Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅಜಿಂಕ್ಯ ರಹಾನೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ

ನವದೆಹಲಿ: ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಅಜಿಂಕ್ಯ ರಹಾನೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ.

ಬ್ಯಾಟಿಂಗ್ ಮಾತ್ರವಲ್ಲದೆ, ಸ್ಲಿಪ್‌ನಲ್ಲಿ ಅವರು ತೋರುತ್ತಿದ್ದ ಕ್ಯಾಚಿಂಗ್ ಕೌಶಲ ತಂಡದ ಗೆಲುವಿನ ಬಲವನ್ನು ಹೆಚ್ಚಿಸಿತ್ತು. ತಾಳ್ಮೆ, ಒತ್ತಡದ ಸಂದರ್ಭದಲ್ಲಿ ಸಂಯಮ, ತಮ್ಮ ನಾಯಕತ್ವ ಗುಣ ಮತ್ತು ನಿಸ್ವಾರ್ಥ ಆಟದ ಮೂಲಕ ರಹಾನೆ ಭಾರತೀಯ ಕ್ರಿಕೆಟ್‌ನಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದ್ದಾರೆ.

ಒಂದು ದಶಕ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ರಹಾನೆ, ತಮ್ಮ ಬ್ಯಾಟಿಂಗ್ ತಂತ್ರ, ಮೈದಾನದಲ್ಲಿ ಸಂಯಮ ಮತ್ತು ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಭಾರತದ ಪರ 85 ಟೆಸ್ಟ್, 90 ಏಕದಿನ ಮತ್ತು 20 ಟಿ-20 ಪಂದ್ಯಗಳನ್ನು ಆಡಿರುವ ಅವರು, ಎಲ್ಲಾ ಮಾದರಿಗಳಿಂದ ಒಟ್ಟು 8,000ಕ್ಕೂ ಅಧಿಕ ರನ್‌ಗಳನ್ನು ಕಲೆಹಾಕಿದ್ದಾರೆ.

ರಹಾನೆ ಅವರ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತ್ಯಂತ ಸ್ಮರಣೀಯ ಕ್ಷಣವೆಂದರೆ 2020-21ರ ಆಸ್ಟ್ರೇಲಿಯಾ ಪ್ರವಾಸದ ಬಾರ್ಡ‌ರ್-ಗವಾಸ್ಕರ್ ಟ್ರೋಫಿ. ಪ್ರಮುಖ ಆಟಗಾರರ ಗಾಯದ ಸಮಸ್ಯೆಯಿಂದ ಕಂಗೆಟ್ಟಿದ್ದ ಯುವ ಭಾರತೀಯ ತಂಡವನ್ನು ಮುನ್ನಡೆಸಿದ ರಹಾನೆ, ಅಲ್ಲಿ ಶತಕ ಸಿಡಿಸುವುದರೊಂದಿಗೆ ತಂಡವನ್ನು ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನತ್ತ ಮುನ್ನಡೆಸಿದ್ದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಜಿಂಕ್ಯ ರಹಾನೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿನಿಪ್ಪಾಣಿ ರಾಷ್ಟ್ರೀಯ  ಹೆದ್ದಾರಿ ಕುಸಿತ : ಭಾರಿ ವೈರಲ್ಪಾಶ್ಚಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಕಾಲೀನ ರಾಜಕೀಯ ಕುರಿತು ವಿಶೇಷ ಉಪನ್ಯಾಸ ಯಶಸ್ವಿಪ್ರಯತ್ನ ಇಲ್ಲದೆ ಏನನ್ನು ಸಾಧಿಸಲು ಸಾಧ್ಯವಿಲ್ಲ ಅನಗತ್ಯ ವೆಚ್ಚ ಕಡಿವಾಣಕ್ಕೆ ಕೇಂದ್ರದ ಕ್ರಮ ; ಒಬ್ಬ ಅಧಿಕಾರಿ–ಒಂದು ಕಾರು’ ನೀತಿ ಜಾರಿವಿಶ್ವದ ಅತಿದೊಡ್ಡ 582 ಟನ್ ಸೂಪರ್‌ಕಂಡಕ್ಟಿಂಗ್ ಮ್ಯಾಗ್ನೆಟ್ ನಿರ್ಮಿಸಿದ ಚೀನಾ ; ʼಕೃತಕ ಸೂರ್ಯʼನ ಸೃಷ್ಟಿಸುವತ್ತ ದಾಪುಗಾಲು…!ರಾಜಾ ಲಖಮಗೌಡರು ಶೈಕ್ಷಣಿಕ ಚಿಂತನೆ ಕಳಕಳಿ ಉಳ್ಳವರಾಗಿದ್ದರು : ಗಜಾನನ ನಾಯಕಇನ್‌ಸ್ಟಾಗ್ರಾಂನಲ್ಲಿ ಮೋದಿ ದಾಖಲೆ : 10.5 ಕೋಟಿ ಫಾಲೋವರ್ಸ್‌ ; ವಾರದಲ್ಲೇ 40 ಲಕ್ಷ ಹೊಸ ಫಾಲೋವರ್ಸ್‌ಗಳ ಸೇರ್ಪಡೆಪಾಶ್ಚಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನ ಆಚರಣೆಬೃಹತ್ ಬೆಳಗಾವಿ ಮಹಾನಗರ ಪಾಲಿಕೆ  ಘೋಷಣೆ ಮಾಡುವಂತೆ ಸಚಿವ ಯತೀಂದ್ರ ಸಿದ್ದರಾಮಯ್ಯಗೆ ಮನವಿ