ಬೆಳಗಾವಿ : ಕೆ ಎಲ್ ಇ ಸಂಸ್ಥೆಯ, ಬೆಳಗಾವಿ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯ ದ ಎನ್ ಎಸ್ ಎಸ್ ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದಲ್ಲಿ ಕರ್ನಾಟಕದ ಅನುಭಾವಿ ಸಂತ, ಕವಿವರ್ಯ ಭಕ್ತ ಕನಕದಾಸರ ಜಯಂತಿ ಆಚರಣೆಯನ್ನು ದಿನಾಂಕ:27-11-2026 ರಂದು ಬೆಳಿಗ್ಗೆ 9:೦೦ ಕ್ಕೆ ಸರ್ ಸಿ ವಿ ರಾಮನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕರ್ನಾಟಕ ಕಂಡ ಶ್ರೇಷ್ಠ ಅನುಭಾವಿ ಸಂತ ,ಕೀರ್ತನಕಾರರಾದ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜಾ ಕೈಂಕರ್ಯವನ್ನು ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಜ್ಯೋತಿ ಎಸ್ ಕವಳೇಕರ ಅವರು ನೆರವೇರಿಸಿದರು.
ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಶಶಿಕಾಂತ ತಾರದಾಳೆ ಮಾತನಾಡುತ್ತಾ, ಕನಕದಾಸರು ಸಮಾಜದಲ್ಲಿ ಸಮಾನತೆಯನ್ನು ಸಾರಿದರು. ಸಾಮಾಜಿಕ ಮೌಢ್ಯ ಗಳನ್ನು ನಿರ್ಮೂಲನೆ ಮಾಡಿದರು. ಮೇಲು-ಕೀಳು ಕಿತ್ತೊಗೆದರು. ಉದಾತ್ತ ಮೌಲ್ಯಗಳನ್ನು ಇಟ್ಟುಕೊಂಡು ಮೌಲಿಕ ಕೃತಿಗಳನ್ನು ರಚಿಸಿದರು. ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದರು. ದಾಸ ಪರಂಪರೆಯಲ್ಲಿ ಶ್ರೇಷ್ಠ ಕೀರ್ತನೆಗಾರ ಆಗಿ ಹೊರಹೊಮ್ಮಿದರು. ಶ್ರೀ ಕನಕದಾಸರು ಕೇವಲ ವ್ಯಕ್ತಿಯಾಗಿರದೇ ಸಮಾಜದಲ್ಲಿ ಶಕ್ತಿಯಾಗಿದ್ದರು. ಕನಕದಾಸರು ಮನುಕುಲಕ್ಕೆ ಕಳಶಪ್ರಾಯವಾಗಿದ್ದರೆ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿ ಸಿ ಕಾಮಗೋಳ, ಐ ಕ್ಯೂ ಎಸಿ ಸಂಯೋಜಕ ಡಾ. ವಿನಯಕುಮಾರ ಎಂಎನ್ ಸಿ ಸಿ
ಅಧಿಕಾರಿ ಡಾ. ಶಿವಾನಂದ ಬುಲಬುಲಿ ಮತ್ತು ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರು ಎನ್ ಎಸ್ ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.