E-PAPER
26 Nov 2026, 08:52:29 PM|
Gold₹12128/gGold24K ₹12,128/g - 22K ₹11,107/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

28 ರಿಂದ ರುದ್ರಾಕ್ಷಿ ಮಠದಲ್ಲಿ ಅನುಭಾವ ದರ್ಶನ ಪ್ರವಚನ

ಬೆಳಗಾವಿ ; ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳವರ 137 ನೇ ಜಯಂತಿ ಮಹೋತ್ಸವದ ಅಂಗವಾಗಿ ನ. 28 ರಿಂದ ಡಿಸೆಂಬರ್ 5 ರವರೆಗೆ ಬೆಳಗಾವಿಯ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಅನುಭಾವ ದರ್ಶನ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ತಿಳಿಸಿದ್ದಾರೆ. 

ಅತ್ತಿವೇರಿಯ  ಬಸವ ಧಾಮದ ಬಸವೇಶ್ವರಿ ಮಾತಾಜಿಯವರು ಪ್ರವಚನ ನಡೆಸಿಕೊಡಲಿದ್ದಾರೆ. 

 ವಚನ ಕಟ್ಟುಗಳ ಮೆರವಣಿಗೆ :  ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ನವಂಬರ್ 28 ರಂದು ಸಾಯಂಕಾಲ 4:00ಗೆ ಶ್ರೀನಗರ ಉಧ್ಯಾನವನದಿಂದ ವಚನ ಕಟ್ಟುಗಳ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ನಾಡಿನ ಹರ ಗುರು ಚರಮೂರ್ತಿಗಳು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.

 ಬುತ್ತಿ ಜಾತ್ರೆ :  ಈ ಬಾರಿಯ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿ ಮಹೋತ್ಸವವನ್ನು ಭಕ್ತರು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದು, ಮಹೋತ್ಸವದ ಅಂಗವಾಗಿ ನ. 29 ರಿಂದ ಡಿ. 2 ರವರೆಗೆ ನಗರದ ವಿವಿಧ ಬಡಾವಣೆಗಳಿಂದ ನಾಗನೂರು ರುದ್ರಾಕ್ಷಿ ಮಠಕ್ಕೆ ಭಕ್ತ ಸಮೂಹ ವಿವಿಧ ಗುಂಪುಗಳಲ್ಲಿ ರೊಟ್ಟಿ ಬುತ್ತಿ ಮೆರವಣಿಗೆ ನಡೆಸಲಿದ್ದಾರೆ. 

ನ. 29 ರಂದು ಶ್ರೀನಗರ ಉಧ್ಯಾನವನದಿಂದ, ರಾಮತೀರ್ಥ ನಗರ, ಕಣಬರಗಿ, ಕೆ.ಎಚ್.ಬಿ. ಕಾಲೋನಿ, ಬಸವೇಶ್ವರ ಬಡಾವಣೆ ,ಖಾಸಬಾಗ, ಹಿಂದವಾಡಿ,ವಡಗಾವ್, ಅನಗೋಳ ,ಶಹಾಪುರ್, ಪ್ರದೇಶಗಳಿಂದ ರೊಟ್ಟಿ ಬುತ್ತಿಯೊಂದಿಗೆ ಶ್ರೀ ಮಠಕ್ಕೆ ಭಕ್ತರು ಅಗಮಿಸುವರು.

ನ. 30 ರಂದು ಮಹಾಂತೇಶ ನಗರ, ಶಿವಬಸವ ನಗರ, ಶ್ರೀನಗರ, ಚೆನ್ನಮ್ಮ ಸೊಸೈಟಿ, ಅಶೋಕನಗರ, ಆಂಜನೇಯ ನಗರ ಪ್ರದೇಶಗಳಿಂದ ಹಾಗೂ ಡಿ. 1 ರಂದು ಕುವೆಂಪು ನಗರ, ಕುಮಾರಸ್ವಾಮಿ ಲೇಔಟ್, ಸದಾಶಿವ ನಗರ, ಹನುಮಾನ ನಗರ, ಸಂಗಮೇಶ್ವರ ನಗರ, ಮತ್ತು ಸಹ್ಯಾದ್ರಿನಗರ ಪ್ರದೇಶಗಳಿಂದ ಹಾಗೂ
ಡಿ. 2 ರಂದು ವೈಭವ ನಗರ, ವಿದ್ಯಾಗಿರಿ, ಬಸವ ಕಾಲೋನಿ, ಶಾಹುನಗರ ಮತ್ತು ಅನ್ನಪೂರ್ಣವಾಡಿ ಪ್ರದೇಶಗಳಿಂದ ಭಕ್ತರು ರೊಟ್ಟಿ ಬುತ್ತಿಯೊಂದಿಗೆ ರುದ್ರಾಕ್ಷಿ ಮಠಕ್ಕೆ ಆಗಮಿಸಿ ಸಂಜೆ 6:00 ಗಂಟೆಗೆ ಜರುಗುವ ಪ್ರವಚನದಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
28 ರಿಂದ ರುದ್ರಾಕ್ಷಿ ಮಠದಲ್ಲಿ ಅನುಭಾವ ದರ್ಶನ ಪ್ರವಚನಸಂವಿಧಾನ ದಿನಾಚರಣೆಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ಶಾಲೆಗಳಲ್ಲೂ ಸಂವಿಧಾನ ಪಾಠ ಅಳವಡಿಕೆ: ಸಾಮಾಜಿಕ ನ್ಯಾಯವೇ ಸಂವಿಧಾನದ ಜೀವಾಳ-ಡಿ.ಕೆ.ಶಿವಕುಮಾರ್ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ  ಸಹಯೋಗದಲ್ಲಿ 71 ನೇ  ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬೆಳಗಾವಿಯ ವಿವಿಧ ಭಾಗಗಳಲ್ಲಿ ಕಾರ್ಯಕ್ರಮ ಆಯೋಜನೆಬೆಳಗಾವಿ ಆರ್ ಎಲ್ ಎಸ್ : ಸಂವಿಧಾನ ದಿನಾಚರಣೆಕರ್ನಾಟಕದ ಮರಾಠಾ ಸಮುದಾಯದ ಏಕತೆಗೆ ಸಕಲ ಮರಾಠಾ ಸಮಾಜದ ಮಹತ್ವದ ನಿರ್ಧಾರ : ಹಿರಿಯರಿಗೆ ಗೌರವ, ಸಾಧಕರಿಗೆ ಸನ್ಮಾನ; ಫೆಬ್ರವರಿಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆಕರ್ನಾಟಕದ ಹಲವು ಜಿಲ್ಲೆಗಳಲ್ಲಿ 28 ರ ವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ- ಬೆಳಗಾವಿಯಲ್ಲಿ ?ಮೂಡಲಗಿ–ಗುರ್ಲಾಪುರ ರಸ್ತೆಯಲ್ಲಿ ಭೀಕರ ಅಪಘಾತ : ಆರೋಗ್ಯ ಸಿಬ್ಬಂದಿ ಸ್ಥಳದಲ್ಲೇ ಸಾವುಲಿಂಗರಾಜ ಕಾಲೇಜಿನ ಎನ್‌ಸಿಸಿ ಘಟಕದಿಂದ ರಕ್ತದಾನ ಶಿಬಿರಉತ್ತರ ಪ್ರದೇಶ ಚುನಾವಣೆ : ಕಾಂಗ್ರೆಸ್ ಕೇಳಿದ್ದ 2 ಕ್ಷೇತ್ರಗಳೂ ಸೇರಿ 5 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ ಸಮಾಜವಾದಿ ಪಕ್ಷ !