Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಶ್ರೀಗಂಧ ಮರ ಕಳ್ಳತನ

ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲ್ಲೂಕಿನ ಬ್ಯಾಕೂಡ ಗ್ರಾಮದ ಬಿರನಾಳ ಬ್ಯಾಕೂಡ ಮಧ್ಯದಲ್ಲಿರುವ ರಜನೀಕಾಂತ ಯಾದವಾಡೆ ಎಂಬುವವರಿಗೆ ಸೇರಿದ ತೋಟದಲ್ಲಿ ರವಿವಾರ ಬೆಳಗಿನ ಜಾವ ಶ್ರೀಗಂಧದ 2 ಗಿಡಗಳನ್ನು ಕಡಿದು ಕಳವು ಮಾಡಲಾಗಿದೆ.

ಮರುದಿನ ಸೋಮವಾರ ಬೆಳಗಿನ ಜಾವ
ಶ್ರೀಗಂಧದ 1 ಗಿಡವನ್ನು ಕಡಿಯುತ್ತಿದ್ದಾಗ ನಾಯಿಗಳಿಗೆ ಹೆದರಿ 1ಮರ ಕಡಿದು ಬಿಟ್ಟು ಕಳ್ಳರು ಪಲಾಯನ ಮಾಡಿದ್ದಾರೆ.
ರವಿವಾರ ಕಡಿದ ಶ್ರೀಗಂಧದ ಎರಡು ಮರಗಳ ತಿರುಳು (ಹಾಟ್‌ಉಡ್‌) ಬಲಿತ ಎರಡು ಗಿಡಗಳ ಕಾಂಡಗಳನ್ನು ಮಾತ್ರ ಹೊತ್ತೊಯ್ದಿದ್ದಾರೆ.

ಅರಣ್ಯ ಇಲಾಖೆಯವರಿಗೆ ದೂರು ನೀಡಲಾಗಿದ್ದು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಉಮೇಶ ಪ್ರಧಾನಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಶಾನೂರ ನಧಾಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳುವು ಆಗಿರುವ ಶ್ರೀಗಂಧ ಕಾಂಡಗಳ ಮೌಲ್ಯವನ್ನು ಸಾಬೂನು ಮತ್ತು ಮಾರ್ಜಕ ತಯಾರಿಕಾ ಕಾರ್ಖಾನೆ ನಿರ್ಧರಿಸಲಿದೆ.

 

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ರಜನೀಕಾಂತ ಯಾದವಾಡೆ, ‘ 50 ಶ್ರೀಗಂಧದ ಸಸಿ ನಾಟಿ ಮಾಡಲಾಗಿತ್ತು. ಬಹಳಷ್ಟು ಗಿಡಗಳು ಬೆಳವಣಿಗೆಯನ್ನೇ ಹೊಂದಿಲ್ಲ. ಅಲ್ಪಸ್ವಲ್ಪ ಬಲಿತ ಗಿಡಗಳು ಈ ಹಿಂದೆ ಎರಡು ಬಾರಿ ಕಳ್ಳತನವಾಗಿವೆ, ಸಹಜವಾಗಿಯೂ ಒಂದಷ್ಟು ಗಿಡಗಳು ಹಾಳಾಗಿ ಸದ್ಯ 20 ಗಿಡಗಳು ಇವೆ. ಅವುಗಳಲ್ಲಿ ಅರ್ಧದಷ್ಟು ಮಾತ್ರ ಗಂಧದ ತಿರುಳು ಹೊಂದಿವೆ. ಮಾರಾಟ ಮಾಡಲು ಅರಣ್ಯ ಇಲಾಖೆ ಅನುಮತಿಯ ನಿರೀಕ್ಷೆಯಲ್ಲಿದ್ದೆವು. ಹೆಚ್ಚಿನ ತಿರುಳು ಇಲ್ಲದಿದ್ದರೂ ಕಳ್ಳರ ಹಾವಳಿ ಕಾರಣಕ್ಕೆ ಅಲ್ಪಸ್ವಲ್ಪ ಬಲಿತ ಗಿಡಗಳನ್ನೆಲ್ಲ ಕಟಾವು ಮಾಡಬೇಕಾಗಿದೆ’

ಶ್ರೀಗಂಧದ ಗಿಡಗಳನ್ನು ಕಳ್ಳರಿಂದ ರಕ್ಷಿಸುವುದೇ ಅಸಾಧ್ಯವಾಗಿದೆ. ಇದಕ್ಕೆ ಪರಿಹಾರ ಏನೆಂಬುದೇ ಗೊತ್ತಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ರೈತರ ನೆರವಿಗೆ ಬರಬೇಕಿದೆ ಎಂದರು.

ರಜನೀಕಾಂತ ಯಾದವಾಡೆ ತಾಲ್ಲೂಕಿನಲ್ಲಿ ಶ್ರೀಗಂಧ,ಬೆವು,ತೆಗ , ತೆಂಗು, ಮಾವು ಸುಮಾರು ವಿವಿಧ ವರ್ಗಕ್ಕೆ ಸೇರಿದ ಸಾವಿರಾರು ಗಿಡಗಳನ್ನು ನಾಟಿ ಮಾಡಿದವರಲ್ಲಿ ಮೊದಲಿಗರು. 20ವರ್ಷ ಕಳೆದರೂ ಅವರ ತೋಟದಲ್ಲಿನ ಗಿಡಗಳು ಯಾವುದೇ ಮರಗಳನ್ನು ಕಟಾವು ಮಾಡಿಲ್ಲ ಈ ತರಹದ ಕಳ್ಳತನ ಮಾಡಿದರೆ ಹೇಗೆ ಮರಗಳನ್ನು ಸಲಹುವುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿಜೆಪಿಯಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಭವನಕ್ಕೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ಕಾರ್ಯಕರ್ತರನ್ನು ಮಧ್ಯದಲ್ಲೇ  ತಡೆದ ಪೊಲೀಸರು ಪುರಾಣ ಪ್ರಸಿದ್ಧ ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನಕ್ಕೆ ನಿರ್ಬಂಧ   ಗಣೇಶನ ಮೂರ್ತಿ ರಕ್ಷಣೆಗೆ ಈ ಕ್ರಮನೀಟ್‌ ಪೇಪರ್ ಲೀಕ್ ವಿವಾದ ; ಶಿಕ್ಷಣ ಇಲಾಖೆ ಕಾರ್ಯದರ್ಶಿ ಹುದ್ದೆಯಿಂದ ವಿನೀತ್ ಜೋಶಿ ಎತ್ತಂಗಡಿ, ಇಬ್ಬರು ಕಾರ್ಯದರ್ಶಿಗಳ ನೇಮಕಕೇಂದ್ರದ ಭರವಸೆ: ಸೊನಮ್ ವಾಂಗ್ಚೂಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್‌ಗೆ  ಬೆಳಗಾವಿ ಮಾರ್ಗದ ಕೂಗು: ಏನಿದು ಹೊಸ ತಿರುವು?ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಇಂದುಪ್ರಬಲ ಎಲ್ ನಿನೋ’ ನಡುವೆಯೂ ಭಾರತದ ಶೇ.95 ಭಾಗ ಮೋಡಗಳಿಂದ ಆವೃತ : ಮಳೆಗಾಲದ ಹಿಂದಿನ ವೈಜ್ಞಾನಿಕ ರಹಸ್ಯವೇನು ?ಮಳೆರಾಯನ ಆರ್ಭಟಕ್ಕೆ ತತ್ತರಿಸಿದ ಗುಜರಾತ್: ಹಲವು ನಗರಗಳು ಜಲಾವೃತ, ಗ್ರಾಮಗಳ ಸಂಪರ್ಕ ಕಡಿತ, ನೂರಾರು ಜನರ ಸ್ಥಳಾಂತರರಾಜಕೀಯ ಪ್ರಚೋದನೆಗೆ ವಿದ್ಯಾರ್ಥಿಗಳು ಬಲಿಯಾಗಬೇಡಿ: ಬಿಜೆಪಿ ಮುಖಂಡ ಕಿರಣ ಜಾಧವನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ