Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಿದ್ಯಾರ್ಥಿಗಳು ಗಣಕೀಕೃತ ಗ್ರಂಥಾಲಯ ಸದುಪಯೋಗ ಪಡಿಸಿಕೊಳ್ಳಬೇಕು: ಡಾ.ಪ್ರವೀಣ ಹುಲ್ಲೋಳಿ

ಬೆಳಗಾವಿ : ನಗರದ ಕೆಎಲ್ಇ ಸಂಸ್ಥೆಯ,ರಾಜಾ  ಲಖಮಗೌಡ ವಿಜ್ಞಾನ (ಸ್ವಾಯತ್ತ ) ಮಹಾವಿದ್ಯಾಲಯದಲ್ಲಿ ಕಾಲೇಜು ಗ್ರಂಥಾಲಯ ಮಾಹಿತಿ ಕೇಂದ್ರದ ಮತ್ತು ಕಾಲೇಜಿನ ಆಂತರಿಕ ಗುಣಮಟ್ಟ ಕೋಶ ಇವುಗಳ ಸಂಯುಕ್ತ ಆಶ್ರಯದಲ್ಲಿ ಆನ್ಲೈನ್ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮ ಗುಣಮಟ್ಟದ ಸಂಶೋಧನ ಪ್ರಬಂಧಗಳನ್ನು ಬರೆಯುವುದು ಹೇಗೆ ?ಎಂಬ ವಿಷಯದ ಮೇಲೆ ಒಂದು ದಿನದ ಉಪನ್ಯಾಸವನ್ನು ದಿನಾಂಕ  15/07/2026 ರಂದು  ಮಧ್ಯಾಹ್ನ 3:00 ಗಂಟೆಗೆ  ಮಹಾವಿದ್ಯಾಲಯದ ಸರ್ ಸಿ ವಿ ರಾಮನ್ ಸಭಾಂಗಣದಲ್ಲಿ  ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. 

 
ಮುಖ್ಯ ಅತಿಥಿಗಳಾಗಿ  ಕೆ ಎಲ್ ಎಸ್ ಸಂಸ್ಥೆ ಯ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಮುಖ್ಯ ಗ್ರಂಥಾಲಯದ ಮುಖ್ಯಸ್ಥ ಡಾ. ಪ್ರವೀಣ ಹುಲ್ಲೋಳಿ ಮಾತನಾಡಿ,   ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯ ಸದುಪಯೋಗ ಪಡೆದುಕೊಳ್ಳಬೇಕು.ಸಂಶೋಧನೆ ಮಾಡುವ  ಸಂದರ್ಭದಲ್ಲಿ  ಗಣಕೀಕೃತ  ಗ್ರಂಥಾಲಯ ಮೌಲಿಕ ಕೃತಿಗಳನ್ನು ಉಪಯೋಗಿಸಿ ಕೊಳ್ಳಬೇಕು. ಇ  ಪುಸ್ತಕ ಗಳನ್ನು ಪರಿಚಯ ಮಾಡಿಕೊಳ್ಳಬೇಕು.  ಸಂಶೋಧನೆ  ಕೃತಿ ರಚಿಸುವಾಗ ಅನೇಕ ಲೇಖನಗಳನ್ನು ಬರೆಯಬೇಕು. ಸಾರಲೇಖನ ಸರಿಯಾಗಿ ತಯಾರಿಸಬೇಕು. ಗ್ರಂಥದ ಕೊನೆಯಲ್ಲಿ ಅಡಿಟಿಪ್ಪಣಿಗಳನ್ನು ನೀಡಬೇಕು. ಸಂಶೋಧನೆ ಮಾಡುವಾಗ ಯಾವುದೇ ರೀತಿಯ ದೋಷಗಳನ್ನು ಮಾಡಬಾರದು. ಅಂಕಿ ಅಂಶಗಳು ತಪ್ಪಾಗಿ ನಮೂದಿಸಿ ಬಾರದೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಜೆ ಎಸ್ ಕವಳೇಕರ ಮಾತನಾಡಿ , ಪ್ರಸ್ತುತ  ದಿನಮಾನದಲ್ಲಿ ಸಂಶೋಧರ ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ಮಾಡಬೇಕು. ಹೊಸ ಹೊಸ ಹೊಸ ವಿಷಯಗಳಲ್ಲಿ ಗುಣಾತ್ಮಕವಾದ ಲೇಖನವನ್ನು ರಚಿಸಬೇಕು. ಮಾರ್ಗದರ್ಶಕರ ಅಣತಿಯಂತೆ ಮಹಾಪ್ರಬಂಧಗಳನ್ನು ಬರೆಯಬೇಕು.
ಕರೆ ನೀಡಿದರು.
 
 ಅರ್ಪಿತಾ  ಕಾರಜೋಳ ಹಾಗೂ ಸಂಗಡಿಗರು ಪ್ರಾರ್ಥಸಿದರು. ಡಾ.ಜ್ಯೋತಿ ಎಸ್ ಕವಳೇಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿನಾಯಕ ಸವಟಗಿ ಅತಿಥಿಗಳನ್ನು  ಪರಿಚಯಿಸಿದರು.ಡಾ. ವಿನಯ ಕುಮಾರ ಎಂ   ವಂದಿಸಿದರು. ಪ್ರೊ.  ಅಲ್ಪಾಜ  ಬಾಗವಾನ  ನಿರೂಪಿಸಿದರು. 
 
ಸಮಾರಂಭದಲ್ಲಿ  ಮಹಾವಿದ್ಯಾಲಯ ಎಲ್ಲಾ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇಂದ್ರ ಸರ್ಕಾರದ ‘ವಂದೇ ಮಾತರಂ’ ಸಂಪೂರ್ಣ ಚರಣ ನಿಯಮಕ್ಕೆ ಕಾಂಗ್ರೆಸ್ ಅಪಸ್ವರ ; ಎರಡು ಚರಣ ಮಾತ್ರ ಹಾಡಲು ನಿರ್ಧಾರ20 ರೂ. ಲಂಚದ ಆರೋಪಕ್ಕೆ 30 ವರ್ಷಗಳ ಕಾನೂನು ಹೋರಾಟ : ಸುಪ್ರೀಂಕೋರ್ಟಿನಿಂದ ಇಬ್ಬರು ಸರ್ಕಾರಿ ನೌಕರರ ಖುಲಾಸೆಕೇಂದ್ರ ಸರ್ಕಾರದ ‘ವಂದೇ ಮಾತರಂ’ ಸಂಪೂರ್ಣ ಚರಣ ನಿಯಮಕ್ಕೆ ಕಾಂಗ್ರೆಸ್ ಅಪಸ್ವರ ; ಎರಡು ಚರಣ ಮಾತ್ರ ಹಾಡಲು ನಿರ್ಧಾರಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಜನತೆಗೆ ಸಿಹಿ ಸುದ್ದಿಪ್ರಿಯಕರನ ಜೊತೆ ಸೇರಿ ಗಂಡ, 4 ವರ್ಷದ ಮಗನನ್ನು ಉಸಿರುಗಟ್ಟಿಸಿ ಕೊಂದ ಪತ್ನಿಹನೂರು ಗುಂಡಿನ ಚಕಮಕಿ ಪ್ರಕರಣ : ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಬದುಕುಳಿದ ವ್ಯಕ್ತಿ ಹೇಳಿದ್ದೇನು ?ಹಾರ್ಮುಜ್ ಜಲಸಂಧಿ ‘ಅಮೆರಿಕದ ಹೊಸ ಭೂಪ್ರದೇಶ’ ಎಂದು ಘೋಷಿಸಿ ನಕ್ಷೆ ಹಂಚಿಕೊಂಡ ಟ್ರಂಪ್‌ಎರಡು ಬಾರಿ ಕಚ್ಚಿದ ವಿಷಪೂರಿತ ಹಾವು ; ತೀವ್ರ ಅಸ್ವಸ್ಥಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ ಜೀವ ಉಳಿಸಲು ನೆರವಾದ ಎಐ(AI)ಎರಡು ಬಾರಿ ಕಚ್ಚಿದ ವಿಷಪೂರಿತ ಹಾವು ; ತೀವ್ರ ಅಸ್ವಸ್ಥಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ ಜೀವ ಉಳಿಸಲು ನೆರವಾದ ಎಐ(AI)ಜಾವೆಲಿನ್ ಎಸೆತದಲ್ಲಿ  ಜಿ. ಎ. ಹೈಸ್ಕೂಲ್ ವಿದ್ಯಾರ್ಥಿ ವಿಶಾಲ್ ರಾಠೋಡ ದಾಖಲೆ ಸಾಧನೆ: ರಾಷ್ಟ್ರಮಟ್ಟಕ್ಕೆ ಆಯ್ಕೆ