Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಾರ್ಮುಜ್ ಜಲಸಂಧಿಯಲ್ಲಿ ಸ್ಫೋಟಕ ಇರಿಸುವ ಇರಾನ್ ಬೋಟ್‌ ಕಂಡರೆ ಹೊಡೆದುರುಳಿಸಿ: ಅಮೆರಿಕ ನೌಕಾಪಡೆಗೆ ಟ್ರಂಪ್ ಆದೇಶ

ವಾಷಿಂಗ್ಟನ್ : ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಇರಾನ್ ಸ್ಫೋಟಕಗಳನ್ನು (Mines) ಅಳವಡಿಸುತ್ತಿದೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಅಂತಹ ಕೃತ್ಯದಲ್ಲಿ ತೊಡಗಿರುವ ಯಾವುದೇ ಇರಾನಿ ಬೋಟ್‌ಗಳನ್ನು ಕಂಡ ಕೂಡಲೇ ‘ಹೊಡೆದುರುಳಿಸಲು’ (Shoot and Kill) ಅಮೆರಿಕ ನೌಕಾಪಡೆಗೆ ಗುರುವಾರ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ತಮ್ಮ ‘ಟ್ರೂತ್ ಸೋಶಿಯಲ್’ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಟ್ರಂಪ್, “ಹಾರ್ಮುಜ್ ಜಲಸಂಧಿಯ ನೀರಿನಲ್ಲಿ ಸ್ಫೋಟಕಗಳನ್ನು ಇರಿಸುತ್ತಿರುವ ಯಾವುದೇ ಬೋಟ್‌ಗಳು, ಅವು ಎಷ್ಟೇ ಚಿಕ್ಕದಾಗಿದ್ದರೂ ಸರಿ, ಅವುಗಳನ್ನು ಹೊಡೆದುರುಳಿಸಲು ನಾನು ನೌಕಾಪಡೆಗೆ ಸೂಚಿಸಿದ್ದೇನೆ. ಇದರಲ್ಲಿ ಯಾವುದೇ ಹಿಂಜರಿಕೆ ಬೇಡ,” ಎಂದು ಗುಡುಗಿದ್ದಾರೆ. ಅಲ್ಲದೆ, ಇರಾನ್‌ನ ಸುಮಾರು 159 ನೌಕಾ ಹಡಗುಗಳು ಈಗಾಗಲೇ ಸಮುದ್ರದ ತಳ ಸೇರಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಜಲಸಂಧಿಯ ಮೇಲೆ ಹಿಡಿತ ; ಅಮೆರಿಕ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಹೇಳಿಕೊಂಡಿರುವ ಟ್ರಂಪ್, “ಅಮೆರಿಕ ನೌಕಾಪಡೆಯ ಅನುಮತಿಯಿಲ್ಲದೆ ಯಾವುದೇ ಹಡಗು ಒಳಬರುವಂತಿಲ್ಲ ಅಥವಾ ಹೊರಹೋಗುವಂತಿಲ್ಲ. ಇರಾನ್ ಒಂದು ಒಪ್ಪಂದಕ್ಕೆ (Deal) ಬರುವವರೆಗೆ ಈ ಮಾರ್ಗವನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ,” ಎಂದು ತಿಳಿಸಿದ್ದಾರೆ.ಜಲಸಂಧಿಯಲ್ಲಿ ಸ್ಫೋಟಕಗಳನ್ನು ತೆರವುಗೊಳಿಸುವ ಕಾರ್ಯವನ್ನು ಮೂರು ಪಟ್ಟು ವೇಗಗೊಳಿಸಲು ಟ್ರಂಪ್ ಆದೇಶಿಸಿದ್ದಾರೆ.

ಇರಾನ್ ಎಚ್ಚರಿಕೆ:

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಸುಮಾರು 1,400 ಚದರ ಕಿಲೋಮೀಟರ್ ಪ್ರದೇಶವನ್ನು ‘ಅಪಾಯಕಾರಿ ವಲಯ’ ಎಂದು ಘೋಷಿಸಿದ್ದು, ಅಲ್ಲಿ ಸ್ಫೋಟಕಗಳು ಇರಬಹುದು ಎಂದು ಎಚ್ಚರಿಸಿದೆ.

ಈ ಜಲಸಂಧಿಯನ್ನು ಮುಚ್ಚಿರುವುದರಿಂದ ಜಾಗತಿಕವಾಗಿ ತೈಲ ಮತ್ತು ಅನಿಲ ಬೆಲೆಗಳಲ್ಲಿ ಭಾರಿ ಏರಿಕೆಯಾಗಿದ್ದು, ವಿಶ್ವದ ಆರ್ಥಿಕತೆಯ ಮೇಲೆ ಹೊಡೆತ ಬಿದ್ದಿದೆ.

 

ಪೆಂಟಗನ್ ಸ್ಪಷ್ಟನೆ:

ಹಾರ್ಮುಜ್ ಜಲಸಂಧಿಯನ್ನು ಸ್ಫೋಟಕಗಳಿಂದ ಮುಕ್ತಗೊಳಿಸಲು ಆರು ತಿಂಗಳು ಬೇಕಾಗಬಹುದು ಎಂಬ ಮಾಧ್ಯಮ ವರದಿಗಳನ್ನು ಪೆಂಟಗನ್ ವಕ್ತಾರ ಸೀನ್ ಪಾರ್ನೆಲ್ ತಳ್ಳಿಹಾಕಿದ್ದಾರೆ. “ಆರು ತಿಂಗಳ ಕಾಲ ಜಲಸಂಧಿಯನ್ನು ಮುಚ್ಚಿಡುವುದು ಅಸಾಧ್ಯದ ಮಾತು ಮತ್ತು ಇದು ಅಮೆರಿಕಕ್ಕೆ ಒಪ್ಪಿತವಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವರದಿಗಳ ಪ್ರಕಾರ, ಇರಾನ್ ಜಿಪಿಎಸ್ ತಂತ್ರಜ್ಞಾನ ಬಳಸಿ ಪತ್ತೆಹಚ್ಚಲು ಕಷ್ಟವಾಗುವಂತಹ ಸುಮಾರು 20ಕ್ಕೂ ಹೆಚ್ಚು ಸುಧಾರಿತ ಸ್ಫೋಟಕಗಳನ್ನು ನೀರಿನಲ್ಲಿ ಬಿಟ್ಟಿರುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರುನಾಡಿಗೆ ಜಲಕಂಟಕ, ಭುವಿಯೇ ತಲ್ಲಣ : ಭವಿಷ್ಯ ನುಡಿದ ಪ್ರಖ್ಯಾತ ಸ್ವಾಮೀಜಿ...!ಬಾಟಲಿ, ಕ್ಯಾನ್‌ಗಳಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ನಿಷೇಧ...!ಕೊನೆಗೂ ಸಿಹಿಸುದ್ದಿ : ಶೀಘ್ರದಲ್ಲೇ ಮಾರ್ಚ್, ಏಪ್ರಿಲ್ ಗೃಹಲಕ್ಷ್ಮೀ ಹಣ ಜಮಾ:  ಲಕ್ಷ್ಮೀ ಹೆಬ್ಬಾಳಕರ್ ಕೊಟ್ರು ಈ ಗುಡ್ ನ್ಯೂಸ್..!ನೈರುತ್ಯ ರೇಲ್ವೆ ಅಧಿಕಾರಿಗಳೊಂದಿಗೆ ಸಂಸದ ಶೆಟ್ಟರ್ ಸಭೆಬೆಳಗಾವಿ : 12ಕ್ಕೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಸರಕಾರಿ ನೌಕರರಿಗೆ ಸಿಹಿಸುದ್ದಿ : ತುಟ್ಟಿಭತ್ಯೆ ಹೆಚ್ಚಳ ಪ್ರಜಾಪ್ರಭುತ್ವದ ತತ್ವಗಳನ್ನು ರಕ್ಷಿಸುವುದು ನಾಗರಿಕರ ಆದ್ಯ ಕರ್ತವ್ಯ : ಎ.ಎಸ್.ಪಾಶ್ಚಾಪುರೆಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಅನುಮಾನಾಸ್ಪದ ವಸ್ತುಗಳಿದ್ದ ಬ್ಯಾಗ್‌ ಪತ್ತೆತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ ಪ್ರಮಾಣ ವಚನ