ಕಕ್ಕೇರಿ:
ಸ್ಥಳೀಯ ತನ್ವೀರ ಅಕ್ಬರ ಕಕ್ಕೇರಿ.(40) ಈತನ ಮಗು ತೌಹೀದ್ ( 19) ತಿಂಗಳದ ಮಗು ಸ್ವಿಫ್ಟ್ ಕಾರಿನ ಅಪಘಾತಕ್ಕೆ ಸಾವನಪ್ಪಿದ್ದಾನೆ.
ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ಅಳ್ನಾವರ ಪಟ್ಟಣಕ್ಕೆ ಸಂತೆ ತರಲು ತಮ್ಮನಾದ ಮನ್ಸೂರ್ ಕಕ್ಕೇರಿ (35) ಈತನು ತನ್ನ ಸ್ವಿಫ್ಟ್ ಕಾರ್ ನಂಬರ್ ಕೆ .ಎ.22. 0154. ಮನೆಯ ಅಂಗಳದ ರಸ್ತೆಯ ಮುಂದೆ ನಿಂತ ಕಾರು ಚಾಲು ಮಾಡಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮನೆಯ ಒಳಗಡೆಯಿಂದ ತೌಹೀದ್ 19 ತಿಂಗಳದ ಮಗು ಕಾರು ಗಾಡಿ ಕಡೆಗೆ ಬರುತ್ತಿದ್ದಾಗ . ಆತನ ಕಡೆಗೆ ಲಕ್ಷ್ಯ ಕೊಡದೆ ದುಡಿಕಿನಿಂದ, ನಿರ್ಲಕ್ಷತನದಿಂದ, ಈ ಅಪಘಾತ ಸಂಭವಿಸಿದೆ . ತೌಹೀದ ಈತನ ಬಲಗಡೆ ತಲೆಗೆ ಭಾರಿ ಗಾಯ ಪಡಿಸಿದ್ದು ಗಾಯಾಳುಗೆ ಹಳಿಯಾಳ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿ. ಹೆಚ್ಚಿನ ಉಪಚಾರ ಸಲುವಾಗಿ ಜಿಲ್ಲಾ ಆಸ್ಪತ್ರೆ ಧಾರವಾಡಕ್ಕೆ ಹೋಗುವಾಗ ನಿಗದಿ ಗ್ರಾಮದ ಹತ್ತಿರ ಸಾಯಂಕಾಲ 5-45ಕ್ಕೆ ಮರಣ ಹೊಂದಿದ್ದು . ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಯಿತ.
ತನ್ವೀರ ಕಕ್ಕೇರಿ . ಪತ್ನಿ ಶಾಹೀರಾ ಬಾನು.(35) ಮಗಳು ತೌಯಿಬಾ (8).2 ತರಗತಿ . ಮಗು ಕಳೆದುಕೊಂಡು . ದುಃಖದಲ್ಲಿ ಸಂಪೂರ್ಣ ಕುಟುಂಬಸ್ಥರು. ಶನಿವಾರ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಿತು.
ನಂದಗಡ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು.
ಪಿ ಐ. ರವಿಕುಮಾರ ಧರ್ಮಟ್ಟಿ. ತನಿಖಾ ಸಹಾಯ ಪಡೆ ರಮೇಶ ಕೀಮಾಳೆ, ಹಾಗೂ ನೀಲಕಂಠ ಚಂದರಗಿ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.
12kkr1 ಫೋಟೋ ಶೀರ್ಷಿಕೆ 1.
ಅಪಘಾತದಲ್ಲಿ ಮೃತಪಟ್ಟ ಮಗು ತೌಹೀದ್ ಭಾವಚಿತ್ರ.