This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ನ್ಯಾಯಾಲಯದ ತೀರ್ಪಿನ ಮೇಲೆ ನಂಬಿಕೆ ಇಲ್ಲದ ಮಹಾರಾಷ್ಟ್ರದಿಂದ ಅಮಿತ್ ಶಾ ಮೇಲೆ ಒತ್ತಡ ತಂತ್ರ ! Pressure strategy on Amit Shah from Maharashtra who does not believe in the court's decision!


 

ಗಡಿ ವಿವಾದ ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಈ ಹಿಂದೆ ಮಹಾರಾಷ್ಟ್ರದವರೇ ಆಗಿದ್ದ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಅವರ ಒತ್ತಡದಿಂದ ಮಹಾರಾಷ್ಟ್ರ ಸುಪ್ರೀಂಕೋರ್ಟಿಗೆ ಗಡಿ ವಿವಾದ ಸಂಬಂಧ ತನ್ನ ರಾಜ್ಯದ ಪರ ಅಫಿಡವಟ್ ಸಲ್ಲಿಸಿತ್ತು. ಆಗ ಕರ್ನಾಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಕೇಂದ್ರ ಸರಕಾರ ಕೊನೆಗೂ ಆಫಿಡೆವಿಟ್ ಹಿಂಪಡೆದುಕೊಂಡಿತ್ತು. ಇದೀಗ ಸುಪ್ರೀಂ ಕೋರ್ಟ್ ನಲ್ಲಿ ನಿರ್ಣಾಯಕ ಸ್ಥಿತಿಯಲ್ಲಿ ಗಡಿ ವಿವಾದ ಇದೆ. ಆದರೆ, ಕೋರ್ಟ್ ನೀಡುವ ತೀರ್ಪು ಬರುವ ಮೊದಲೇ ಮಹಾರಾಷ್ಟ್ರ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ಒತ್ತಡ ಹೇರಿ ವಿವಾದವನ್ನು ಇನ್ನಷ್ಟು ತಾರಕಕ್ಕೇರುವಂತೆ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವುದು ಕರ್ನಾಟಕದ ಪಾಲಿಗೆ ದೊಡ್ಡ ಹಿನ್ನಡೆ ಎನ್ನಬಹುದು.

ದೆಹಲಿ :
ಸುಪ್ರೀಂ ಕೋರ್ಟ್ ನಲ್ಲಿ ಗೆಲುವು ತನ್ನದೇ ಎನ್ನುವ ಮಹಾರಾಷ್ಟ್ರ ಒಂದೇ ಕಾಲನ್ನು ಎರಡು ದೋಣಿ ಮೇಲೆ ಕಾಲಿಟ್ಟಿದೆ !

ಒಂದೆಡೆ ಸುಪ್ರೀಂ ಕೋರ್ಟ್ ನಲ್ಲಿ ಗಡಿ ವಿವಾದ ಇದೆ. ಇನ್ನೊಂದೆಡೆ ಮಹಾರಾಷ್ಟ್ರ ಕೇಂದ್ರ ಗೃಹ ಸಚಿವರ ಮಧ್ಯಸ್ಥಿಕೆಗೆ ಒತ್ತಾಯಿಸುತ್ತಿದೆ. ಇದು ಮಹಾರಾಷ್ಟ್ರಕ್ಕೆ ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಮೇಲೆ ನಂಬಿಕೆ ಇಲ್ಲವೋ ಎಂಬ ಅನುಮಾನಗಳು ಬರುವಂತೆ ಮಾಡಿದೆ. ಏಕೆಂದರೆ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಕಾದು ನೋಡುವಷ್ಟು ವ್ಯವಧಾನ ಆ ರಾಜ್ಯಕ್ಕೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಆ ರಾಜ್ಯ ಈಗ ಗಡಿಬಿಡಿ ಮಾಡುತ್ತಿದೆ.

ಗಡಿ ವಿವಾದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಧ್ಯಸ್ಥಿಕೆಗೆ ಆ ರಾಜ್ಯ ಮುಂದಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದ ಸಮರಕ್ಕೆ ಕೇಂದ್ರ ಸರ್ಕಾರ ಮುಂದಾಗಲಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಕರ್ನಾಟಕದ ಪಾಲಿಗೆ ಎಂದೋ ಮುಗಿದು ಹೋಗಿರುವ ಈ ಬಹುದಿನಗಳ ಚರ್ಚೆಗೆ ಮಹಾರಾಷ್ಟ್ರ ಒಂದಿಲ್ಲ ಒಂದು ರೀತಿಯಲ್ಲಿ ಕೆಣಕುತ್ತಲೇ ಇದೆ. ಇದೀಗ ಮಹಾರಾಷ್ಟ್ರ ಎನ್ ಸಿ ಪಿ ನಾಯಕ ಹಾಗೂ ಸಂಸದ ಅಮೋಲ್ ಕೋಲ್ಹೆ ಅವರು ಹೇಳಿಕೆ ನೀಡಿದ್ದು ಕೇಂದ್ರದ ಗ್ರಹ ಸಚಿವ ಅಮಿತ್ ಶಾ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಡಿ.14 ರಂದು ಭೇಟಿಯಾಗಿ ಚರ್ಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ವಿಕಾಸ ಅಘಾಡಿ (ಎಂವಿಎಂ) ಸಂಸದರ ನಿಯೋಗ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಈ ಬಗ್ಗೆ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿರುವುದಾಗಿ ಹೇಳಿದ್ದಾರೆ.

ಈ ನಡುವೆ ಇಂದು ಹಾತಕಣಗಲೆ ಶಿವಸೇನೆ ಸಂಸದ ಹಾಗೂ ಮಹಾರಾಷ್ಟ್ರ ಗಡಿ ಸಲಹಾ ಸಮಿತಿಯ ಅಧ್ಯಕ್ಷ ಧೈರ್ಯಶೀಲ ಮಾನೆ ಲೋಕಸಭೆಯಲ್ಲಿ ಗಡಿ ವಿವಾದವನ್ನು ಕೆದಕಿದಿದ್ದಾರೆ. ಅಮಿತ್ ಶಾ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ.


Jana Jeevala
the authorJana Jeevala

Leave a Reply