Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಆರೇ ದಿನಗಳಲ್ಲಿ ಕಾಂತಾರ ಗಳಿಸಿದ್ದೆಷ್ಟು ?

ನವದೆಹಲಿ: ನಮ್ಮ ಕಾಂತಾರ-ಚಾಪ್ಟರ್‌ 1 ಚಿತ್ರವು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ. ಪ್ರಾದೇಶಿಕ ಸಿನಿಮಾವೂ ಸಾರ್ವತ್ರಿಕವಾಗಬಹುದು ಎಂಬ ನನ್ನ ನಂಬಿಕೆ ಗೆದ್ದಿದೆ ಎಂದು ಚಿತ್ರದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಬುಧವಾರ ತಿಳಿಸಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2022ರಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರದಂತೆಯೇ ಈ ಚಿತ್ರವೂ ಜನರಲ್ಲಿ ಬೇರೂರಿದೆ. ಜಾನಪದ ಮತ್ತು ಕರಾವಳಿಯ ದೈವಿಕ ಸಂಪ್ರದಾಯಗಳ ಅನ್ವೇಷಣೆ ಸಾಂಸ್ಕೃತಿಕ ವಿದ್ಯಮಾನವಾಗಿ ಮಾರ್ಪಟ್ಟಿದೆ. ಹೊಸ ಕನ್ನಡ ಚಲನಚಿತ್ರಗಳ ನಿರೂಪಣೆ ಮತ್ತು ಅಭಿನಯಕ್ಕೆ ಪ್ರಶಂಸೆಗಳು ಸಂದಿವೆ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ, ಕಾಂತಾರ: ಚಾಪ್ಟರ್‌ 1 ಬಿಡುಗಡೆಯಾಗಿ 6 ದಿನಗಳಲ್ಲಿ 427.5 ಕೋಟಿ ರೂ.ಗಳನ್ನು ಗಳಿಸುವ ಮೂಲಕ ಭರ್ಜರಿ ಯಶಸ್ಸು ಕಂಡಿದೆ ಎಂದು ಹೇಳಿದರು.

ಕಾಂತಾರ ಚಿತ್ರವನ್ನು ಆರಂಭಿಸಿದ್ದು, ಅಂದಿನಿಂದಲೂ ನಾವು ಪ್ರಕೃತಿ ಹಾಗೂ ಮನುಷ್ಯರ ನಡುವಿನ ಚಲನಶೀಲತೆಯನ್ನು ಅನ್ವೇಶಿಸುತ್ತಲೇ ಇದ್ದೆವು. ಈ ಕಥೆಯು ಕರಾವಳಿ ಕರ್ನಾಟಕದ ನಮ್ಮ ಜಾನಪದದಲ್ಲಿ ಬೇರೂರಿದೆ. ಬುಡಕಟ್ಟು ಜನಾಂಗಗಳು, ಜಾನಪದ ಮತ್ತು ದೇವತೆಗಳ ಆರಾಧನೆಯ ಬಗ್ಗೆ ಈ ಚಿತ್ರದಲ್ಲಿ ತೋರಿಸಿದ್ದು, ಅಂದಿನಿಂದ ಪ್ರಾದೇಶಿಕ ಚಿತ್ರವೂ ಸಾರ್ವತ್ರಿಕವಾಗಬಹುದು ಎಂಬ ಆಲೋಚನೆ ನನ್ನಲ್ಲಿತ್ತು. ಅದು ಇದು ನನಸಾಗಿದೆ ಎಂದು ಹೇಳಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೋಚಿಂಗ್ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರುಆಷಾಢ ಏಕಾದಶಿ ಪ್ರಯುಕ್ತ ಧಾರವಾಡ-ಪಂಡರಪುರ ನಡುವೆ ವಿಶೇಷ ರೈಲು ಸಂಚಾರಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆ, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಮುಂದೂಡಿಕೆಎನ್‌ಡಿಎಗೆ ಎನ್‌ಸಿಪಿ ಬೆಂಬಲದ ವದಂತಿಗಳ ನಡುವೆ ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್–ಸುಪ್ರಿಯಾ ಸುಳೆಗಣಿಕೊಪ್ಪ : ಶಾಸಕ ಬಾಬಾಸಾಹೇಬ ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ಭೋಜನ, ಕಲಿಕಾ ಸಾಮಗ್ರಿ ವಿತರಣೆವಿದ್ಯಾರ್ಥಿಗಳು  ಎನ್ ಸಿಸಿ   ಮಹತ್ವ ಮತ್ತು ಅದರ ಉಪಯೋಗ ಹಾಗೂ ಅನುಕೂಲಗಳ  ಮಾಹಿತಿ ಪಡೆಯಬೇಕು: ಪ್ರೊ . ಹನುಮಂತ ಬನ್ನೂರಇನ್ನಿಬ್ಬರಿಗೆ ಉಪ ಮುಖ್ಯಮಂತ್ರಿ ಹುದ್ದೆ ?ಈಜಲು ಬಾರದ ಕಾರಣ ಕೃಷಿ ಹೊಂಡದಲ್ಲಿ ಮುಳುಗಿ ಸಾವುನೀಟ್ ಪರೀಕ್ಷೆಯಲ್ಲಿ ಹೊಸಮನಿ ಸಹೋದರಿಯರ ಸಾಧನೆಹಾವು ಕಡಿತ ಔಷಧ: ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ