ಬೆಳಗಾವಿ : ಯಕ್ಸಂಬಾ ಪಟ್ಟಣದ ಡಾ.ಅನಿಲ ಕಮತಿ ಗೆಳೆಯರ ಬಳಗವು ನ.1 ರಂದು 37ನೇ ಕನ್ನಡೋತ್ಸವವನ್ನು ಗೆಳೆಯರ ಬಳಗ ಶಾರದಾಲಯ ಆವರಣದಲ್ಲಿ ಮಧ್ಯಾಹ್ನ 2.30ಕ್ಕೆ ಆಚರಿಸಲಿದೆ ಎಂದು ಡಾ.ಅನಿಲ ಕಮತಿ ಗೆಳೆಯರ ಬಳಗದ ಅಧ್ಯಕ್ಷ ನಿಖಿಲ ಕಮತಿ ತಿಳಿಸಿದ್ದಾರೆ. ಕನ್ನಡೋತ್ಸವದ ಸಾನ್ನಿಧ್ಯವನ್ನು ನಿಪ್ಪಾಣಿಯ ಪ್ರಾಣಲಿಂಗ ಸ್ವಾಮಿಗಳು ವಹಿಸಲಿದ್ದು ಕಾರ್ಯಕ್ರಮವನ್ನು ಬೆಳಗಾವಿಯ ಚಾರಿತ್ರಿಕ ಕಾದಂಬರಿಕಾರ ಯ.ರು. ಪಾಟೀಲ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳಗಾವಿಯ ರಂಗ ತಜ್ಞ ಹಾಗೂ ಸಾಹಿತಿ ಡಾ. ರಾಮಕೃಷ್ಣ ಮರಾಠ ಆಗಮಿಸಲಿದ್ದು ಬಳಗದ ಉಪಕಾರ್ಯದರ್ಶಿ ವಿಜಯ ದಾನವಾಡೆ ಅಧ್ಯಕ್ಷತೆ ವಹಿಸಲಿದ್ದಾರೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.