Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಧರ್ಮಸ್ಥಳ ಪ್ರಕರಣ ಮಂಜುನಾಥನೇ ಮಾಡಿಸ್ತಿದ್ದಾನೆ ; ಅಪಪ್ರಚಾರ ಮಾಡಿದವನು ಸತ್ತೇ ಹೋಗುತ್ತಾನೆ, ಎಲ್ಲೆ ನಿಧಿ ಇರುತ್ತೋ ಅಲ್ಲಿ ವಿಧಿ ಇರುತ್ತದೆ, ಅಭಿಮನ್ಯುವಿನ ಬಿಲ್ಲಿನ ದಾರವನ್ನು ಕರ್ಣ ಕಟ್ ಮಾಡುತ್ತಾನೆ !

ಗದಗ : ಧರ್ಮಸ್ಥಳದಲ್ಲಿ ಈಗೇನು ಮಂಜುನಾಥ ನಡೆಯುತ್ತಿದೆಯೋ ಅದನ್ನೆಲ್ಲಾ ಸ್ವಾಮಿಯೇ ಮಾಡಿಸುತ್ತಿರಬೇಕು. ಅಲ್ಲಿ ನಡೆಯುತ್ತಿರುವ ಘಟನೆ ಸತ್ಯವೋ ಸುಳ್ಳೋ ಅದು ಇಂದಲ್ಲ ನಾಳೆ ಹೊರಗೆ ಬರುತ್ತದೆ. ರಾಜಾಜ್ಞೆ ಆಗಿದೆ ಸತ್ಯ ಹೊರಬರಲು ಸಮಯಾವಕಾಶ ಬೇಕಿದೆ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಪ್ರಸಕ್ತ ವಿದ್ಯಮಾನಗಳ ಬಗ್ಗೆ ಭವಿಷ್ಯ ನುಡಿಯುವುದರಲ್ಲಿ ಪ್ರಸಿದ್ದಿ ಹೊಂದಿರುವ ಹಾಸನ ಜಿಲ್ಲೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಗದಗದಲ್ಲಿ ಮಾತನಾಡಿದ್ದಾರೆ.
"ಸೀತೆಗೆ ರಾಮಾಯಣದಲ್ಲಿ ಆದಂತೆ, ಇಲ್ಲಿ ಅಪಪ್ರಚಾರ ಮೊದಲು ಬಂದಿದೆ, ಇದೇ ಪ್ರಬಲವಾಗಿದೆ. ಪ್ರಚಾರ, ವಿಚಾರ, ಸಮಾಚಾರ, ಅಪಪ್ರಚಾರ. ಅಪಪ್ರಚಾರ ಮಾಡಿದವನು ಕೊನೆಗೆ ಸತ್ತೇ ಹೋಗುತ್ತಾನೆ" ಎಂದು ಕೋಡಿಶ್ರೀಗಳು ಹೇಳಿದ್ದಾರೆ.

ಪ್ರಸಕ್ತ ವಿದ್ಯಮಾನಗಳ ಬಗ್ಗೆ ಭವಿಷ್ಯ ನುಡಿಯುವುದರಲ್ಲಿ ಪ್ರಸಿದ್ದಿ ಹೊಂದಿರುವ ಹಾಸನ ಜಿಲ್ಲೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಗದಗದಲ್ಲಿ ಮಾತನಾಡಿದ್ದಾರೆ. "ಸೀತೆಗೆ ರಾಮಾಯಣದಲ್ಲಿ ಆದಂತೆ, ಇಲ್ಲಿ ಅಪಪ್ರಚಾರ ಮೊದಲು ಬಂದಿದೆ, ಇದೇ ಪ್ರಬಲವಾಗಿದೆ. ಪ್ರಚಾರ, ವಿಚಾರ, ಸಮಾಚಾರ, ಅಪಪ್ರಚಾರ. ಅಪಪ್ರಚಾರ ಮಾಡಿದವನು ಕೊನೆಗೆ ಸತ್ತೇ ಹೋಗುತ್ತಾನೆ" ಎಂದು ಕೋಡಿಶ್ರೀಗಳು ಹೇಳಿದ್ದಾರೆ.

ಸತ್ಯ ಹೊರ ಬರುತ್ತದೆ, ಬೆಳಕು ಇದ್ದಲ್ಲಿ ಕತ್ತಲು ಇರುತ್ತದೆ, ಬೆಳಕು ಬಂದಾಗ ಕತ್ತಲು ಹೋಗುತ್ತದೆ, ನಾನು ಯಾರನ್ನೂ ದೂಷಣೆ ಮಾಡಲು ಹೋಗುವುದಿಲ್ಲ. ಒಳೊಳ್ಳೆ ಗುಡಿಗಳ ಪೂಜೆಗಳು ನಿಲ್ಲುತ್ತಾ ಬರುತ್ತವೆ ಎಂದು ಕಾಲಜ್ಞಾನದಲ್ಲಿ ಹೇಳಲಾಗಿದೆ. ಎಲ್ಲಿ ನಿಧಿ ಇರುತ್ತೋ, ಅಲ್ಲಿ ವಿಧಿ ಇರುತ್ತದೆ ಎಂದು ಕೋಡಿಶ್ರೀಗಳು ಹೇಳಿದ್ದಾರೆ.

ಊರಲ್ಲಿ ಇರುವ ಸಣ್ಣ ದೇವಸ್ಥಾನಕ್ಕೆ ಯಾರೂ ಹೋಗುವುದಿಲ್ಲ, ಪೂಜಾರಿಗೆ ಸಂಬಳ ಕೊಡಲು ದುಡ್ಡು ಇರುವುದಿಲ್ಲ. ದುಡ್ಡು ಬೆಳೆಯುತ್ತಿದ್ದಂತೆಯೇ, ವಿಧಿಯು ಕಾಡಿಕೊಂಡು ಬರುತ್ತದೆ. ಅಭಿಮನ್ಯುವಿನ ಬಿಲ್ಲಿನ ದಾರವನ್ನು ಕರ್ಣ ಕಟ್ ಮಾಡುತ್ತಾನೆ. ಅಭಿಮನ್ಯುವಿನ ಹೆಂಡತಿ ರಂಗಪ್ರವೇಶ ಮಾಡುತ್ತಾಳೆ, ಮಹಾಪಾರ್ಥ, ಭೀಮಸೇನ ಗೆದ್ದ. ಮುಡಾ ಕೇಸ್ ಮುನ್ನಲೆಗೆ ಬಂತು, ಸಿಎಂ ಹೆಂಡತಿ, ಸೈಟ್ ಅನ್ನು ವಾಪಸ್ ಕೊಟ್ಟು ಬಂದರು, ಸಿದ್ದರಾಮಯ್ಯ ಗೆದ್ದರು. ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಇಂತಹ ಕೆಲಸಗಳು ನಡೆಯುತ್ತಿದೆ. ಅಲ್ಲಿ ಉಪ ರಾಷ್ಟ್ರಪತಿ ರಾಜೀನಾಮೆ ನೀಡಿದರು. ಈ ರೀತಿಯ ಸಮಸ್ಯೆಗಳು ಮುಂದಿನ ಸಂಕ್ರಾಂತಿಯ ವರೆಗೆ ಮುಂದುವರಿಯಲಿದೆ. ಜಲ, ವಾಯು, ಅಗ್ನಿ ಸುನಾಮಿ ನಡೆಯಲಿದೆ' ಎನ್ನುವ ಮಾತನ್ನು ಕೋಡಿಶ್ರೀಗಳು ಪುನರುಚ್ಚಿಸಿದ್ದಾರೆ.

ನಿನಗಾಗಿ ಪಡುವಣದಲ್ಲಿ ರವಿ ಮೂಡುವನೇ, ಶಕ್ತಿ ಇದ್ದರೆ ಗೆಲ್ಲು ಇಲ್ಲದಿದ್ದರೆ ಒದಿಸಿಕೋ. ಕರಾಳ ಭವಿಷ್ಯ ನಮ್ಮ ಮುಂದಿದೆ, ಸತ್ಯವನ್ನು ಇನ್ನಷ್ಟು ಬಿಚ್ಚಿಟ್ಟರೆ ನಮಗೆ ಸಮಸ್ಯೆ ಆಗಬಹುದು. ದ್ವೇಷ, ಅಸೂಯೆ, ಮತ್ಸರದ ಜಗತ್ತಿನಲ್ಲಿ ನಾವಿದ್ದೇವೆ. ನೀಚನಿಗೆ ದೊರೆತನವು, ಹೇಡಿಗೆ ಹಿರಿತನವು, ಮೂಢನಿಗೆ ಗುರುತನವು ಸಿಕ್ಕರೆ ದೇಶಕ್ಕೆ ಕಷ್ಟ ಎಂದು ಕೋಡಿಶ್ರೀಗಳು ನುಡಿದಿದ್ದಾರೆ.

ಹಿಂದೆಲ್ಲಾ ರಾಜಮಹಾರಾಜರು ಇದ್ದರು, ಅವರ ಪಕ್ಕದಲ್ಲಿ ಗುರುಗಳು ಕೂರುತ್ತಾ ಇದ್ದರು. ಗುರು ಜೊತೆಗಿದ್ದ, ಇದಲ್ಲದೇ ಗುರಿಯೂ ಇತ್ತು, ಹಾಗಾಗಿ ಸಮೃದ್ದವಾಗಿ ರಾಜ್ಯವನ್ನು ಆಳುತ್ತಿದ್ದರು. ಈಗಿನವರಿಗೆ ಗುರುಗಳೂ ಗುರಿಯೂ ಎಂದು ರಾಜಕಾರಣಿಗಳನ್ನು ಉದ್ದೇಶಿಸಿ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ