ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಸ್ಥಾಪನೆಯಾಗಿದ್ದ ಮಹದಾಯಿ ನ್ಯಾಯಮಂಡಳಿಯ ಅವಧಿಯನ್ನು ಆರು ತಿಂಗಳು ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವಿನ ಜಲವಿವಾದದ ವಿಚಾರಣೆ ಸಂಬಂಧ ರಚಿಸಲಾಗಿದ್ದ ಈ ನ್ಯಾಯಮಂಡಳಿಯ ಅವಧಿ ಆ.20ಕ್ಕೆ ಮುಗಿದಿತ್ತು. ಇದೀಗ ಮಹದಾಯಿ ಜಲ ವಿವಾದ ಕುರಿತು ಹೆಚ್ಚಿನ ವರದಿ ಸಲ್ಲಿಸಲು ಮಂಡಳಿಯ ಅವಧಿ ವಿಸ್ತರಣೆ ಮಾಡಲಾಗಿದೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.