ಬೆಳಗಾವಿ : ತೆರಿಗೆ ಭರ್ತಿ ವಿಧಾನ ಸುಲಭಗೊಳಿಸಲು
ಮಹಾನಗರ ಪಾಲಿಕೆಯಿಂದ
ಮೂರು ಜನಸ್ನೇಹಿ ಸೇವೆಗಳನ್ನು ಆರಂಭಿಸಲಾಗಿದೆ ಎಂದು ಆಯುಕ್ತ ಕಾರ್ತಿಕ್ ಎಂ ತಿಳಿಸಿದರು.
ಮಹಾನಗರ ಪಾಲಿಕೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು,
ತೆರಿಗೆ ಭರ್ತಿ ವಿಧಾನವನ್ನು ಜನಸ್ನೇಹಿಗೊಳಿಸಲು
ವಿಶೇಷ ಸಾಫ್ಟ್ವೇರ್ ಅಳವಡಿಸಲಾಗಿದ್ದು, ಮೊಬೈಲ್ ಮೂಲಕ ಬಲ್ಕ್ ಎಸ್ ಎಮ್ ಎಸ್, ವಾಟ್ಸಾಪ್ ಚಾಟ್ ಬೋಟ್ ಮತ್ತು ಬಿಬಿಪಿಎಸ್ ತೆರಿಗೆ ಕಟ್ಟಲು ಈ 3 ಯಾಪಗಳ ಸೌಲಭ್ಯ ಪಡೆದುಕೊಳ್ಳಬಹುದು.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,71,000 ಆಸ್ತಿಗಳಿವೆ
ತೆರಿಗೆದಾರರಿಗೆ ಬಲ್ಕ ಎಸ್ಎಂಎಸ್ ಮೂಲಕ ಮಾಹಿತಿ ಕಳಿಸಲಾಗುವುದು
ಈ ಮೂಲಕ ಅವರು ತಮ್ಮ ಬಾಕಿ ತೆರಿಗೆಯ ಮಾಹಿತಿ ಪಡೆದು ಕಟ್ಟಬಹುದು.
ವಾಟ್ಸಾಪ್ ಚಾಟ್ ಬೋಟ್ (ನಂ:7090022888)ಇದು ಈಗಾಗಲೇ ಕಟ್ಟಿರುವ ತೆರಿಗೆ , ಬಾಕಿ ಹಾಗೂ ಪ್ರಸ್ತುತ ಕಟ್ಟ ಬೇಕಾಗಿರುವ ತೆರಿಗೆ ಇದರ ಮಾಹಿತಿ ನೀಡುತ್ತದೆ.ಇಲ್ಲಿ ಬಾಕಿ ತೆರಿಗೆಯನ್ನು ಕಟ್ಟಿದರೆ ಮಾತ್ರ ಪ್ರಸ್ತುತ ತೆರಿಗೆ ಕಟ್ಟಲು ಯಾಪ್ ಸಾತ್ ನೀಡುತ್ತದೆ.
ಬಿಬಿಪಿಎಸ್ ಈ ಸೌಲಭ್ಯದಲ್ಲಿ ಪೇಟಿಎಂ, ಗೂಗಲ್ ಪೇ, ಹಾಗೂ ಫೋನ್ ಪೇ ಮೂಲಕ ತೆರಿಗೆ ಕಟ್ಟಬಹುದು
ಮಹಾನಗರದ ತೆರಿಗೆದಾರರು ಉತ್ತರ, ದಕ್ಷಿಣ, ಮಧ್ಯ, ಬೆಳಗಾವಿ-1 ಅಥವಾ ಕಂಪ್ಯೂಟರ್ ಕೇಂದ್ರಗಳಿಗೆ ಹೋಗದೆ
ತಮ್ಮ ಮನೆಯಲ್ಲಿಯೇ ಕುಳಿತು
ಮೂರೂ ಸೌಲಭ್ಯಗಳನ್ನು ಬಳಸಿಕೊಂಡು ಮೊಬೈಲ್ ಮೂಲಕ ಮನೆ, ವಾಣಿಜ್ಯ ಹಾಗೂ ಕೈಗಾರಿಕೆ
ಮುಂತಾದ ತೆರಿಗೆಗಳನ್ನು ಕಟ್ಟಬಹುದು. ಅಲ್ಲದೆ ತೆರಿಗೆಗೆ ಸಂಬಂಧಪಟ್ಟ ಮಾಹಿತಿಯನ್ನು ಸಹ ಪಡೆಯಲು ಸಾಧ್ಯವಾಗುತ್ತದೆ. ಈ ಮೂಲಕ ನಾಗರಿಕರ ಸಮಯ ಉಳಿತಾಯವಾಗಿ ಸರಿಯಾದ ಸಮಯಕ್ಕೆ ತೆರಿಗೆ ಕಟ್ಟಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ 3 ಸೌಲಭ್ಯಗಳ ಸದುಪಯೋಗಪಡಿಸಿ ಕೊಳ್ಳುವುದರ ಮೂಲಕ ನಾಗರಿಕರು ಉತ್ತಮ ತೆರಿಗೆದಾರರಾಗಲು ಸಾಧ್ಯವಾಗುತ್ತದೆ . ಅಭಿವೃದ್ಧಿ ಕಾರ್ಯಗಳು ನಾಗರಿಕರು ಕಟ್ಟುವ ತೆರಿಗೆಯನ್ನು ಅವಲಂಬಿಸಿದ್ದು, ಸಮಯಕ್ಕೆ ಸರಿಯಾಗಿ ತೆರಿಗೆ ಕಟ್ಟುವುದರ ಮೂಲಕ ನಗರದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಹೇಳಿದರು.
ಪಾಲಿಕೆ ಕಂದಾಯ ಶಾಖೆ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ, ಅಭಿವೃದ್ಧಿ ಶಾಖೆ ಉಪ ಆಯುಕ್ತ ಲಕ್ಷ್ಮೀ ನಿಪ್ಪಾಣಿಕರ್ ಇತರರು ಇದ್ದರು.