ಈರೋಡ್: ತಮಿಳುನಾಡಿನ ದೇಗುಲವೊಂದರಲ್ಲಿ ದೇವರ ಎದುರು ಇರಿಸಿದ್ದ ಕೇವಲ ಒಂದೇ ನಿಂಬೇಹಣ್ಣಿಗೆ ಭಕ್ತರೊಬ್ಬರು ಬರೋಬ್ಬರಿ 35,000 ರು. ನೀಡಿ ಹರಾಜಿನಲ್ಲಿ ಖರೀದಿ ಮಾಡಿದ್ದಾರೆ. ಈರೋಡ್ ನಿಂದ 35 ಕಿಲೋಮೀಟರ್ ದೂರದಲ್ಲಿರುವ ಶಿವಗಿರಿ ಗ್ರಾಮದ ಪಳಪೂಸಾಯಿನ್ ದೇಗುಲದಲ್ಲಿ ಯಾವ ವ್ಯಕ್ತಿ ದೇವರ ಎದುರು ಪೂಜೆ ಮಾಡಿ ಇರಿಸಿದ್ದ ನಿಂಬೆಹಣ್ಣನ್ನು ಖರೀದಿ ಮಾಡುವರೋ, ಅವರಿಗೆ ಐಶ್ವರ್ಯ, ಒಳ್ಳೆಯ ಆರೋಗ್ಯ ಹಾಗೂ ಸನ್ಮಂಗಲವಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಶಿವರಾತ್ರಿ ನಿಮಿತ್ತ ಹರಾಜು ಪ್ರಕ್ರಿಯೆಯಲ್ಲಿ 15 ಭಕ್ತರು ಭಾಗವಹಿಸಿದ್ದರು. ಅದರಲ್ಲೊಬ್ಬರು ದೇವರ ಎದುರು ಇಟ್ಟಿದ್ದ ನಿಂಬೆ ಹಣ್ಣನ್ನು 35,000 ರೂ.ನೀಡಿ ಖರೀದಿ ಮಾಡಿದ್ದಾರೆ.
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.