Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಗೋಕಾಕ ಮಾಜಿ ಶಾಸಕ ಚಂದ್ರಶೇಖರ ಟಿ. ಗುಡ್ಡಕಾಯು ನಿಧನ

ಬೆಳಗಾವಿ : ಗೋಕಾಕ ಮಾಜಿ ಶಾಸಕ ಚಂದ್ರಶೇಖರ ಟಿ.ಗುಡ್ಡಕಾಯು (91 ) ಅವರು ಸೋಮವಾರ ಬೆಳಗಾವಿಯ ಮಹಾಂತೇಶ ನಗರ ನಿವಾಸದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಅವರಿಗೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ. 1972 ರಲ್ಲಿ ಗೋಕಾಕ ಕಾಂಗ್ರೆಸ್ ಶಾಸಕರಾಗಿ ಅವರು ಒಂದು ಅವಧಿಗೆ ಆಯ್ಕೆಯಾಗಿದ್ದರು. ಸರಳ-ಸಜ್ಜನಿಕೆಗೆ ಹೆಸರುವಾಸಿಯಾಗಿ ಜನಮನ ಗೆದ್ದಿದ್ದರು.
ಚಂದ್ರಶೇಖರ ಗುಡ್ಡಕಾಯು ಅವರ ನಿಧನಕ್ಕೆ ಬೆಳಗಾವಿ ಜಿಲ್ಲೆಯ ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಕೆಲ ತಿಂಗಳ ಹಿಂದೆ ಚುನಾವಣೆ ನೆನಪು ಮೆಲುಕು ಹಾಕಿದ್ದ ಚಂದ್ರಶೇಖರ ಗುಡ್ಡಕಾಯು :

ನಾನು ಚುನಾವಣೆಗೆ ಖರ್ಚೇ ಮಾಡಿರಲಿಲ್ಲ.ಎಲ್ಲಾ ಮಾಡಿದ್ದು,ನೋಡಿಕೊಂಡಿದ್ದು ವಸಂತರಾವ್ ಅಣ್ಣಾ ಎಂದು ಗೋಕಾಕದ ಮಾಜಿ ಶಾಸಕ ಚಂದ್ರಶೇಖರ ಗುಡ್ಡಾಕಾಯು ಕೆಲ ತಿಂಗಳುಗಳ ಹಿಂದೆ ಅವರು ತಮ್ಮ ಚುನಾವಣೆಯ ಅನುಭವ ಹೇಳಿದ್ದರು.

1972 ರಲ್ಲಿ ಗೋಕಾಕದಿಂದ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಮಹಾರಾಷ್ಟ್ರ ಸರಕಾರದಲ್ಲಿ ನೀರಾವರಿ ಮಂತ್ರಿಯಾಗಿದ್ದ ದಿ.ಶಂಕರರಾವ್ ಚವ್ಹಾಣರಿಗೆ ಆಪ್ತ ಕಾರ್ಯದರ್ಶಿಯಾಗಿದ್ದರು. ಅಲ್ಲಿಂದ ಅವರನ್ನು ಬಿಡಿಸಿಕೊಂಡು ಬಂದ ರಾಯಬಾಗದ ವಸಂತರಾವ್ ಅಣ್ಣಾ ಗೋಕಾಕದಿಂದ ಚುನಾವಣೆಗೆ ನಿಲ್ಲಿಸಿದರು.ಆರಿಸಿಬಂದೆ ಎಂದು ಸ್ಮರಿಸಿಕೊಂಡಿದ್ದರು.

"ನನ್ನನ್ನು ಮಂತ್ರಿ ಮಾಡಲು ಮುಂದೆ ಬಂದ್ರು ದೇವರಾಜ ಅರಸ್ರು.
ಒಲ್ಲೆಯಪ್ಪ ಮಾಡೋದಿದ್ರೆ ವಸಂತರಾವ್ ಅವರನ್ನೇ ಮಾಡ್ರಿ” ಎಂದೆ. ಅವರೇ ಮಂತ್ರಿ ಆದರು ಎಂದು ಅಂದಿನ ಘಟನೆ ಮೆಲುಕು ಹಾಕಿದ್ದರು.

1972 ರಲ್ಲಿ ಗುಡ್ಡಾಕಾಯು ಅವರು 28,005 ಮತಗಳನ್ನು ಪಡೆದು ಆಯ್ಕೆಯಾಗಿದ್ದರು.ಸಂಸ್ಥಾ ಕಾಂಗ್ರೆಸ್ಸಿನ ಬಿ.ಎಮ್.ಪಾಟೀಲರು 11144 ಮತ ಪಡೆದಿದ್ದರು. 1978 ರಲ್ಲಿ ನಾನು, ವಸಂತರಾವ ಸೇರಿಯೇ ಗೋಕಾಕ ಮತ್ತು ಅರಭಾವಿಗಳಲ್ಲಿ ಸೋತೆವು ಎಂದು ಗುಡ್ಡಾಕಾಯು ಹೇಳಿದ್ದರು. ಕಾಂಗ್ರೆಸ್ ಇಬ್ಬಾಗವಾಗಿ ರೆಡ್ಡಿ ಕಾಂಗ್ರೆಸ್ಸಿನಿಂದ ಇವರಿಬ್ಬರೂ ಪರಾಭವಗೊಂಡಿದ್ದರು. ಮಾಜಿ ಶಾಸಕರಾದ ಮೇಲೆ ಗುಡ್ಡಾಕಾಯು ಅವರು ಬೆಳಗಾವಿಯ ಮಹಾಂತೇಶನಗರದಲ್ಲಿ ವಾಸಿಸುತ್ತಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ