Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹೋಳಿ ಅಲ್ಲ ಹೋ-ಲಿ

ಅಸುರೀ ಶಕ್ತಿಗಳ ಮೇಲೆ ದೈವೀ ಗುಣಗಳ ವಿಜಯದ ಸಂಕೇತವಾಗಿ ಪ್ರತಿ ರ‍್ಷ ಹೋಳಿ ಹಬ್ಬ ಆಚರಿಸಲಾಗುತ್ತದೆ. ಹೋಳಿ ಹಬ್ಬದ ದಿನ ಕಟ್ಟಿಗೆ ಮತ್ತು ಕಾಮಣ್ಣ ಮತ್ತು ರತಿದೇವಿಯ ಗೊಂಬೆ ನನ್ನು ಸುಡುವುದು ಪ್ರಚಲಿತವಾಗಿದೆ. ವಾಸ್ತವಿಕವಾಗಿ ನಮ್ಮಲ್ಲಿರುವ ಸಿಟ್ಟು, ತಿರಸ್ಕಾರ, ಅನೇಕ ಪ್ರಕಾರದ ಹಳೆಯ ಸ್ವಭಾವ ಸಂಸ್ಕಾರ ಗಳನ್ನು ಸುಟ್ಟುಹಾಕಿದಾಗ ಹೋಳಿಯನ್ನು ಆಚರಿಸುವುದರಂತೆ.

ಹೋಳಿ ಹಬ್ಬ ಭಾರತ ದೇಶದ ಅನೇಕ ಪ್ರಾಂತಗಳಲ್ಲಿ ಮತ್ತು ದೇಶವಿದೇಶಗಳಲ್ಲಿ ಆಚರಿಸಲಾಗುತ್ತದೆ.

ಮಾಘ ಮಾಸದ ಹುಣ್ಣಿಮೆಯ ದಿನ “ಹೋಳಿ, ಶಿಮಗ, ಹೋಲಿ ಮತ್ತು ಪಂಚಮಿಯ ದಿನ ಬಣ್ಣದ ಹಬ್ಬ ಓಕಳಿ ವೈವಿಧ್ಯ ಬಣ್ಣಗಳಿಂದ ಗುಲಾಲದಿಂದ ಆಟ ಆಡುತ್ತಾರೆ. ನೇಪಾಳಿ,ಪಂಜಾಬಿ ಭಾಷೆಯಲ್ಲಿ'ಹೋಲಿ '' ಅಸ್ಸಾಂ
ದಲ್ಲಿ ಭಾಗವತ್'' ಒರಿಸ್ಸಾದಲ್ಲಿ ಬಂಗಾಳ ದಲ್ಲಿ ''ವಸಂತೋತ್ಸವ ಎಂದು ಹೋಳಿ ಹಬ್ಬ ವಿಶೇಷವಾಗಿರುತ್ತದೆ. ಕೃಷ್ಣ ಹುಟ್ಟಿದ ಸ್ಥಳದಲ್ಲಿ ಮಥುರಾ ಬೃಂದಾವನದಲ್ಲಿ 16 ದಿನಗಳ ವರೆಗೆ ಹೋಳಿ ವಿಶೇಷವಾಗಿರುತ್ತದೆ. ಬಾಂಗ್ಲಾದೇಶ, ಪಾಕಿಸ್ತಾನ, ಗಯಾನಾ, ಟ್ರಿನಿಡಾಡ್, ಜಪಾನ್, ದಕ್ಷಿಣ ಆಫ್ರಿಕಾ, ಮಲೇಷಿಯಾ, ಆಮೇರಿಕಾ, ಪಿಜಿನಲ್ಲಿ ಹೋಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೋಳಿ ಹಬ್ಬವು ಯಾವುದೇ ಜಾತಿ ಭೇದವಿಲ್ಲದೆ, ಎಲ್ಲಾ ಮಾನವರಲ್ಲಿ ಜೀವನದ ಸಂತೋಷ ಸುಖಗಳನ್ನು ಹಂಚುವ ಹಬ್ಬವಾಗಿದೆ.

ಹೋಳಿ ಹಬ್ಬದ ಹಿಂದಿರುವ ಕಥೆಗಳು
ಶಿವ ಮತ್ತು ಕಾಮದೇವನ ಬಗ್ಗೆ ಒಂದು ಕಥೆ ಇದ್ದರೆ ಮತ್ತೊಂದು ಕಥೆ ಶ್ರೀ ಕೃಷ್ಣ ಮತ್ತು ಪುತನಿಯ ಬಗ್ಗೆ ಇದೆ. ಪ್ರಹ್ಲಾದ ಮತ್ತು ಹಿರಣ್ಯಕಶ್ಯಪ್ ಬಗ್ಗೆ ಮತ್ತೊಂದು ಕಥೆ ಇದೆ.

ಕೃಷ್ಣ ರಾಧೆಯನ್ನು ಪ್ರೀತಿಸುವುದನ್ನು ಚಿತ್ರಿಸಲು ಮುಂದಾಗುತ್ತಾನೆ. ಅಲ್ಲಿನ ಗೋಪಿಯರು ಬಣ್ಣಿಸುತ್ತಾನೆ. ಆ ಸಮಯದಲ್ಲಿ ಗೋಪಿಯರು ಕೃಷ್ಣನಿಗೆ ಕೋಲಗಳಿಂದ ಹೊಡೆಯಲು ಬೆನ್ನಟ್ಟುತ್ತಾರೆ. ಉತ್ತರಪ್ರದೇಶದಲ್ಲಿ ದ್ವಾರಕಾ ಮತ್ತು ಮಥುರಾದಲ್ಲಿ ಹೋಳಿ ಆಚರಣೆಯ ವೇಳೆ ಈ ಸಂಪ್ರದಾಯವನ್ನು ಪಾಲಿಸಲಾಗುತ್ತದೆ. ಇದಕ್ಕೆ ಲಾಟ್ಮಾರ್ ಹೋಳಿ ಎಂದು ಕರೆಯುತ್ತಾರೆ.

ಶೀತ ಋತುವಿನ ಅಂತ್ಯ ಮತ್ತು ವಸಂತ ಋತುವಿನ ಸ್ವಾಗತವು ಆ ದಿನದಿಂದ ಪ್ರಾರಂಭವಾಗುತ್ತದೆ. ಹವಾಮಾನದಲ್ಲಿ ಹಠಾತ ಬದಲಾವಣೆಯು ರ‍್ಮವನ್ನು ಕೇಳಿಸುತ್ತದೆ. ಆ ಸಮಯದಲ್ಲಿ ಬಣ್ಣಗಳನ್ನು ಹಿರಿಚಿವುದರಿಂದ ಕಿರಿಕಿರಿ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
ನಿರಾಕಾರ ಭಗವಂತನಾದ ಶಿವನು ಹೋಳಿ ಈ ಶಬ್ದದ ಆಧ್ಯಾತ್ಮಿಕ ರಹಸ್ಯ ಹೇಳಿದ್ದಾರೆ. “ಹೋಲಿ” ಅಂದರೆ ಕಳೆದು ಹೋಗಿದ್ದು ಕಳೆದೊಯ್ತು .ಅದರ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಮುಂದೆ ಮಾಡುವ ರ‍್ಮಗಳು ಯೋಗಯುಕ್ತವಾಗಿರಬೇಕು. ಹೋಳಿಯೆಂದರೆ ನಾನು ಶಿವನಿಗೆ ಸ್ಮರಣೆ ಆದೆನೋ. ಯಾವುದೇ ಸ್ಮರಣೆಗಳನ್ನು ಮಾಡುವಾಗ ಈಶ್ವರನ ಮತ ತಕ್ಕಂತೆ ಮಾಡಬೇಕು. ಹೋಲಿಯೆಂದರೆ ಪವಿತ್ರ. ಯಾವುದೇ ಕರ್ಮಗಳನ್ನು ವಿಕಾರಕ್ಕೆ ವಶನಾಗಿ ಮಾಡದೆ, ಪವಿತ್ರ ಬುದ್ದಿಯಿಂದ ಮಾಡಬೇಕು.

ಹೋಳಿ ಹಬ್ಬದ ದಿನ ವಿಶೇಷ ಗಮನವಿರಲಿ.
1.ಯಾವುದೇ ಅಪರಿಚಿತ ವ್ಯಕ್ತಿಗಳ ಮೇಲೆ ಅವರ ಅಪ್ಪಣೆ ಇಲ್ಲದೆ ಬಣ್ಣ ಹಾಕುವುದು ಬೇಡ.
2. ರಾಸಾಯನಿಕ ಬಣ್ಣಗಳು ಸಗಣಿ ಡಾಂಬರ್ ಪೈಂಟ್ ಬಳಸದೆ ಇರುವುದು ಅತ್ಯುತ್ತಮ. ಇದರಿಂದ ಶಾರೀರಿಕ ಹಾನಿ ಆಗಬಹುದು.
3. ಸಾಧ್ಯವಾದಷ್ಟು ನೈಸರ್ಗಿಕ ಬಣ್ಣ ಬೀಟ್ರೂಟ್, ಗುಲಾಲ್, ಅರಿಶಿಣ, ಪಾಲಕ ಸೊಪ್ಪು, ಮುಂತಾದ ಬಣ್ಣಗಳನ್ನು ಉಪಯೋಗಿಸಿ.
4. ಅನೇಕ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗದೆ ಇರಲಿ. ಹಲಗೆ ಬಾರಿಸುವುದು ಕೂಗುವುದು ಕಡಿಮೆ ಇರಲಿ.
5. ಅವಶ್ಯಕ ಸರಕಾರಿ ಕಾಯಕಗಳಿಗೆ ಹೋಗುವವರಿಗೆ ಬಣ್ಣ ಹಾಕುವುದು ಬೇಡ.

-ವಿಶ್ವಾಸ ಸೋಹೋನಿ,
ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್ಸ್
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ