Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಗೃಹಲಕ್ಷ್ಮಿ ಯೋಜನೆ’ಗೆ ಸೌಲಭ್ಯ ಪಡೆಯಲು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು

Advertisement

ಬೆಂಗಳೂರು: ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಗ್ಯಾರಂಟಿ ಯೋಜನೆಗಳ ಲಾಭ ಅನರ್ಹರಿಗೂ ತಲುಪುತ್ತಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ನಿರ್ಧಾರಕ್ಕೆ ಮುಂದಾಗಿದೆ.
ಶನಿವಾರ ವಿಧಾನಸೌಧದಲ್ಲಿ ನಡೆಸಿದರಾಜ್ಯದ ಎಲ್ಲ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಡಿಎಫ್‌ಒಗಳ ಜೊತೆಗೆ ಸಭೆ ನಡೆಸಿದರು. ಸುದೀರ್ಘ ಏಳು ಗಂಟೆ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಅನೇಕ ಸೂಚನೆಗಳನ್ನೂ ನೀಡಿದರು. ನಂತರ ಮಾತನಾಡಿದ ಅವರು ಈ ವಿಷಯ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೈಜತೆ ಪರಿಶೀಲಿಸಿದಾಗ ಅನರ್ಹರಿಗೆ ನೂರಾರು ಕೋಟಿ ರೂ. ತಲುಪಿರುವುದು ಪತ್ತೆಯಾಗಿದೆ. ಸುಮಾರು 100 ಕೋಟಿ ರೂ. ಹಣ ಮೃತಪಟ್ಟವರ ಖಾತೆಗೆ ಹೋಗಿದೆ.
ಯಾರದ್ದೋ ಮೊಬೈಲ್‌ ಸಂಖ್ಯೆ ನೀಡಿ ನೆರವು ಪಡೆಯುತ್ತಿರುವುದು, ಮೃತಪಟ್ಟವರ ಹೆಸರಿನಲ್ಲಿ ಪಡೆಯುತ್ತಿರುವುದು, ಒಂದೇ ಕುಟುಂಬದಲ್ಲಿ ಹಲವರು ನೆರವು ಪಡೆಯುತ್ತಿರುವುದು ಕಂಡುಬಂದಿದೆ. ಹೀಗಾಗಿ ಅರ್ಹ ಫಲಾನುಭವಿಗಳಿಗೆ ನೆರವು ಸಿಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಹೊಸ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಅವರು ಹೇಳಿದರು.

ಡಿಸಿ, ಜಿಪಂ ಸಿಇಒಗಳು ಸೇರಿದಂತೆ ಇತರೆ ಅಧಿಕಾರಿಗಳು, ಗ್ಯಾರಂಟಿ ಸಮಿತಿಗಳ ಸದಸ್ಯರು ಶೀಘ್ರವೇ ಅರ್ಹರಿಗೆ ಅರ್ಜಿಗಳನ್ನು ತಲುಪಿಸುವ ಕೆಲಸ ಮಾಡಲಿದ್ದಾರೆ. ಭಾವಚಿತ್ರ ಸಹಿತವಾಗಿ ವಿವರಗಳನ್ನು ದಾಖಲಿಸಿ ಸಲ್ಲಿಸಬೇಕು. ಈ ಸಂಬಂಧ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಗಿದೆ,” ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯೂ ಇದೇರೀತಿ ದುರ್ಬಳಕೆಯಾಗುತ್ತಿದೆ. ಒಂದೇ ಕಟ್ಟಡದಲ್ಲಿ 5-6 ವಿದ್ಯುತ್‌ ಸಂಪರ್ಕ ಪಡೆದಿರುವುದುಕಂಡುಬಂದಿದೆ, ನೆಲಮಹಡಿಯ ಮಳಿಗೆ ಹಾಗೂ ಮೊದಲ ಮಹಡಿಯ ವಾಸದ ಮನೆಗೂ ಗೃಹಜ್ಯೋತಿ ಸೌಲಭ್ಯ ಪಡೆಯುತ್ತಿರುವುದು ಕಂಡುಬಂದಿದೆ. ಹೀಗಾಗಿ ಸದ್ಯ ಶೂನ್ಯ ಮೊತ್ತದ ಬಿಲ್‌ ನೀಡಲಾಗುತ್ತಿದ್ದು, ಸದ್ಯದಲ್ಲೇ ಗುರುತಿನ ಚೀಟಿ ವಿತರಿಸಲಾಗುವುದು. ದುಬಾರಿ ಬೆಲೆಯಲ್ಲಿ ಖರೀದಿಸಿ ಉಚಿತವಾಗಿ ಪೂರೈಸಲಾಗುತ್ತಿದೆ. ವಾಸದ ಮನೆಗಳಿಗಷ್ಟೇ ಉಚಿತ ಸೌಲಭ್ಯವಿದೆಯೋ ಹೊರತು ವ್ಯಾಪರ ಉದ್ದೇಶಕ್ಕೆ ಇಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೇಣುಕಾಸ್ವಾಮಿ ಕೇಸ್ ಮಾದರಿಯಲ್ಲೇ ಬಳ್ಳಾರಿಯಲ್ಲಿ ಭೀಕರ ಹತ್ಯೆ! ಹೆಂಡತಿಗೆ ಕಿರುಕುಳ ನೀಡಿದ್ದ ಯುವಕನಿಗೆ ಚಟ್ಟ ಕಟ್ಟಿದ ಪತಿ: ದಂಪತಿ ಸೇರಿ ಮೂವರ ಬಂಧನಗೃಹಲಕ್ಷ್ಮಿ ಯೋಜನೆ’ಗೆ ಸೌಲಭ್ಯ ಪಡೆಯಲು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕುರಾಜ್ಯದ ಕೆಲವೆಡೆ ವರುಣನ ಅರ್ಭಟಸಿಎಂ ಬೇಟಿಯಾದ ಬೆಳಗಾವಿ ನಿಯೋಗಸಿಎಂ ಭೇಟಿಯಾದ ಸತೀಶ ಜಾರಕಿಹೊಳಿಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ:  ವದಂತಿಗಳಿಗೆ ಕಿವಿಗೊಡಬೇಡಿ- ಸಿಎಂಕಲುಷಿತ ಆಹಾರ ಸೇವಿಸಿದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ: ರಾತ್ರಿ ಹೊತ್ತು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಚತುಷ್ಪಥ ರಸ್ತೆಯ ಕಾಮಗಾರಿ ವೀಕ್ಷಿಸಿದ ಸಂಸದ ಶೆಟ್ಟರ್ರಾಜ್ಯ ಪ್ರಾಸಿಕ್ಯೂಟರ್ ಆಗಿ ಜಗದೀಶ ನೇಮಕರಾಜ್ಯ ಪ್ರಾಸಿಕ್ಯೂಟರ್ ಆಗಿ ಜಗದೀಶ ನೇಮಕ