ಕಿಚ್ಚ ಸುದೀಪ್ ಅವರ ತಾಯಿ ನಿಧನ
ಬೆಂಗಳೂರು : ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸರೋಜಾ ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸುದೀಪ್ ಅವರ ಜೆಪಿ ನಗರ ನಿವಾಸಕ್ಕೆ ತರಲಾಗುವುದು. ಅಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಲಿದೆ.
ಸರೋಜಾ ಅವರು ಮಂಗಳೂರು ಮೂಲದವರು. ವಿಕ್ರಾಂತ್ ರೋಣ ಸಿನಿಮಾ ಸಮಯದಲ್ಲಿ ಈ ಬಗ್ಗೆ ಮಾತನಾಡಿದ್ದ ಸುದೀಪ್, ‘ನನ್ನ ತಾಯಿ ಮಂಗಳೂರು ಮೂಲದವರು, ಅವರ ಮಾತೃಭಾಷೆ ತುಳು. ನನಗೆ ಆ ಭಾಷೆ ಬಹಳ ಇಷ್ಟ. ನಾನು ಸಾಕಷ್ಟು ಕೇಳಿಸಿಕೊಂಡಿದ್ದೇನೆ ಆದರೆ ನನಗೆ ಮಾತನಾಡಲು ಬರುವುದಿಲ್ಲ ಎಂದಿದ್ದರು.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.