Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಭಾರಿ ಸಂಚಲನ : ದೇಶದಲ್ಲಿ ಮತ್ತೆ ಹೊಸ ಶಕೆಗೆ ಕಾರಣವಾಯ್ತು ಸಮೀಕ್ಷೆ

ದೆಹಲಿ : ದೇಶದ ಹಲವು ಸಮೀಕ್ಷಾ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿದೆ. ಈವರೆಗೆ ಬಂದಿರುವ ಸಮೀಕ್ಷೆಗಳ ಪ್ರಕಾರ ಕೇಂದ್ರದಲ್ಲಿ 3ನೇ ಬಾರಿಗೆ ಬಿಜೆಪಿ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

543 ಸದಸ್ಯ ಬಲದ ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳು ಬೇಕಾಗಿದ್ದು, ಪೋಲ್‌ ಆಫ್‌ ಪೋಲ್‌ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ 365 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ 142 ಸ್ಥಾನಗಳನ್ನು ಗೆಲ್ಲಲಿದೆ ಹಾಗೂ ಇತರರು 36 ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದೆ.

ಸಮೀಕ್ಷಾ ಸಂಸ್ಥೆ ಎನ್‌ಡಿಎ (ಬಿಜೆಪಿ+) ಐಎನ್‌ಡಿಐಎ (ಕಾಂಗ್ರೆಸ್‌+) ಇತರರು
ಇಂಡಿಯಾ ನ್ಯೂಸ್-ಡಿ-ಡೈನಾಮಿಕ್ಸ್ 371; 125 47

ಜನ್ ಕಿ ಬಾತ್ 362-392 141-161 10-20

ರಿಪಬ್ಲಿಕ್ ಭಾರತ್-ಮ್ಯಾಟ್ರಿಜ್ 353-368 118-133 43-48

ರಿಪಬ್ಲಿಕ್ ಟಿವಿ-ಪಿ ಮಾರ್ಕ್: 359 154 30

ಇಂಡಿಯಾ ನ್ಯೂ-ಡಿ ಡೈನಾಮಿಕ್ಸ್‌ 371 125 47

ಜನ್‌ಕೀ ಬಾತ್‌ 362-392 141-161 10-20

ರಿಪಬ್ಲಿಕ್‌ ಭಾರತ್‌ -ಮ್ಯಾಟ್ರಿಜ್‌ 353-368 118-133 43-48

ರಿಪಬ್ಲಿಕ್‌ ಟಿವಿ ಪಿ ಮಾರ್ಕ್‌ 359 154 30

ಪೋಲ್‌ ಆಫ್‌ ಪೋಲ್ಸ್‌ 365 142 36

ನ್ಯೂಸ್‌ ನೇಶನ್‌ 342-378 153-169 21-23

TV5 ತೆಲುಗು 359 154
30

ಕರ್ನಾಟಕದಲ್ಲೂ ಎನ್‌ಡಿಎ ಹೆಚ್ಚು ಸೀಟು ಗೆಲ್ಲುತ್ತದೆ ಎಂದ ಎಲ್ಲ ಸಮೀಕ್ಷೆಗಳು

ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ.

ಕರ್ನಾಟಕದಲ್ಲಿಯೂ ಬಹುತೇಕ ಎಲ್ಲ ಸಮೀಕ್ಷೆಗಳು ಎನ್‌ಡಿಎ (ಬಿಜೆಪಿ+ ಜೆಡಿಎಸ್‌ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಕರ್ನಾಟಕದಲ್ಲಿ 28 ಸ್ಥಾನಗಳಿದ್ದು, ಇದರಲ್ಲಿ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ಇಂಡಿಯಾ ಟುಡೇ ಹಾಗೂ ಆ್ಯಕ್ಸಿಸ್ ಸಂಸ್ಥೆಗಳು ನಡೆಸಿರುವ ಸರ್ವೇಯ ಪ್ರಕಾರ, ಬಿಜೆಪಿಗೆ 20ರಿಂದ 22 ಸ್ಥಾನ, ಕಾಂಗ್ರೆಸ್ ಗೆ 3ರಿಂದ 5 ಸ್ಥಾನ ಹಾಗೂ ಜೆಡಿಎಸ್ ಗೆ 2ರಿಂದ 3 ಸ್ಥಾನ ಸಿಗಲಿದೆ. ಇದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 135ರ ಆಸುಪಾಸು ಸ್ಥಾನಗಳನ್ನು ಗೆಲ್ಲಬಹುದು ಎಂದು ಬಹುತೇಕ ಕರಾರುವಾಕ್‌ ಹೇಳಿತ್ತು.

ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಬಿಜೆಪಿ ಈ ಬಾರಿ 18 ಸ್ಥಾನಗಳನ್ನು ಪಡೆಯಲಿದ್ದು, ಎನ್​ಡಿಎ 20 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ 8 ಸ್ಥಾನಗಳನ್ನು ಗೆಲ್ಲಲಿದೆ. ಕಳೆದ ಬಾರಿ 1 ಸ್ಥಾನವನ್ನಷ್ಟೇ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಬಲ ವೃದ್ಧಿಸಿಕೊಂಡಿದೆ. ಕಳೆದ ಬಾರಿ ಒಂದು ಸ್ಥಾನ ಗೆದ್ದಿರುವ ಈ ಬಾರಿಗೆ ಬಿಜೆಪಿ ಜೊತೆಗೆ ಮೈತ್ರಿಮಾಡಿಕೊಂಡ ನಂತರ 2 ಸ್ಥಾನ ಗಳಿಸಲಿದೆ.

ಆಕ್ಸಿಸ್ ಮೈ ಇಂಡಿಯಾ -ಎನ್‌ಡಿಎ 23-25 ​​ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್‌ 3-5 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಿದೆ. ಟುಡೇಸ್ ಚಾಣಕ್ಯದ ಪ್ರಕಾರ ಕರ್ನಾಟಕದಲ್ಲಿ ಎನ್‌ಡಿಎ 24 ಸ್ಥಾನಗಳಲ್ಲಿ ಗೆಲ್ಲಬಹುದು. ಇದರಲ್ಲಿ +/-4 ಆಗಬಹುದು ಎಂದು ಹೇಳಿದೆ. ಇದೇರೀತಿ ಕಾಂಗ್ರೆಸ್ 4 ಸ್ಥಾನಗಳನ್ನು ಗೆಲ್ಲಬಹುದು. +/- 4 ಆಗಬಹುದು ಎಂದು ಹೇಳಿದೆ.
ಸಿಎನ್ ಎಕ್ಸ್ ಸಂಸ್ಥೆಯ ಸಮೀಕ್ಷಾ ವರದಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟಕ್ಕೆ 19ರಿಂದ 25 ಸ್ಥಾನ ಸಿಗಬಹುದೆಂದು ಹೇಳಿದೆ. ಕಾಂಗ್ರೆಸ್ಸಿಗೆ 4ರಿಂದ 8 ಸ್ಥಾನ ಸಿಗಬಹುದು ಎಂದು ಹೇಳಿದೆ. ಎಬಿಪಿ – ಸಿ ವೋಟರ್ ಸಮೀಕ್ಷೆ ಪ್ರಕಾರ,ಎನ್ ಎನ್‌ಡಿಎಗೆ (ಬಿಜೆಪಿ ಹಾಗೂ ಜೆಡಿಎಸ್) 22ರಿಂದ 25 ಸ್ಥಾನ ಸಿಗಲಿದೆ. ಹಾಗೂ ಕಾಂಗ್ರೆಸ್ ಗೆ 3ರಿಂದ 5 ಸ್ಥಾನ ಗೆಲ್ಲಲಿದೆ ಎಂದು ಹೇಳಿದೆ.
ಇಂಡಿಯಾ ಟಿವಿ ನಡೆಸಿರುವ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಯು 18ರಿಂದ 22 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. ಕಾಂಗ್ರೆಸ್ 4ರಿಂದ 8 ಸ್ಥಾನ ಹಾಗೂ ಜೆಡಿಎಸ್ ಗೆ 1ರಿಂದ 3 ಸ್ಥಾನ ಲಭ್ಯವಾಗಲಿದೆ ಎಂದು ಹೇಳಿದೆ.

ನ್ಯೂಸ್ 18 ಹಾಗೂ ಪೋಲ್ ಹಬ್ ಸಂಸ್ಥೆಗಳ ಜಂಟಿ ಸಮೀಕ್ಷೆಯು ರಾಜ್ಯದಲ್ಲಿ ಜೆಡಿಎಸ್ ಗೆ ರಾಜ್ಯದಲ್ಲಿ 1ರಿಂದ 2 ಸ್ಥಾನ, ಬಿಜೆಪಿಗೆ 21ರಿಂದ 24 ಹಾಗೂ ಕಾಂಗ್ರೆಸ್ ಗೆ 3ರಿಂದ 7 ಸ್ಥಾನ ಸಿಗಬಹುದು ಎಂದು ಹೇಳಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ