Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮದುವೆಯಾದ ಮಹಿಳೆಯೊಂದಿಗೆ ಪರಾರಿಯಾದ ಯುವಕ : ಮನೆ ಮೇಲೆ ದಾಳಿ...

ಬೆಳಗಾವಿ : ಬೆಳಗಾವಿ ತಾಲೂಕು ಭರಮ್ಯಾನಟ್ಟಿ ಗ್ರಾಮದಲ್ಲಿ ಮದುವೆಯಾದ ಮಹಿಳೆಯನ್ನು ಪ್ರೀತಿಸಿ ಆಕೆಯೊಂದಿಗೆ ಪರಾರಿಯಾದ ಯುವಕನ ಮನೆಗೆ ನುಗ್ಗಿ ಸಾಮಗ್ರಿಗಳನ್ನು  ಧ್ವಂಸಗೊಳಿಸಿರುವ ಘಟನೆ ನಡೆದಿದೆ.

 
ಭರಮ್ಯಾನಟ್ಟಿ ಗ್ರಾಮದ ಯಲ್ಲಪ್ಪ ನಾಯಕ ಬೆಳಗಾವಿಯ ಉದ್ಯಮಬಾಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಕೆಲಸ ಮಾಡುತ್ತಿದ್ದ ವಿವಾಹಿತೆಯೊಂದಿಗೆ ಸಂಬಂಧ ಹೊಂದಿದ್ದ. ಆತ ಅವಳೊಂದಿಗೆ ಓಡಿ ಹೋಗಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ.

ವಿವಾಹಿತೆಯ  ಕುಟುಂಬದವರು ಈ ಕೃತ್ಯ ನಡೆಸಿದ್ದಾರೆ. ಯಲ್ಲಪ್ಪನ ಕುಟುಂಬದವರಿಗೆ ಇಬ್ಬರ ನಡುವಿನ ಸಂಬಂಧದ ಬಗ್ಗೆ ಮಾಹಿತಿ ಇದ್ದು ಅವರು ಬೆಂಬಲ ನೀಡಿದ್ದಾರೆ ಎಂದು ದೂರಿ ಭರಮ್ಯಾನಟ್ಟಿ ಗ್ರಾಮಕ್ಕೆ ಆಗಮಿಸಿದ್ದ ಹಲವರು ದಾಳಿ ನಡೆಸಿದ್ದಾರೆ. ಮನೆಯಲ್ಲಿದ್ದ ವಸ್ತುಗಳು ಧ್ವಂಸ ಮಾಡಿದ್ದಾರೆ. ಮನೆಯ ಪಕ್ಕದಲ್ಲಿದ್ದ ಕುರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಯಲ್ಲಪ್ಪನ ಕುಟುಂಬದವರು ದೂರಿದ್ದಾರೆ. 

ಮಹಿಳೆಗೆ ವರ್ಷದ ಹಿಂದಷ್ಟೇ ಮದುವೆಯಾಗಿದೆ. ಆದರೂ ಆಕೆ ಅಲ್ಲಿಯೇ ಕೆಲಸ ಮುಂದುವರಿಸಿದ್ದಳು. ಆ  ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ  ಯಲ್ಲಪ್ಪನೊಂದಿಗೆ ಸಂಬಂಧ ಬೆಸೆದಿದ್ದು, ಈಗ ಇಬ್ಬರೂ ಪರಾರಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಡಿತರ ಚೀಟಿ -ಕೆವೈಸಿ ಕಡ್ಡಾಯ: ಮುಂದಿನ ತಿಂಗಳಿನಿಂದ ಪಡಿತರ ಸ್ಥಗಿತವಾಗದಿರಲು ಈಗಲೇ ಕ್ರಮ ತೆಗೆದುಕೊಳ್ಳಿನೇತಾಜಿ ಸುಭಾಷಚಂದ್ರ ಬೋಸ್‌ ವಿರುದ್ಧ ಹೇಳಿಕೆ : ಬಿಜೆಪಿ ಸಂಸದನಿಗೆ ನೀಡಿದ್ದ ‘ಬಂಗ ವಿಭೂಷಣ’ ಪ್ರಶಸ್ತಿ ಹಿಂಪಡೆದ ಬಂಗಾಳ ಸರ್ಕಾರಬೀದಿ ಗೂಳಿಗಳ ಕಾಳಗಕ್ಕೆ ಪಾದಚಾರಿ ಮಹಿಳೆ ಸಾವುಪಾಕಿಸ್ತಾನ–ಐಸಿಸ್‌ ನಂಟಿನ ಶಂಕೆ : ಕಲಬುರಗಿಯಲ್ಲಿ ಇಬ್ಬರು ವಶಕ್ಕೆಬೆಳಗಾವಿ : ಅನಗೋಳ ಬ್ರಹ್ಮ ಕುಮಾರಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯುವ ದಿನ ಶ್ರಾವಣ ಮಾಸದಲ್ಲಿ ಶಿವಯೋಗದ ಅನುಭಾವ ಅಗತ್ಯ: ಮಂಜುನಾಥ ಮಡಿವಾಳರ6 ಸ್ನೇಹಿತರು…ಹುಚ್ಚು ಕನಸು..ಕಾರು ಮಾರಾಟ..₹1.87 ಲಕ್ಷ: ಟೆಕ್‌ ದೈತ್ಯ ಎಚ್‌ಸಿಎಲ್‌ ಕಟ್ಟಿದ ರೋಚಕ ಕಥೆ ಬಿಚ್ಚಿಟ್ಟ ಸಹ-ಸಂಸ್ಥಾಪಕಲಷ್ಕರ್‌ ಉಗ್ರರ ಜತೆ ವೇದಿಕೆ ಹಂಚಿಕೊಂಡ ಪಾಕಿಸ್ತಾನದ ಮಾಜಿ ಸಚಿವ ; ಭಾರತ ನಾಶ ಮಾಡುವುದಾಗಿ ಬೆದರಿಕೆಪೊನ್ನಣ್ಣ, ದೇಶಪಾಂಡೆಗೆ ಮತ್ತೆ ಹಿಂದಿನ ಹುದ್ದೆಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಧಾನಸಭೆ ಪ್ರವೇಶಿಸುವ ಮುನ್ನ ಬಾಗಿಲಿಗೆ, ನಂತರ ಸಿಎಂ ಪೀಠಕ್ಕೆ ನಮಸ್ಕರಿಸಿದ ಸಿಎಂ..!