E-PAPER
24 Nov 2026, 04:50:17 PM|
Gold₹12519/gGold24K ₹12,519/g - 22K ₹11,465/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2026 ಸಮಾರೋಪ ಸಮಾರಂಭ:   ಪುಸ್ತಕಗಳು ಉತ್ತಮ ಸಂಗಾತಿಗಳು - ರಾಮಯ್ಯ

ಬೆಳಗಾವಿ: ಪ್ರಯತ್ನಕ್ಕೆ ಫಲವಿದೆ ಎನ್ನುವಂತೆ, ನಿರಂತರ ಓದಿನಿಂದ ಯಶಸ್ಸು ಸಾಧ್ಯ, ಆದ್ದರಿಂದ ಪುಸ್ತಕಗಳನ್ನು ಉತ್ತಮ ಸಂಗಾತಿ ಗಳನ್ನಾಗಿ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನಗರದ ಕೇಂದ್ರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ, ಬೆಳಗಾವಿ ಉಪನಿರ್ದೇಶಕ ರಾಮಯ್ಯ ಹೇಳಿದರು. ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ವತಿಯಿಂದ ಆಚರಿಸಲಾದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭದ  ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ನಾಟಕಕಾರರು,ರಂಗಕರ್ಮಿ,ಸಾಹಿತಿ,ಉಪನ್ಯಾಸಕರು ಮತ್ತು 2026 ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ಎಸ್. ಚೌಗಲೆ ಅವರು ಗ್ರಂಥಾಲಯ ಮತ್ತು ಪುಸ್ತಕಗಳ ಮಹತ್ವದ ಬಗ್ಗೆ ಮಾತನಾಡಿ, ತಮ್ಮದೇ ಶೈಲಿಯಲ್ಲಿ ತಮ್ಮ ನಾಟಕದ ತುಣುಕನ್ನು ಸಹ ಪ್ರಸ್ತುತ ಪಡಿಸಿದರು. 
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ಎಸ್.ಚೌಗಲೆಯವರನ್ನು ಇಲಾಖೆ ಮತ್ತು ನಗರ/ ಜಿಲ್ಲಾ ಕೇಂದ್ರ ಗ್ರಂಥಾಲಯ ವತಿಯಿಂದ ಸನ್ಮಾನಿಸಲಾಯಿತು. ಭರತ ಅಲಸಂದಿ, ಗ್ರಂಥಪಾಲಕರೂ ಮತ್ತು ಉಪ ಪ್ರಾಚಾರ್ಯರು, ಮತ್ತು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ,ಬೆಳಗಾವಿ ಜಿಲ್ಲಾ ಶಾಖೆಯ ಅಧ್ಯಕ್ಷರು, ಗ್ರಂಥಾಲಯಗಳ ಪ್ರಸ್ತುತತೆ ಮತ್ತು ವಿವಿಧ ಸೇವೆಗಳ ಕುರಿತು ಮಾಹಿತಿ ನೀಡಿ ಸಾರ್ವಜನಿಕ ಗ್ರಂಥಾಲಯಗಳ ಸದ್ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದರು.
           
ಡಾ.ನಿರ್ಮಲಾ ಬಟ್ಟಲ, ಪ್ರಾಚಾರ್ಯರು ಮತ್ತು ಸಾಹಿತಿಗಳು,ಮಾತನಾಡಿ ತಮ್ಮ, ಗ್ರಂಥಾಲಯಗಳ ಮತ್ತು ಪುಸ್ತಕಗಳ ಒಡನಾಟದ ಬಗ್ಗೆ ಮಾತನಾಡಿ, ನಮ್ಮ ಜೀವನವನ್ನು ಪುಸ್ತಕಗಳು ಬದಲಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಹೇಳಿದರು. 

ಗ್ರಂಥಾಲಯ ಸಪ್ತಾಹ ಅಂಗವಾಗಿ ನಗರದ ವಿವಿಧ ಶಾಲೆ ಮತ್ತು ಕಾಲೇಜುಗಳಲ್ಲಿ.ಮತ್ತು ಗ್ರಂಥಾಲಯ ಓದುಗರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತ ಮಕ್ಕಳಿಗೆ, ಓದುಗರಿಗೆ ಅತಿಥಿಗಳು ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.
               
ನಗರ ಜಿಲ್ಲಾ ಕೇಂದ್ರ ಗ್ರಂಥಾಲಯದ ಉತ್ತಮ ಓದುಗರಿಗೆ ಪ್ರಶಸ್ತಿ ನೀಡಲಾಯಿತು. ಜೊತೆಗೆ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ,ಉತ್ತಮ ಸಿಬ್ಬಂದಿ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸರಸ್ವತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎ.ಎ. ಕಾಂಬಳೆ ಸ್ವಾಗತಿಸಿದರು. ಸಿದ್ದು ಮೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಅಂಬೇಕರ, ಪ್ರಕಾಶ ಇಚಲಕರಂಜಿ, ವಸಂತ ಚಿತ್ರಗಾರ ನಿರೂಪಿಸಿದರು. ಸುನಿಲಕುಮಾರ ವಂದಿಸಿದರು. ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಬೆಳಗಾವಿಯ ಎಲ್ಲ ಸಿಬ್ಬಂದಿ, ಸಾರ್ವಜನಿಕ ಓದುಗರು,ವಿದ್ಯಾರ್ಥಿಗಳು,ಶಿಕ್ಷಕರು, ಮಾಧ್ಯಮ ಮಿತ್ರರು   ಹಾಜರಿದ್ದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಲ್ಲಿಕಾರ್ಜುನ ಕುಂಬಾರ ಅವರಿಗೆ ಪಿಎಚ್ ಡಿರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2026 ಸಮಾರೋಪ ಸಮಾರಂಭ:   ಪುಸ್ತಕಗಳು ಉತ್ತಮ ಸಂಗಾತಿಗಳು - ರಾಮಯ್ಯಖಾನಾಪುರ ಲೈಲಾ ಸಕ್ಕರೆ ಕಾರ್ಖಾನೆ ವತಿಯಿಂದ ಈ ವರ್ಷ ಕಬ್ಬಿನ ಬೆಲೆ ಪ್ರತಿ ಟನ್‌ಗೆ 4 ಸಾವಿರ ರೂ. ದರ ಘೋಷಣೆ; ನಾಲ್ಕು ಕಂತುಗಳಲ್ಲಿ ಪಾವತಿ ; ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲಪಾಲಿಕೆಯ ತೆರಿಗೆದಾರರಿಗೆ 3 ಜನಸ್ನೇಹಿ ಸೇವೆಗಳು :  ಆಯುಕ್ತ ಕಾರ್ತಿಕ್ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವಿಠ್ಠಲ ಹಲಗೇಕರ ಭೂಮಿಪೂಜೆ ರವಿ ಹಂಜ್ ನಡೆಗೆ - ಡಾ. ಪ್ರಭಾಕರ ಕೋರೆ ತೀವ್ರ ಖಂಡನೆ ʼಬಸವ ಮಂಟಪʼ ರವಿ ಹಂಜ್ ಅವರ ವಿವಾದಿತ ಕೃತಿಯನ್ನು ಖಂಡಿಸಿ,  ಕಠಿಣ ಕ್ರಮ ಕೈಗೊಳ್ಳಲು ಆಗ್ರಹವಿದ್ಯಾರ್ಥಿಗಳಿಗೆ ಇನ್ಮುಂದೆ ಡಿಜಿಟಲ್ ಮಾರ್ಕ್ಸ್‌ಕಾರ್ಡ್ ಲಿಂಗಾಯತರ ಆಕ್ರೋಶಕ್ಕೆ ಗುರಿಯಾದ ವಿವಾದಿತ ಬರಹ ಬರೆದ ರವಿ ಹಂಜ್ ಇಷ್ಟರಲ್ಲೇ ಬೆಳಗಾವಿ ಪೊಲೀಸರ ವಶಕ್ಕೆಹಿರಿಯ ಪತ್ರಕರ್ತ ರಾಜಶೇಖರ ಪಾಟೀಲ ಅವರ ತಾಯಿ ನಿಧನ ಕಾಕತಿಯಲ್ಲಿ ತರಕಾರಿ ತರಲು ಬಂದ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಸರಗಳ್ಳರು