ಬೆಳಗಾವಿ :ಫೆಬ್ರವರಿ 21ರಂದು ಬೆಳಗ್ಗೆ 9:00 ರಿಂದ ಸಂಜೆ 5:00 ವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ನಾಲ್ಕನೇ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 110 ಕೆ.ವಿ. ವಡಗಾವಿ ಉಪಕೇಂದ್ರದಿಂದ ಸರಬರಾಜು ಆಗುವ ಧಾಮಣೆ, ಕುರುಬರಹಟ್ಟಿ, ಮಾಸ್ಗಾನಟ್ಟಿ, ದೇವಗ್ಯಾನಟ್ಟಿ, ಔಚಾರಟ್ಟಿ, ಯರಮಾಳ, ಯಳ್ಳೂರ, ಸುಳಗಾ, ರಾಜಹಂಸಗಡ, ದೇಸೂರ, ನಂದಿಹಳ್ಳಿ, ಕೊಂಡಸಕೊಪ್ಪ, ಹಲಗಾ ಹಾಗೂ ಬಸ್ತವಾಡ ಗ್ರಾಮಗಳಿಗೆ ಹಾಗೂ ಈ ಗ್ರಾಮಗಳ ನೀರಾವರಿ ಪಂಪ್ಸೆಟ್ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.


