ನವದೆಹಲಿ: ಜೂನ್ 4ರ ಸುಮಾರಿಗೆ ನೈರುತ್ಯ ಮುಂಗಾರು ಕೇರಳಕ್ಕೆ ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಮುನ್ಸೂಚನೆ ನೀಡಿದೆ.
ವಾಡಿಕೆಯಂತೆ ಜೂನ್ 1ರಂದು ಕೇರಳಂಗೆ ಮುಂಗಾರು ಮಳೆ ಪ್ರವೇಶವಾಗುತ್ತದೆ. ಇದರೊಂದಿಗೆ ಮಾನ್ಸೂನ್ ಋತು (ಜೂನ್-ಸೆಪ್ಟೆಂಬರ್) ಆರಂಭವಾಗುತ್ತದೆ.
ಅರಬ್ಬಿ ಸಮುದ್ರ, ಲಕ್ಷದ್ವೀಪ, ಕೇರಳಂ ಮತ್ತು ತಮಿಳುನಾಡಿನತ್ತ ಮುಂಗಾರು ಪ್ರವೇಶಕ್ಕೆ ಬೇಕಾದ ಅನುಕೂಲಕರವಾದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಹಿಂದೆ ಮೇ 26ರಂದು ಕೇರಳಂಗೆ ಮುಂಗಾರು ಪ್ರವೇಶಿಸಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿತ್ತು. ಆದರೆ ವಿಳಂಬವಾಗಿತ್ತು.
ಈ ಋತುವಿನಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆಯಾಗಲಿದೆ ಎಂದು ಹೇಳಿದೆ.
