ ಇಸ್ಲಾಮಿಸ್ಟ್ ಪಕ್ಷದ ಮೇಲಿನ ನಿಷೇಧವನ್ನು ತನ್ನ ಅಧಿಸೂಚನೆಯಲ್ಲಿ ದೃಢಪಡಿಸಿತು.

ಶೇಖ್ ಹಸೀನಾ ಸರ್ಕಾರವನ್ನು ಉರುಳಿಸಿ, ವಿರೋಧಪಕ್ಷವಾದ ಬಿಎನ್‌ಪಿ ಅಧಿಕಾರಕ್ಕೆ ತರುವಲ್ಲಿ ಪಾಕಿಸ್ತಾನದ ಐಎಸ್‌ಐ ಹಾಗೂ ಸೇನೆ ನಿರಂತರ ಪ್ರಯತ್ನ ನಡೆಸಿದ್ದವು ಎಂಬುದೂ ವರದಿಯಾಗಿವೆ. ಇದಕ್ಕಾಗಿ ಪ್ರತಿಭಟನೆ ಹಾಗೂ ಹಿಂಸಾಚಾರವನ್ನು ಪ್ರಚೋದಿಸಿದ್ದವು ಎಂದೂ ಹೇಳಲಾಗಿದೆ.

ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರು ಸುರಕ್ಷತೆ ಕಾರಣಕ್ಕೆ ಬಾಂಗ್ಲಾದೇಶ ತೊರೆದು ಇದೀಗ ನೆರೆಯ ಭಾರತಕ್ಕೆ ಆಗಮಿಸಿದ್ದಾರೆ. ಹಸೀನಾ ಅವರ ವಿಮಾನ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಲ್ಲಿ ಲ್ಯಾಂಡ್ ಆಗಿದೆ.

ಬಾಂಗ್ಲಾದೇಶದ ಆಡಳಿತ ಚುಕ್ಕಾಣಿಯನ್ನು ಸದ್ಯ ಸೇನೆ ವಹಿಸಿಕೊಂಡಿದ್ದು ಇಷ್ಟರಲ್ಲೇ ಮಧ್ಯಂತರ ಸರ್ಕಾರ ರಚಿಸುವುದಾಗಿ ಘೋಷಣೆ ಮಾಡಿದೆ.

ಬಾಂಗ್ಲಾದೇಶದಲ್ಲಿ ನಡೆದಿರುವ ಅಹಿತಕರ ಘಟನೆಗಳಿಗೆ ಸಂಬಂಧಿಸಿದ ಪಾಕಿಸ್ತಾನದ ಐಎಸ್ಐ ಪರೋಕ್ಷವಾಗಿ ನೆರವಾಗಿರುವ ಅನುಮಾನ ಎಲ್ಲೆಡೆ ದಟ್ಟವಾಗಿ ಹರಡಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪನೆ: ಪ್ರಧಾನಿ ಮೋದಿಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ? ಸಾರ್ವಜನಿಕರನ್ನು ಸತಾಯಿಸುತ್ತಿರುವ ಬಿ ಎಲ್ ಒ ಗಳ ವಿರುದ್ಧ ಕ್ರಮಕ್ಕೆ ಅಗ್ರಹಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ?ದೇಶಾದ್ಯಂತ ಆವರಿಸಿದ ಮೋಡಗಳು ; ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟ ; ಮುಂಗಾರು ಬಲಗೊಳ್ಳುತ್ತಿದೆ ಎಂದ ಹವಾಮಾನ ಇಲಾಖೆನೀಟ್‌ ಹೋರಾಟ : ಯುವ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ಭರವಸೆ ನೀಡಿದ್ರೆ ಉಪವಾಸ ಅಂತ್ಯ ; ಕೇಂದ್ರಕ್ಕೆ ವಾಂಗ್ಚುಕ್ ಷರತ್ತುಕೋಚಿಂಗ್ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರುಆಷಾಢ ಏಕಾದಶಿ ಪ್ರಯುಕ್ತ ಧಾರವಾಡ-ಪಂಡರಪುರ ನಡುವೆ ವಿಶೇಷ ರೈಲು ಸಂಚಾರಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆ, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಮುಂದೂಡಿಕೆಎನ್‌ಡಿಎಗೆ ಎನ್‌ಸಿಪಿ ಬೆಂಬಲದ ವದಂತಿಗಳ ನಡುವೆ ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್–ಸುಪ್ರಿಯಾ ಸುಳೆಗಣಿಕೊಪ್ಪ : ಶಾಸಕ ಬಾಬಾಸಾಹೇಬ ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ಭೋಜನ, ಕಲಿಕಾ ಸಾಮಗ್ರಿ ವಿತರಣೆ