Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮಾಲೀಕನ ಹುಡುಕಿಕೊಂಡು 200 ಕಿಲೋ ಮೀಟರ್ ನಡೆದು ಮನೆ ಸೇರಿದ ನಾಯಿ

ಬೆಳಗಾವಿ: ದೂರದ ಕಾಶಿವರೆಗೂ ಈ ಮೊದಲು ಯಾತ್ರಿಕರು ನಡೆದುಕೊಂಡೆ ಕಾಶಿ ವಿಶ್ವನಾಥ ದೇವರ ದರ್ಶನ ಪಡೆಯುತ್ತಿದ್ದರು. ಆಗ ಅವರ ಜೊತೆ ಮನೆಯ ನಾಯಿ ಹಿಂಬಾಲಿಸಿ ಮತ್ತೆ ವಾಪಸ್ಸು ಮನೆ ಸೇರುತ್ತಿತ್ತು ಎಂಬ ಮಾತು ಚಲಾವಣೆಯಲ್ಲಿದೆ. ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ ಮನೆ ಮಾಲೀಕನನ್ನು ಹುಡುಕಿಕೊಂಡು ಸುಮಾರು 200 ಕಿಲೋ ಮೀಟರ್ ದೂರ ತೆರಳಿದ್ದ ನಾಯಿ ಮತ್ತೆ ಮನೆಗೆ ಮರಳಿರುವ ಘಟನೆ ಬೆಳಕಿಗೆ ಬಂದಿದೆ.

ಆಷಾಢ ಏಕಾದಶಿ ನಿಮಿತ್ತ ಪಂಢರಾಪುರದಲ್ಲಿನ ವಿಠ್ಠಲ ದೇವರ ದರ್ಶನಕ್ಕೆ ನಿಪ್ಪಾಣಿಯ ಯಮಗರ್ಣಿಯ ಸಂತರು ತೆರಳಿದ್ದರು. ಜ್ಞಾನದೇವ ಕುಂಬಾರ ಅವರ ಸಾಕು ನಾಯಿ 'ಮಹಾರಾಜ' ಸಹಾ ಅವರ ಜೊತೆ ಹಿಂಬಾಲಿಸಿತ್ತು. ಆದರೆ, ಪಂಢರಪುರದಲ್ಲಿ ಜನಸಾಗರದಲ್ಲಿ ನಾಯಿ ತಪ್ಪಿಸಿಕೊಂಡಿದೆ. ಕೊನೆಗೂ ಈ ನಾಯಿ ಜುಲೈ 22ರಂದು ಮತ್ತೆ ಮನೆ ಸೇರಿದೆ. ಆರು ವರ್ಷಗಳಿಂದ ಮಹಾರಾಜ ಎಂಬ ಹೆಸರಿನ ಈ ನಾಯಿಯನ್ನು ನಾವು ಸಾಕುತ್ತಿದ್ದೆವು. ಜುಲೈ ಆರರಂದು ನಾವು ಒಟ್ಟು 140 ವಿಠ್ಠಲ ದೇವರ ಭಕ್ತರು ಪವಿತ್ರ ಪಂಢರಪುರಕ್ಕೆ ಪಾದಯಾತ್ರೆ ಮೂಲಕ ಸಾಗಿದ್ದೆವು. ಆಗ ನಾಯಿ ನಮ್ಮ ಹಿಂಬಾಲಿಸಿತು. ನಾವು ತವರಿಗೆ ಜುಲೈ 18ರಂದು ಮರಳಿದೆವು. ಪಂಢರಾಪುರದಲ್ಲಿ ತಪ್ಪಿಸಿಕೊಂಡಿದ್ದ ನಮ್ಮ ನಾಯಿ ಜುಲೈ 22ರಂದು ಅಂದರೆ ನಾಲ್ಕು ದಿನಗಳ ನಂತರ ನಮ್ಮ ಮನೆಗೆ ಬಂದು ತಲುಪಿದೆ. ಇದರಿಂದ ನಾವೆಲ್ಲ ಬಹಳ ಸಂತಸಪಟ್ಟು ಅದಕ್ಕೆ ಗುಲಾಲು ಎರಚಿ ಮಾಲೆ ಹಾಕಿ ಖುಷಿಪಟ್ಟಿದ್ದೇವೆ ಎಂದು ಜ್ಞಾನದೇವ ಹೇಳಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ