Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರಾಜಾ ಲಖಮಗೌಡರು ಶೈಕ್ಷಣಿಕ ಚಿಂತನೆ ಕಳಕಳಿ ಉಳ್ಳವರಾಗಿದ್ದರು : ಗಜಾನನ ನಾಯಕ

ಬೆಳಗಾವಿ : ರಾಜಾ ಲಖಮಗೌಡರು ಶೈಕ್ಷಣಿಕ ಚಿಂತನೆ, ಸಾಮಾಜಿಕ ಕಳಕಳಿ ಉಳ್ಳವರಾಗಿದ್ದರು. ಸಮಾಜಕ್ಕೆ ಸಾಂಸ್ಕೃತಿಕವಾಗಿಯೂ ಅನೇಕ ಕೊಡುಗೆಗಳನ್ನು ನೀಡಿದ್ದಾರೆಂದು ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಶಾಸ್ತ್ರೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಗಜಾನನ ನಾಯಕ ಹೇಳಿದರು.

ನಗರದ ಕೆಎಲ್ಇ. ಸಂಸ್ಥೆಯ, ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಸರ್ ಸಿ ವಿ ರಾಮನ್ ಸಭಾಂಗಣದಲ್ಲಿ ಬುಧವಾರ ನಡೆದ ಸರದಾರ ರಾಜಾ ಲಖಮಗೌಡರ 163 ನೇ ಜಯಂತಿಯಲ್ಲಿ ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ಮಹಾದಾನಿಗಳಲ್ಲಿ ಶ್ರೇಷ್ಠ ಕೊಡುಗೈ ದಾನಿಗಳು ರಾಜಾ ಲಖಮಗೌಡರು ಒಬ್ಬರು.ದಾನದ ಪರಂಪರೆಯ ಸಫಲಗೊಳಿಸಿದವರು.ದಾನ ಕನ್ನಡ  ನೆಲದ ಸಂಸ್ಕೃತಿ ಮೌಲ್ಯವಾಗಿದೆ.ಬೆಳಗಾವಿ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳನ್ನು ರೂಪಿಸಿದವರು. ಅನೇಕ ಸಾಮಾಜಿಕ ಮತ್ತು ಧಾರ್ಮಿಕ ಮಠಮಾನ್ಯಗಳಿಗೆ ದೇಣಿಗೆ ನೀಡಿದವರು. ಜಾತಿ ಮತ ಪಂಥ ಮೀರಿ  ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ  ಸಹಾಯ ನೀಡಿದ್ದಾರೆ. ಹಿಂದೂ ಹಾಗೂ ಮುಸ್ಲಿಂ ಹಬ್ಬಗಳಿಗೂ ಪ್ರೊತ್ಸಾಹ ನೀಡಿದ್ದಾರೆ.ಅಂದಿನ ಕಾಲದಲ್ಲಿ ರೈತರ ಕೃಷಿಗೆ ಬೆನ್ನೆಲುಬಾಗಿ ನಿಂತವರು. ವ್ಯಕ್ತಿ ಹಿತಕ್ಕಿಂತ ಸಮಾಜದ ಹಿತ ಮುಖ್ಯವೆಂದು ನಂಬಿದವರು. ಅನೇಕ ಮೌಲಿಕ ಗ್ರಂಥಗಳನ್ನು ಅಧ್ಯಯನ ಮಾಡಿ ವೈಚಾರಿಕ ಪ್ರಜ್ಞೆ ಹೊಂದಿದವರು. ಅನೇಕತೆಯಲ್ಲಿ ಏಕತೆ ಮನೋಭಾವನೆ ಉಳ್ಳವರು.ಶೈಕ್ಷಣಿಕ ಕ್ರಾಂತಿ  ಮುನ್ನುಡಿಗೆ  ಕಾರಣಿಕರ್ತ ರಾದವರು.
ವಂಟಮೂರಿ ಸಂಸ್ಥಾನದ ಶ್ರೇಷ್ಠ ವತನದಾರರಾಗಿದ್ದರು. ನಾಡಿನ ಅನೇಕ ಸಂಘ ಸಂಸ್ಥೆಗಳಿಗೆ ಮುಕ್ತ ಮನಸ್ಸಿನಿಂದ ಆರ್ಥಿಕ ಸಹಾಯ ನೀಡಿದವರೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಲ್.ವಿ. ದೇಸಾಯಿ ಮಾತನಾಡಿ, ರಾಜಾ ಲಖಮಗೌಡರು ಶರಣ ಸಂಸ್ಕೃತಿ ಉಳ್ಳವರಾಗಿದ್ದರು. ತಮ್ಮ ವಾಡೆಯಲ್ಲಿ ಜನ ಸಾಮಾನ್ಯರ ನ್ಯಾಯ ನಿರ್ಣಯ ಗಳನ್ನು ನೀಡುತ್ತಿದ್ದರು. ವೀರಶೈವ ಪುಣ್ಯಪುರುಷರಲ್ಲಿ  ಬ್ಯಾರಿಸ್ಟರ್ ಪದವಿಯನ್ನು ಪಡೆದ ಮೊದಲಿರಾದವರು. ಎಲ್ಲಾ ಸಮಾಜ ಜನತೆಯನ್ನು ಸಮಾನತೆಯಿಂದ ನೋಡಿಕೊಳ್ಳುತ್ತಿದರು.ಅಂದಿನ ಕಾಲದ ಸರಕಾರಿ ಸಂಸ್ಥೆಗಳಿಗೂ ಧನಸಹಾಯ ನೀಡಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ರಾಜಾ ಲಖಮ ಗೌಡರ ಆದರ್ಶ ಮೌಲ್ಯಗಳನ್ನು ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ರಾಜಾ ಲಖಮಗೌಡರ 163 ನೇ ಜಯಂತಿ ನಿಮಿತ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕೆ ಎಲ್ ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ವೈದ್ಯ ತಂಡದವರಿಂದ ರಕ್ತದಾನ ಶಿಬಿರ ಆಯೋಜಿತಗೊಂಡಿತ್ತು. ರಕ್ತದಾನ  ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ರಕ್ತದಾನ ಮಾಡಿದರು. ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಸೈನಿಕರನ್ನು ಸನ್ಮಾನಿಸಿ ಲಾಯಿತು

ಸ್ನೇಹಾ  ಹಾಗೂ ಸ್ಪೂರ್ತಿ ಪ್ರಾರ್ಥಿಸಿದರು.
ಪ್ರಾಚಾರ್ಯೆ ಡಾ.  ಜ್ಯೋತಿ ಎಸ್ ಕವಳೇಕರ  ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.ಪ್ರೊ.ಮಹಾದೇವಿ ಹುಣಸಿಬೀಜ ಪರಿಚಯಿಸಿದರು.  ಎಸ್ ಬಿ ಬನ್ನಿಮಟ್ಟಿ ವಂದಿಸಿದರು, ಪ್ರೊ   ಪೂಜಾ ಮೆಳವಂಕಿ ನಿರೂಪಿಸಿದರು. ಮಹಾವಿದ್ಯಾಲಯದ  ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ವಿಜಯ ಪಾಟೀಲ, ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಡಾ.ಸಂದೀಪ ಜವಳಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿನಯ ಕುಮಾರ ಎಂ, ಎನ್‌ಸಿಸಿ ಅಧಿಕಾರಿ ಡಾ. ಶಿವಾನಂದ ಬುಲಬುಲೆ ಮತ್ತು ಪ್ರೊ. ಎಚ್ ಎನ್ ಬನ್ನೂರ ಹಾಗೂ ಎನ್ ಎಸ್ ಎಸ್ ಅಧಿಕಾರಿ ಪ್ರೊ. ಎಸ್ ಬಿ ತಾರದಾಳೆ, ವೈಆರ್ ಸಿ ಸಂಯೋಜಕ ಪ್ರೊ. ಪವಿತ್ರಾ ಸಮಾಜೆ ಮತ್ತು ಕಾಲೇಜಿನ ಎಲ್ಲಾ ಸಿಬ್ಬಂದಿಯವರು ಹಾಗೂ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಹುಕೋಟಿ ವಂಚನೆ : ನೀಲಣ್ಣವರ, ಆಪ್ತರ ನಿವಾಸಗಳ ಮೇಲೆ ಇಡಿ ದಾಳಿSIR : ಗಣತಿ ನಮೂನೆ ಸಲ್ಲಿಸಲು 17 ರವರೆಗೆ ಅವಕಾಶಈ ನಿಗೂಢ ಬಾವಿಯಲ್ಲಿ ಮತ್ತೆ ಅಚ್ಚರಿ ; ಸಮುದ್ರದ ಅಲೆಯಂತೆ ತನ್ನಷ್ಟಕ್ಕೆ ತಾನೇ ಏರಿಳಿಯುವ ನೀರು..!ವಿಭಾಗೀಯ ಕಚೇರಿಗಳನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ಕ್ರಮ ಕೈಕೊಂಡವರು ಅರಸುಮದುವೆ ಮನೆಯಲ್ಲಿ ಪೊಲೀಸ್ ಅಧಿಕಾರಿ ಹತ್ಯೆ ; ಹೆಸರು ಬದಲಿಸಿಕೊಂಡು ನಕಲಿ ವೈದ್ಯನಾಗಿ ಬದುಕಿದ್ದ ಆರೋಪಿ 28 ವರ್ಷಗಳ ನಂತರ ಸೆರೆ…!ಕರ್ನಾಟಕದ 4 ಜಿಲ್ಲೆಗಳಲ್ಲಿ ಅತಿ ಭಾರಿ ಮಳೆ ಮುನ್ಸೂಚನೆ ; ಆರೆಂಜ್‌ ಅಲರ್ಟ್‌ ಘೋಷಣೆಪುತ್ರಿಯರಿಗಾಗಿ ಜೀವನ ಮುಡಿಪಾಗಿಟ್ಟಿದ್ದ ತಂದೆ ವೃದ್ಧಾಶ್ರಮದಲ್ಲಿ ನಿಧನ ; ₹5100 ಕಳುಹಿಸಿ ವಿಡಿಯೊ ಕಾಲ್‌ನಲ್ಲಿ ಕೊನೆ ವಿದಾಯ ಹೇಳಿದ ಪುತ್ರಿಯರು...!ಯುವಜನತೆ  ಪಠ್ಯ ಮತ್ತು ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ಕುಲಪತಿ ತ್ಯಾಗರಾಜಗುರಿ, ಶಿಸ್ತು ಮತ್ತು ಸಾಧನೆಯಿಂದ ಯಶಸ್ಸು ಸಾಧ್ಯ: ಡಾ. ಸಿದ್ದು ಹುಲ್ಲೊಳ್ಳಿ  ಲಕ್ಷ್ಮೀ ಇದ್ದರೆ DK ಸಂಪುಟಕ್ಕೆ ಶೋಭೆ:  ಹೆಬ್ಬಾಳ್ಕರ್ ಯಾಕೆ ಸಂಪುಟಕ್ಕೆ ಅತ್ಯಂತ ಅವಶ್ಯಕ ಗೊತ್ತೇ ? ಬೆಳಗಾವಿಗೆ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದ ಮಹಾನಾಯಕಿ