ಬೆಳಗಾವಿಯಲ್ಲಿ ಹೆಣ್ಣು ಮಗು ಮಾರಾಟ ಪ್ರಕರಣ ಬಯಲು
ಬೆಳಗಾವಿ: ಬೆಳಗಾವಿಯಲ್ಲಿ ಸುಮಾರು ಎರಡು ವರ್ಷ ಪ್ರಾಯದ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಸಾಂಗ್ಲಿ ಮೂಲದ ದಂಪತಿ ಗೋವಾ ಮೂಲದ ಮಹಿಳೆಗೆ ಮಗುವನ್ನು ಸುಮಾರು 4.50 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದರು. ಜೋಯಿಡಾ ತಾಲೂಕಿನ ರಾಮನಗರದಲ್ಲಿ ಮಗುವನ್ನು ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಬೆಳಗಾವಿಯ ಮಕ್ಕಳ ರಕ್ಷಣಾ ಸಹಾಯವಾಣಿಗೆ ಬಂದ ಕರೆಯಿಂದಾಗಿ ಇಡೀ ಪ್ರಕರಣ ಬಯಲಾಗಿದೆ. ಇದೀಗ ಮಗುವನ್ನು ಸ್ವಾಮಿ ವಿವೇಕಾನಂದ ಮಕ್ಕಳ ದತ್ತು ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ. ಮಾರ್ಕೆಟ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ಇದರಲ್ಲಿ ಭಾಗಿಯಾಗಿರುವ ಮಧ್ಯವರ್ತಿಗಳು ಈ ಹಿಂದೆ ಇಂತಹ ಪ್ರಕರಣಗಳನ್ನು ನಡೆಸಿದ್ದಾರೆ ಎಂಬ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯ ರಾಜೇಂದ್ರ ಮೇತ್ರಿ, ಶಿಲ್ಪಾ ಮೇತ್ರಿ, ಗೋವಾದ ಸ್ಮಿತಾ ವಾಡೀಕರ, ಬೆಳಗಾವಿಯ ವಂದನಾ ಸುರ್ವೆ, ಸೊಲ್ಲಾಪುರದ ರವಿ ರಾವುತ, ರಾಣಿ ರಾವುತ ದಂಪತಿ ಎಂಬವರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಂಗಲಿಯ ಮೇತ್ರಿ ದಂಪತಿ ತಮ್ಮ 1.10 ವರ್ಷದ ತಮ್ಮ ಮಗುವನ್ನು ಗೋವಾದ ಸ್ಮಿತಾ ವಾಡೀಕರ ಅವರಿಗೆ ಮಾರಾಟ ಮಾಡಿದ್ದರು. ಮಗು ಮಾರಾಟ ಮಾಡಲು ಮಧ್ಯವರ್ತಿಗಳು ಮಹಿಳೆಯರೇ ಸೂತ್ರಧಾರಿಗಳು. ಬೆಳಗಾವಿಯ ವಂದನಾ, ಸೊಲ್ಲಾಪುರದ ರವಿ, ರಾಣಿ ಮಧ್ಯವರ್ತಿಗಳಾಗಿದ್ದರು. ರಾಮನಗರದ ಹೊಟೇಲ್ನಲ್ಲಿ ವ್ಯವಹಾರ ನಡೆಸಿ ನಂತರ ಮಗುವನ್ನು ಗೋವಾದ ದಂಪತಿಗೆ ಕೊಟ್ಟಿದ್ದರು.
ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಮಗುವನ್ನು ಖರೀದಿಸಿದ್ದ ಗೋವಾದ ಸ್ಮಿತಾ ಅವರಿಗೆ ಕರೆ ಮಾಡಿದ ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಬೆಳಗಾವಿಗೆ ಕರೆಯಿಸಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದಾಗ ಮಗು ಖರೀದಿಸಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ತಲೆಮರೆಸಿಕೊಂಡಿರುವ ಮಧ್ಯವರ್ತಿಗಳಾದ ವಂದನಾ, ರವಿ, ರಾಣಿ ಶೋಧ ಕಾರ್ಯ ನಡೆದಿದೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.