ಬೆಳಗಾವಿ: ಬೆಳಗಾವಿಯ ಪಂತ ನಗರ ನಿವಾಸಿ ಮತ್ತು ಶ್ರೀಮತಿ ಸೋಮವ್ವ ಚನ್ನಬಸಪ್ಪ ಅಂಗಡಿ ಪ್ರಥಮ ದರ್ಜೆ ಕಾಲೇಜು, ಕೆ ಕೆ ಕೊಪ್ಪ ಇಲ್ಲಿಯ ಗ್ರಂಥಪಾಲಕ ಮಲ್ಲಿಕಾರ್ಜುನ ಕುಂಬಾರ ಅವರಿಗೆ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪಿಎಚ್ ಡಿ ನೀಡಿದೆ.
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಅವರು ಮಂಡಿಸಿದ "ಯೂಸ್ ಆಫ್ ಕಾಂಪಿಟೇಟಿವ್ ಎಕ್ಸಾಮಿನೇಷನ ಫೆಸಿಲಿಟಿ ಅಂಡ್ ರಿಸೋರ್ಸ್ ಬೈ ಪಬ್ಲಿಕ್ ಲೈಬ್ರರಿ ಯೂಸರ್ ಇನ್ ಬೆಳಗಾವಿ ಡಿಸ್ಟ್ರಿಕ್ಟ್ - ಏ ಸ್ಟಡಿ" ಈ ಮಹಾಪ್ರಬಂಧಕ್ಕೆ ಪಿಎಚ್ ಡಿ ನೀಡಿದೆ
ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ನಿವೃತ್ತ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ
ವಿನಾಯಕ ಬಂಕಾಪುರ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿದ್ದಾರೆ. ಇವರ ಈ ಸಾಧನೆಗೆ ಮತ್ತು ಬೆಳಗಾವಿಯ ಸಾರ್ವಜನಿಕ ಗ್ರಂಥಾಲಯಗಳ ಬಗ್ಗೆ ಮಹಾಪ್ರಬಂಧ ಮಂಡಿಸಿ, ಡಾಕ್ಟರೇಟ್ ಪದವಿ ಪಡೆದ ಡಾ.ಮಲ್ಲಿಕಾರ್ಜುನ ಕುಂಬಾರ ಅವರಿಗೆ ನಗರದ ಕೇಂದ್ರ ಗ್ರಂಥಾಲಯ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಬೆಳಗಾವಿಯ ಉಪ ನಿರ್ದೇಶಕ ರಾಮಯ್ಯ ಮತ್ತು ಪ್ರಕಾಶ ಇಚಲಕರಂಜಿ,ಅಧೀಕ್ಷಕ ಎ ಎ ಕಾಂಬಳೆ, ಹಿರಿಯ ಶಿಕ್ಷಕಿ ಗಂಗಾ ಚಕ್ರಸಾಲಿ ಮತ್ತಿತರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.