Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರೈಲು ಪ್ರಯಾಣಿಕರಿಗೆ ನೀಡಲಾಗುವ ಹೊದಿಕೆಗಳನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತಿದೆ ?

ಹೊಸದಿಲ್ಲಿ: ''ರೈಲು ಪ್ರಯಾಣಿಕರಿಗೆ ನೀಡಲಾಗುವ ಹೊದಿಕೆಗಳನ್ನು ತಿಂಗಳಿಗೊಮ್ಮೆ ತೊಳೆಯಲಾಗುತ್ತಿದೆ ಮತ್ತು ಹಾಸಿಗೆಯ ಹೊದಿಕೆಯಾಗಿ ಅದರ ಬಳಕೆಗಾಗಿ ಹೆಚ್ಚುವರಿ ಬೆಡ್‌ಶೀಟ್‌ ಅನ್ನು ಬೆಡರೋಲ್ ಕಿಟ್‌ನಲ್ಲಿ ನೀಡಲಾಗುತ್ತದೆ'' ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ.

ಮೂಲ ನೈರ್ಮಲ್ಯ ಮಾನದಂಡಗಳನ್ನು ಪೂರೈಸುವ ಹಾಸಿಗೆಗಳಿಗೆ ಪ್ರಯಾಣಿಕರು ಪಾವತಿಸುತ್ತಿದ್ದರೂ, ಉಣ್ಣೆಯ ಹೊದಿಕೆಗಳನ್ನು ತಿಂಗಳಿಗೊಮ್ಮೆ ಮಾತ್ರ ತೊಳೆಯಲಾಗುತ್ತದೆಯೇ ಎಂಬ ಕಾಂಗ್ರೆಸ್ ಸಂಸದ ಕುಲದೀಪ್ ಇಂದೋರಾ ಪ್ರಶ್ನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಲೋಕಸಭೆಯಲ್ಲಿ ಉತ್ತರಿಸಿದ್ದಾರೆ.

ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ಬಳಸಲಾಗುವ ಕಂಬಳಿಗಳು ಹಗುರವಾಗಿದ್ದು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡುತ್ತದೆ. ಜತೆಗೆ ಇದನ್ನು ಸುಲಭವಾಗಿ ತೊಳೆಯಬಹುದು. ಯಾಂತ್ರೀಕೃತ ಲಾಂಡ್ರಿ ವ್ಯವಸ್ಥೆ ಇದ್ದು, ಗುಣಮಟ್ಟದ ಯಂತ್ರಗಳ ಬಳಕೆ, ಬಟ್ಟೆ ತೊಳೆಯಲು ನಿರ್ದಿಷ್ಟ ರಾಸಾಯನಿಕಗಳ ಬಳಕೆ ಸೇರಿ ಪ್ರಯಾಣಿಕರ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ.

ಪ್ರಯಾಣಿಕರ ಅನುಕೂಲತೆಗೆ ಸಂಬಂಧಿಸಿ ಭಾರತೀಯ ರೈಲ್ವೆಯಲ್ಲಿ ಹಲವು ಸೌಲಭ್ಯಗಳಿವೆ. ತೊಳೆದ ಬಟ್ಟೆಗಳ ಗುಣಮಟ್ಟ ಪರಿಶೀಲಿಸಲು ವೈಟೋ-ಮೀಟರ್‌ಗಳನ್ನು ಬಳಸಲಾಗುತ್ತದೆ. ಬೆಡ್‌ರೋಲ್‌ಗಳನ್ನು ಪರಿಸರ ಸ್ನೇಹಿ ಪ್ಯಾಕೇಜಿಂಗ್ ಮಾಡಲಾಗುತ್ತದೆ. ಜತೆಗೆ ಸುಧಾರಿತ ಲಾಜಿಸ್ಟಿಕ್ ವ್ಯವಸ್ಥೆಯಲ್ಲಿ ಸಾಗಿಸಲಾಗುತ್ತದೆ. ಲಿನಿನ್/ಬೆಡ್‌ರೋಲ್‌ಗೆ ಸಂಬಂಧಿಸಿದ ದೂರುಗಳು ಹಾಗೂ ರೈಲ್‌ಮದಾದ್ ಆ್ಯಪ್‌ನಲ್ಲಿ ದಾಖಲಾಗಿರುವ ದೂರುಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ವಲಯ ಪ್ರಧಾನ ಕಛೇರಿ ಮತ್ತು ವಿಭಾಗೀಯ ಮಟ್ಟದಲ್ಲಿ ವಾರ್ ರೂಮ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿಜೆಪಿಯಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಭವನಕ್ಕೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ಕಾರ್ಯಕರ್ತರನ್ನು ಮಧ್ಯದಲ್ಲೇ  ತಡೆದ ಪೊಲೀಸರು ಪುರಾಣ ಪ್ರಸಿದ್ಧ ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನಕ್ಕೆ ನಿರ್ಬಂಧ   ಗಣೇಶನ ಮೂರ್ತಿ ರಕ್ಷಣೆಗೆ ಈ ಕ್ರಮನೀಟ್‌ ಪೇಪರ್ ಲೀಕ್ ವಿವಾದ ; ಶಿಕ್ಷಣ ಇಲಾಖೆ ಕಾರ್ಯದರ್ಶಿ ಹುದ್ದೆಯಿಂದ ವಿನೀತ್ ಜೋಶಿ ಎತ್ತಂಗಡಿ, ಇಬ್ಬರು ಕಾರ್ಯದರ್ಶಿಗಳ ನೇಮಕಕೇಂದ್ರದ ಭರವಸೆ: ಸೊನಮ್ ವಾಂಗ್ಚೂಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್‌ಗೆ  ಬೆಳಗಾವಿ ಮಾರ್ಗದ ಕೂಗು: ಏನಿದು ಹೊಸ ತಿರುವು?ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಇಂದುಪ್ರಬಲ ಎಲ್ ನಿನೋ’ ನಡುವೆಯೂ ಭಾರತದ ಶೇ.95 ಭಾಗ ಮೋಡಗಳಿಂದ ಆವೃತ : ಮಳೆಗಾಲದ ಹಿಂದಿನ ವೈಜ್ಞಾನಿಕ ರಹಸ್ಯವೇನು ?ಮಳೆರಾಯನ ಆರ್ಭಟಕ್ಕೆ ತತ್ತರಿಸಿದ ಗುಜರಾತ್: ಹಲವು ನಗರಗಳು ಜಲಾವೃತ, ಗ್ರಾಮಗಳ ಸಂಪರ್ಕ ಕಡಿತ, ನೂರಾರು ಜನರ ಸ್ಥಳಾಂತರರಾಜಕೀಯ ಪ್ರಚೋದನೆಗೆ ವಿದ್ಯಾರ್ಥಿಗಳು ಬಲಿಯಾಗಬೇಡಿ: ಬಿಜೆಪಿ ಮುಖಂಡ ಕಿರಣ ಜಾಧವನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ