Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಶರಣರು ಜನಪರವಾದ ಸಾಹಿತ್ಯಕ್ಕೆ ಒತ್ತು ನೀಡಿದರು: ಡಾ.ವಿದ್ಯಾವತಿ ಕುಂದರಗಿ* *ಮಹಾಸಭೆಯಲ್ಲಿ ಅಮವಾಸ್ಯೆ ಅನುಭಾವ ಗೋಷ್ಠಿ

Advertisement

ಬೆಳಗಾವಿ: ಜೂನ: ಹನ್ನೆರಡನೆಯ ಶತಮಾನದ ಶರಣರು ಜನಸಾಮಾನ್ಯರಿಗೆ ಹತ್ತಿರವಾದ ಸರಳಕನ್ನಡದಲ್ಲಿ ಸಾಹಿತ್ಯವನ್ನು ರಚಿಸಿದರು. ಕನ್ನಡ ಕಲಿಕೆಗೆ ಹೆಚ್ಚು ಆದ್ಯತೆ  ನೀಡಿದ್ದು ಉಲ್ಲೇಖಾರ್ಹವೆನಿಸಿದೆ. ಹಾಗಾಗೀ ಎಲ್ಲವರ್ಗದ ಅಸಂಖ್ಯ ಶರಣ ಶರಣೆಯರು ಅದ್ಭುತವಾದ ವಚನಗಳ ರಚನೆ ಮಾಡಿದ್ದು ವಚನಗಳಿಂದ ತಿಳಿಯುತ್ತದೆ. ಅವರ ಶೈಕ್ಷಣಿಕ ಪರಿಕಲ್ಪನೆಗೆ ವಚನಗಳೇ ಸಾಕ್ಷಿಯಾಗಿವೆ ಎಂದು ಸರಕಾರಿ ಶಿಕ್ಷಣ ತರಬೇತಿ ಕೇಂದ್ರದ ಉಪನ್ಯಾಸಕಿ ಡಾ. ವಿದ್ಯಾವತಿ ಕುಂದರಗಿ ಹೇಳಿದರು.

ಅವರು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ ವಚನ ಸಾಹಿತ್ಯದಲ್ಲಿ ಶಿಕ್ಷಣದ ಪರಿಕಲ್ಪನೆ ವಿಷಯ ಕುರಿತು ಉಪನ್ಯಾಸ ನೀಡಿದರು. ಸಮಾಜದಲ್ಲಿ ಸಮಾನತೆಯನ್ನು ತರಲು ಮಾಡಿದ ಶರಣರ ಕ್ರಾಂತಿ ಜಾಗತಿಕ ನೆಲೆಯಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿತು. ಅನುಭವ ಮಂಟಪವು ಅನುಭಾವ ಸಾಹಿತ್ಯಕ್ಕೆ ವ್ಯಾಖ್ಯಾನ ಬರೆಯಿತು. ಮಾತ್ರವಲ್ಲದೆ ಶಿಕ್ಷಣದ ಮಹತ್ವದ ಕೇಂದ್ರವೆನಿಸಿತ್ತು. ಕಾಯಕ ದಾಸೋಹವನ್ನು ಕಡ್ಡಾಯಗೊಳಿಸಿದ್ದ ಶರಣರು ಎಲ್ಲ ವರ್ಗವರು ಮುಕ್ತವಾಗಿ ಶಿಕ್ಷಣ ಪಡೆಯುವಂತೆ ಮಾಡಿದ್ದರ ಫಲವೇ ಅಮೂಲ್ಯವಾದ ಅನುಭಾವ ಸಾಹಿತ್ಯ ಮೂಡಿಬರಲು ಸಾಧ್ಯವಾಯಿತು. ಶಿಕ್ಷಣದಲ್ಲಿ ಅವರು ನೀಡಿದ ಸಮಾನತೆ ಇಂದಿಗೂ ಅನುಕರಣೀಯವೆನಿಸಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭೆ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ, ಶರಣರ ವಿಚಾರಗಳು ಲೋಕಪೂಜ್ಯನೀಯವೆನಿಸಿವೆ. ನಮ್ಮ ಒತ್ತಡದ ಬದುಕಿಗೆ ಅವು ದಿವ್ಯೌಷಧಿಗಳಾಗಿವೆ. ಮಹಾಸಭೆಯು ತನ್ನ ರಚನಾತ್ಮಕ ಕರ‍್ಯಗಳಿಂದ ಸಮಾಜಮುಖಿಯಾಗಿ ಕರ‍್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಹಿರಿಯ ಚಿಂತಕಿ ಡಾ.ಗುರುದೇವಿ ಹುಲೆಪ್ಪನವರಮಠ ಅವರು ಮಾತನಾಡಿ, ಶರಣರು ನೀಡಿದ ವಿಶ್ವಮಾನವೀಯತೆ ಸಂದೇಶಗಳು ಜೀವನಕ್ಕೆ ಸೋಪಾನವೆನಿಸಿವೆ. ಅವುಗಳನ್ನು ನಿತ್ಯ ಬದುಕಿಗೆ ಅಳವಡಿಸಿಕೊಳ್ಳಬೇಕು. ವಚನಗಳಲ್ಲಿ ಬದುಕಿನ ಎಲ್ಲ ಮುಖಗಳ ದರ್ಶನವಿದೆ. ಪ್ರಕೃತಿಯ ಚರಾಚರದಲ್ಲಿ ದೈವತ್ವವನ್ನು ಕಂಡ ಅವರು ಭವ್ಯಮಾನವರಾದರು. ಅವರ ದರ್ಶನಸಾರವನ್ನು ಅರಿತುಕೊಳ್ಳೋಣವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆಎಲ್‌ಇ ಸಂಗೀತ ಮಹಾವಿದ್ಯಾಲಯದ ಡಾ.ಸುನೀತಾ ಪಾಟೀಲ, ದುರ್ಗಾ ನಾಡಕರ್ಣಿ, ಡಾ.ವಿದ್ಯಾವತಿ ಕುಂದರಗಿ ಅವರನ್ನು ಸತ್ಕರಿಸಲಾಯಿತು. ಡಾ.ಎಚ್.ಬಿ.ರಾಜಶೇಖರ, ಡಾ.ಎಫ್.ವ್ಹಿ.ಮಾನ್ವಿ, ಪ್ರಸಾದ ಹಿರೇಮಠ, ಆರ್.ಪಿ.ಪಾಟೀಲ, ಪ್ರಕಾಶ ಬಾಳೇಕುಂದ್ರಿ, ವಿ.ಕೆ.ಪಾಟೀಲ, ಜ್ಯೋತಿ ಬದಾಮಿ, ಸರೋಜನಿ ನಿಶಾನದಾರ, ವಿದ್ಯಾ ಗೌಡರ, ವಿದ್ಯಾ ಹುಂಡೇಕರ ಉಪಸ್ಥಿತರಿದ್ದರು. ಶಾರದಾ ಪ್ರಸಾದ ಹಿರೇಮಠ ವಚನ ಪ್ರಾರ್ಥನೆ ಮಾಡಿದರು. ಪ್ರಸಾದ ಹಿರೇಮಠ ಸ್ವಾಗತಿಸಿದರು. ಶೈಲಾ ಸಂಸುದ್ದಿ ಪರಿಚಯಿಸಿದರು. ಪ್ರೇಮಾ ಪಾನಶೆಟ್ಟಿ ವಚನ ವಿಶ್ಲೇಷಣೆ ಮಾಡಿದರು. ಶ್ವೇತಾ ಹೆದ್ದೂರಶೆಟ್ಟಿ ನಿರೂಪಿಸಿದರು. ಮಹಾಂತೇಶ ಮೆಣಸಿನಕಾಯಿ ವಂದಿಸಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟೆಲಿಗ್ರಾಮ್ ನಿರ್ಬಂಧಿಸಿದ ಕೇಂದ್ರ ಸರ್ಕಾರಶರಣರು ಜನಪರವಾದ ಸಾಹಿತ್ಯಕ್ಕೆ ಒತ್ತು ನೀಡಿದರು: ಡಾ.ವಿದ್ಯಾವತಿ ಕುಂದರಗಿ* *ಮಹಾಸಭೆಯಲ್ಲಿ ಅಮವಾಸ್ಯೆ ಅನುಭಾವ ಗೋಷ್ಠಿರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ಹಣದ ತೊಂದರೆಯುದ್ದರೂ ಪರರ ಹಣ ಬೇಡವೆಂದು ಚಿಕ್ಕೋಡಿಯಲ್ಲಿ ಪ್ರಾಮಾಣಿಕತೆ ಮೆರೆದ ಕುಂದಾಪುರದ ವ್ಯಕ್ತಿ..!ಐಎಎಸ್‌ ಅಧಿಕಾರಿಗಳೂ ಸೇರಿದಂತೆ ಎಲ್ಲರ ಮೇಲೂ ‘ಎಐ’ ಕಣ್ಗಾವಲು | ಕರ್ತವ್ಯದ ಸ್ಥಳದ ಮಾಹಿತಿ ಸರ್ಕಾರಕ್ಕೆ ಲಭ್ಯಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ…! ಇದರ ಬಗ್ಗೆ ಗೊತ್ತೆ..?ಭಕ್ತಿ ಸಂಗೀತದಿಂದ ಯಾಂತ್ರಿಕ ಜೀವನದಿಂದ ಹೊರ ಬರಲು ಸಾಧ್ಯ: ಎಂ.ಜಿ.ರಾವ್ಜೂನ್ ಮೊದಲಾರ್ಧದಲ್ಲಿ ಕೈಕೊಟ್ಟ ಮುಂಗಾರು ; ದೇಶಾದ್ಯಂತ ಶೇ. 32 ರಷ್ಟು ಮಳೆ ಕೊರತೆ; ಐಎಂಡಿ ಕಳವಳಕಾರಿ ವರದಿಓಂ ನಮಃ ಶಿವಾಯ..!ಕೊನೆಗೂ ಜೈಲಿನಿಂದ ಹೊರಬಂದ ನೀಲಣ್ಣವರ...! ಬರೋಬ್ಬರಿ ತಿಂಗಳ ನಂತರ ಬಂಧನದಿಂದ ಮುಕ್ತರಾಧ ಶಿವಾನಂದ...!ರೇಣುಕಾಸ್ವಾಮಿ ಕೇಸ್ ಮಾದರಿಯಲ್ಲೇ ಬಳ್ಳಾರಿಯಲ್ಲಿ ಭೀಕರ ಹತ್ಯೆ! ಹೆಂಡತಿಗೆ ಕಿರುಕುಳ ನೀಡಿದ್ದ ಯುವಕನಿಗೆ ಚಟ್ಟ ಕಟ್ಟಿದ ಪತಿ: ದಂಪತಿ ಸೇರಿ ಮೂವರ ಬಂಧನ