Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

119 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ

 

ನವದೆಹಲಿ: ಗೂಗಲ್ ಪ್ಲೇ ಸ್ಟೋರ್‌ನಿಂದ 119 ಚೀನೀ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ಸೂಚನೆ ನೀಡುವ ಮೂಲಕ ಸರ್ಕಾರವು ಮತ್ತೊಂದು ಡಿಜಿಟಲ್ ಕಾರ್ಯಾಚರಣೆ ಪ್ರಾರಂಭಿಸಿದೆ.
ಈ ಅಪ್ಲಿಕೇಶನ್‌ಗಳು ಚೀನಾ ಮತ್ತು ಹಾಂಗ್ ಕಾಂಗ್‌ನ ಡೆವಲಪರ್‌ಗಳ ಜೊತೆ ಸಂಪರ್ಕ ಹೊಂದಿವೆ, ನಿರ್ಬಂಧಿಸಿದ ಅಪ್ಲಿಕೇಶನ್‌ಗಳಲ್ಲಿ ಹಲವು ವೀಡಿಯೊ ಮತ್ತು ಧ್ವನಿ ಚಾಟ್ ಪ್ಲಾಟ್‌ಫಾರ್ಮ್‌ಗಳು ಸೇರಿವೆ. ಈ ಎಲ್ಲಾ ಅಪ್ಲಿಕೇಶನ್‌ಗಳು ಭಾರತದ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದವು. ಈ ಅಪ್ಲಿಕೇಶನ್‌ಗಳು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಅಪಾಯವನ್ನುಂಟು ಮಾಡುತ್ತದೆ ಎಂಬ ಆತಂಕದ ನಂತರ ಈ ಕ್ರಮವು ಬಂದಿದೆ. ಈ ಮೊದಲು ಟಿಕ್‌ಟಾಕ್ ಮತ್ತು ಶೇರ್‌ ಇಟ್‌ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ ನೂರಾರು ಚೀನೀ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸುವ ಮೂಲಕ ಭಾರತವು 2020 ರಲ್ಲಿ ಡಿಜಿಟಲ್ ನಿಷೇಧವನ್ನು ಪ್ರಾರಂಭಿಸಿತು.

ಮನಿ ಕಂಟ್ರೋಲ್‌ನ ವರದಿ ಪ್ರಕಾರ, ಇಷ್ಟೊಂದು ದೊಡ್ಡ ಸಂಖ್ಯೆಯ ಮೊಬೈಲ್‌ ಆ್ಯಪ್​ಗಳನ್ನು ನಿಷೇಧಿಸುವ ನಿರ್ಧಾರ 2020 ರ ನಂತರ ಇದೇ ಮೊದಲ ಬಾರಿ ಆಗಿದೆ. 2020 ರಲ್ಲಿ ಸಹ, ಕೇಂದ್ರ ಸರ್ಕಾರವು ಚೀನಾದ ಅಪ್ಲಿಕೇಶನ್‌ಗಳ ಮೇಲೆ ನಿಷೇಧವನ್ನು ಪ್ರಕಟಿಸಿತ್ತು. ಈ ಬಾರಿಯೂ ರಾಷ್ಟ್ರೀಯ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ.
ಚೀನೀ ಅಪ್ಲಿಕೇಶನ್‌ಗಳ ಮೇಲಿನ ಈ ನಿಷೇಧವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವು ಐಟಿ ಕಾಯಿದೆ 69A ಅನ್ನು ಜಾರಿಗೊಳಿಸಿತು. ನಿಷೇಧಿತ ಪಟ್ಟಿಯಲ್ಲಿರುವ ಕೆಲವು ಅಪ್ಲಿಕೇಶನ್‌ಗಳನ್ನು ಸಿಂಗಾಪುರ, ಅಮೆರಿಕ, ಯುಕೆ ಮತ್ತು ಆಸ್ಟ್ರೇಲಿಯಾ ದೇಶದ ಕಂಪನಿಗಳು ಅಭಿವೃದ್ಧಿಪಡಿಸಿವೆ.

ವರದಿಯ ಪ್ರಕಾರ, ಭಾರತ ಸರ್ಕಾರವು ಈ ಅಪ್ಲಿಕೇಶನ್‌ಗಳಿಗೆ ಸಾರ್ವಜನಿಕ ಪ್ರವೇಶವನ್ನು ಸ್ಥಗಿತಗೊಳಿಸಿದೆ ಮತ್ತು 119 ರಲ್ಲಿ 15 ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ, ಇನ್ನೂ ಹಲವಾರು ಪ್ರವೇಶಿಸಬಹುದಾಗಿದೆ.
ನಿಭಾರತ ಸರ್ಕಾರ ನಿರ್ಬಂಧಿಸಿದ 119 ಅಪ್ಲಿಕೇಶನ್‌ಗಳಲ್ಲಿ, ಕೇವಲ ಮೂರು ಅಪ್ಲಿಕೇಶನ್‌ಗಳ ಹೆಸರು ಮಾತ್ರ ರಿವೀಲ್ ಆಗಿದೆ. ಇವುಗಳಲ್ಲಿ ಸಿಂಗಾಪುರ ಮೂಲದ ವಿಡಿಯೋ ಚಾಟ್ ಮತ್ತು ಗೇಮಿಂಗ್ ಪ್ಲಾಟ್‌ಫಾರ್ಮ್ ಚಿಲ್‌ಚಾಟ್, ಚೀನೀ ಡೆವಲಪರ್ ಚಾಂಗ್‌ ಆ್ಯಪ್ ಮತ್ತು ಆಸ್ಟ್ರೇಲಿಯಾದ ಅಪ್ಲಿಕೇಶನ್ ಹನಿಕಾಂಬ್ ಸೇರಿವೆ. ಭದ್ರತಾ ಕಾರಣಗಳಿಗಾಗಿ ನಿಷೇಧಿಸಲಾದ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿಲ್ಲ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ