Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿಸಿ:  ಕೇಂದ್ರ ಸಚಿವರೊಂದಿಗೆ ಸಂಸದ ಶೆಟ್ಟರ ಚರ್ಚೆ

ಬೆಳಗಾವಿ :

ಬೆಂಗಳೂರು - ಬೆಳಗಾವಿ - ಬೆಂಗಳೂರು ಹಾಗೂ ನವದೆಹಲಿ - ಬೆಳಗಾವಿ - ನವದೆಹಲಿ ನಡುವೆ ವಿಮಾನಯಾನ ಸೇವೆ ಒದಗಿಸುತ್ತಿರುವ ಇಂಡಿಗೋ ಸಂಸ್ಥೆ ಸಪ್ತಾಹದಲ್ಲಿ ಕೇವಲ ಆಯ್ದ ದಿನಗಳಲ್ಲಿ ಮಾತ್ರ ಸೇವೆಯನ್ನು ಒದಗಿಸುತ್ತಿದ್ದು, ಇದನ್ನು ಮಾರ್ಪಡಿಸಿ ಈ ಮೊದಲಿನಂತೆಯೇ ದಿನನಿತ್ಯದ ಸೇವೆಯನ್ನು ಒದಗಿಸುವ ಕುರಿತಾಗಿ ಪ್ರಸ್ತಾಪಿಸಿ ಸಂಸದ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಶುಕ್ರವಾರ ಕೇಂದ್ರ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಅವರನ್ನು ನವ ದೆಹಲಿಯ ನೂತನ ಸಂಸತ್ ಭವನದ ಅವರ ಕೊಠಡಿಯಲ್ಲಿ ಭೇಟಿ ಮಾಡಿ ಮನವಿ ಅರ್ಪಿಸಿದರು.

ಇಂಡಿಗೋ ಸಂಸ್ಥೆ ಜೂನ್  16 ರಿಂದ ಬೆಂಗಳೂರು-ಬೆಳಗಾವಿ ನಡುವೆ ವಿಮಾನಯಾನ ಸೇವೆಯನ್ನು ಕೇವಲ ಸೋಮವಾರ, ಬುಧವಾರ, ಶುಕ್ರವಾರ ಮತ್ತು ರವಿವಾರಗಳಂದು ಬೆಳಗ್ಗೆ ಹಾಗೂ ಮಂಗಳವಾರ, ಗುರುವಾರ ಹಾಗೂ ಶನಿವಾರದಂದು ಸಂಜೆ ಮಾತ್ರ ಒದಗಿಸುತ್ತಿದೆ.

ಅದರಂತೆ ನವದೆಹಲಿ-ಬೆಳಗಾವಿ ನಡುವೆ ಕೇವಲ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಮಾತ್ರ ಸೇವೆ ಒದಗಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತುಂಬಾ ಅನಾನುಕೂಲತೆಯಾಗಿದೆ. ಪ್ರಯುಕ್ತ ಪ್ರಸ್ತಾಪಿತ ಮಾರ್ಗದಲ್ಲಿ ಈ ಮೊದಲಿನಂತೆ ದಿನ ನಿತ್ಯದ ಸೇವೆಯನ್ನು ಒದಗಿಸುವಂತೆ ಸೂಕ್ತ ಸೂಚನೆಯನ್ನು ಇಂಡಿಗೋ ಸಂಸ್ಥೆಗೆ ನೀಡುವಂತೆ ಸಂಸದರು ಕೇಂದ್ರ ಸಚಿವರಲ್ಲಿ ಕೋರಿದರು.

ಬೆಳಗಾವಿ ಬಹು ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವ ನಗರ. ಈ ಹಿನ್ನಲೆಯಲ್ಲಿ ಈಗಿರುವ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸುವ ಬಗ್ಗೆಯೂ ಸೇರಿದಂತೆ, ಬೆಳಗಾವಿಯಿಂದ ಚೆನ್ನೈ, ಪುಣೆ ಮತ್ತು ಅಹಮದಾಬಾದ್ ನಗರಗಳಿಗೂ ನೂತನ ವಿಮಾಣ ಸೇವೆ ಒದಗಿಸುವ ಕುರಿತು ಸಹ ಚರ್ಚಿಸಿ, ಮುಂದಿನ ತುರ್ತು ಕ್ರಮ ಜರುಗಿಸಲು ಅವರು ಕೋರಿದರು.

ಪ್ರಸ್ತಾಪಿತ ಎಲ್ಲ ಬೇಡಿಕೆಗಳನ್ನು ಅವಲೋಕಿಸಿದ ಕೇಂದ್ರ ಸಚಿವರು, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ಶೀಘ್ರ ಕ್ರಮ ಕೈಕೊಳ್ಳುವ ಭರವಸೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಚಿತ್ರ ಕಳ್ಳತನ : ದೇವರ ಕ್ಷಮೆ ಕೋರಿ ದೇವಾಲಯದ ಹುಂಡಿ ದೋಚಿದ ಕಳ್ಳರು…!ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿಸಿ:  ಕೇಂದ್ರ ಸಚಿವರೊಂದಿಗೆ ಸಂಸದ ಶೆಟ್ಟರ ಚರ್ಚೆಮಾಜಿ ಬಸ್ ಚಾಲಕನ ಮನೆಯಲ್ಲಿ ₹28 ಕೋಟಿ ನಗದು, 15 ಕೆಜಿ ಚಿನ್ನ ಪತ್ತೆ….!ಕರ್ನಾಟಕದ 5 ಜಿಲ್ಲೆಗಳಲ್ಲಿ ಭಾರಿ ಗಾಳಿ ಮಳೆಯ ಮುನ್ಸೂಚನೆ ; ಆರೆಂಜ್‌ ಅಲರ್ಟ್‌ ಘೋಷಣೆತೀವ್ರ ಚರ್ಚೆಯ ಬಳಿಕ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಅಂಗೀಕಾರಕಾವೇರಿ ವಿಚಾರವಾಗಿ ಭಾನುವಾರ ಸರ್ವಪಕ್ಷ ಸಭೆ: ಸಂಪುಟ ಇಲ್ಲದೇ ಯಡಿಯೂರಪ್ಪ ಒಬ್ಬರೇ ಅಧಿಕಾರ ಅನುಭವಿಸಲಿಲ್ಲವೇ?: ಸಿಎಂಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : ಕರ್ನಾಟಕದಲ್ಲಿ 84.31 ಲಕ್ಷ ʼಎಎಸ್‍ಡಿಡಿಒʼ ಮತದಾರರುಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿಸಿ:  ಕೇಂದ್ರ ಸಚಿವರೊಂದಿಗೆ ಸಂಸದ ಶೆಟ್ಟರ ಚರ್ಚೆಅಜಿಂಕ್ಯ ರಹಾನೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿನಿಪ್ಪಾಣಿ ರಾಷ್ಟ್ರೀಯ  ಹೆದ್ದಾರಿ ಕುಸಿತ : ಭಾರಿ ವೈರಲ್