ಬೆಳಗಾವಿ: ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಕಾರಣಕ್ಕೆ ಒಂದೇ ಗ್ರಾಮ ಪಂಚಾಯಿತಿ ಕಟ್ಟಡ ಈಗ ಎರಡೆರಡು ಸಲ ಉದ್ಘಾಟನೆಗೊಂಡಿದೆ. ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ನಡುವಿನ ಪೈಪೋಟಿಯಿಂದ ಈಗ ಗ್ರಾಮಸ್ಥರು ಎರಡೆರಡು ಬಾರಿ ಕಟ್ಟಡ ಉದ್ಘಾಟನೆಯಲ್ಲಿ ಭಾಗವಹಿಸಿದ್ದಾರೆ. ನಿಪ್ಪಾಣಿ ತಾಲೂಕು ಯರನಾಳ ಗ್ರಾಮ ಪಂಚಾಯಿತಿ ಕಟ್ಟಡವನ್ನು 4 ದಿನಗಳ ಹಿಂದೆ ಜೊಲ್ಲೆ ಉದ್ಘಾಟಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಶನಿವಾರ ಪ್ರಿಯಾಂಕಾ ಜಾರಕಿಹೊಳಿ ಕಟ್ಟಡ ಉದ್ಘಾಟಿಸಿದ್ದಾರೆ. ಪಂಚಾಯತಿ ಅಧ್ಯಕ್ಷರು, ಸದಸ್ಯರು, ಪಿಡಿಒ ಭಾಗವಹಿಸಿದ್ದರು. ಒಟ್ಟಾರೆ ಒಂದೇ ಕಟ್ಟಡ ಎರಡೆರಡು ಸಲ ಉದ್ಘಾಟನೆ ಭಾಗ್ಯ ಕಾಣುವಂತಾಗಿದೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.